ಮಡಿಕೇರಿ, ಆ. ೩: ಕೊಡಗು ಜಿಲ್ಲಾ ಸಿರಿಗನ್ನಡ ವೇದಿಕೆಯ ಮಹಿಳಾ ಘಟಕದಿಂದ ರಾಜ್ಯಮಟ್ಟದ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ.

ಸ್ಪರ್ಧೆಯ ನಿಯಮಗಳು : ಕನ್ನಡ ಭಾವಗೀತೆಗಳು ಅಥವಾ ಜಾನಪದ ಗೀತೆಗಳು, ೧೫ ವರ್ಷದ ಮೇಲ್ಪಟ್ಟು, ವಯಸ್ಸಿನ ಮಿತಿ ಇರುವುದಿಲ್ಲ. ಹಾಡನ್ನು ಮೂರು ನಿಮಿಷದ ಒಳಗಾಗಿ ಮುಗಿಸಬೇಕು. ಯಾವುದೇ ಕರೋಕೆ ಮ್ಯೂಸಿಕ್ ಆ್ಯಪ್ ಬಳಸುವಂತಿಲ್ಲ ಮತ್ತು ಹಾಡಿನ ವೀಡಿಯೋವನ್ನು ಎಡಿಟಿಂಗ್ ಮಾಡುವಂತಿಲ್ಲ. ಸ್ಪರ್ಧಿಗಳು ಹಾಡುವಾಗ ತಮ್ಮ ಹೆಸರು ಹಾಗೂ ಕೊಡಗು ಸಿರಿಗನ್ನಡ ವೇದಿಕೆಯ ವತಿಯಿಂದ ಎಂದು ಸೇರಿಸಿಕೊಳ್ಳಬೇಕು. ತಲಾ ಒಂದೊAದು ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನದೊಂದಿಗೆ ಪ್ರಶಸ್ತಿ ಪತ್ರಗಳನ್ನು ಆನ್‌ಲೈನ್ ಮೂಲಕ ನೀಡಲಾಗುವುದು. ಆಯ್ಕೆಯಾದ ೧೫ ಹಾಡುಗಳಿಗೆ ಆನ್‌ಲೈನ್ ಮೂಲಕ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಹಾಡಿನ ವೀಡಿಯೋವನ್ನು ಕಳುಹಿಸಲು ಕೊನೆಯ ದಿನಾಂಕ ೧೦.೦೮.೨೦೨೪.

ಹಾಡಿನ ವೀಡಿಯೋವನ್ನು ಕಳುಹಿಸಬೇಕಾದ ಮೊಬೈಲ್ ಸಂಖ್ಯೆ : ೯೫೩೫೫೯೪೩೩೩. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: ೯೫೯೧೩೬೬೨೯೬, ೯೫೩೫೫೯೪೩೩೩ನ್ನು ಸಂಪರ್ಕಿಸಬಹುದು.

ಸ್ಪರ್ಧೆಯಲ್ಲಿ ಹಾಡಿರುವ ಹಾಡಿನ ವೀಡಿಯೋವನ್ನು ಫಲಿತಾಂಶ ಬರುವವರೆಗೆ ಎಲ್ಲಿಯೂ ಪ್ರಕಟಿಸುವಂತಿಲ್ಲ ಎಂದು ಅಧ್ಯಕ್ಷೆ ಸಿರಿಗನ್ನಡ ಮಹಿಳಾ ಘಟಕದ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ ಹಾಗೂ ಕಾರ್ಯದರ್ಶಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ತಿಳಿಸಿದ್ದಾರೆ.