ಕೂಡಿಗೆ, ಆ. ೩: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈ ಸಾಲಿನಲ್ಲಿ ಅರೆ ಮಲೆನಾಡು ಪ್ರದೇಶವಾದ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಾಗಿ ಬೆಳೆಯುವ ಮೆಕ್ಕೆಜೋಳದ ಬೆಳೆಗೆ ಕೊಳೆರೋಗದ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತಿವೆ.

ಕುಶಾಲನಗರ ಹೋಬಳಿ ವ್ಯಾಪ್ತಿಯ ೧೦ ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿದಂತೆ ೫೦ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಮಳೆಯನ್ನೇ ಅವಲಂಭಿಸಿ ಮೆಕ್ಕೆಜೋಳದ ಬಿತ್ತನೆಯನ್ನು ಮಾಡಲಾಗಿದೆ. ಮೆಕ್ಕೆಜೋಳವು ಎರಡು ಅಡಿಗಳಷ್ಟು ಎತ್ತರದವರೆಗೆ ಬೆಳೆದಿದ್ದು, ಕಳೆದ ಒಂದು ತಿಂಗಳಿನಿAದ ಸುರಿಯುತ್ತಿರುವ ಮಳೆಯಿಂದಾಗಿ ಯಾವುದೇ ರೀತಿಯ ಬೇಸಾಯ ಮಾಡಲು ಸಾಧ್ಯವಾಗಿಲ್ಲ.

ಮೆಕ್ಕೆಜೋಳಕ್ಕೆ ಕೊಳೆರೋಗ ಮತ್ತು ಬೆಂಕಿರೋಗ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ರೈತರು ರೋಗ ನಿರೋಧಕ ಔಷಧಿಯನ್ನು ಸಿಂಪಡಣೆ ಮಾಡಲು ತೊಡಗಿದ್ದಾರೆ.