ಐಗೂರು, ಆ. ೩: ಜಿಲ್ಲೆಯಲ್ಲಿ ದಿನ ಬೆಳಗಾದರೆ ಕೆಲವರು ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಜಿಲ್ಲೆಯ ಇಡೀ ಸುದ್ದಿ ಸಮಾಚಾರಗಳನ್ನು ಹೊತ್ತು ತರುವ ಪತ್ರಿಕಾ ವಾಹನವನ್ನು ಬೆಳಗಿನ ಜಾವ ಕಾಯುತ್ತಿರುವ ಪತ್ರಿಕಾ ವಿತರಣಾಗಾರರ, ನಿತ್ಯದ ಪತ್ರಿಕಾ ಓದುಗರ, ದೃಶ್ಯಗಳು ಐಗೂರು, ಹೊಸತೋಟ, ಕುಂಬೂರು ಮತ್ತು ಮಾದಾಪುರ ಭಾಗಗಳಲ್ಲಿ ಕಂಡುಬರುತ್ತದೆ. ತಾರೀಕು ೨.೦೮.೨೦೨೪ರ ಜಿಲ್ಲೆಯ ಶಕ್ತಿ ಪತ್ರಿಕೆಯ ಮುಖಪುಟದಲ್ಲಿ ಮೊದಲ ವರದಿಯಾಗಿ ಕಂಡು ಬಂದ ೧೦೪ ಸಂಭವನೀಯ ಭೂಕುಸಿತ ಪ್ರವಾಹ ಪ್ರದೇಶಗಳ ಗುರುತು, ೨,೯೯೫ ಕುಟುಂಬಗಳ ಸ್ಥಳಾಂತರ, ೯೫ ಕಡೆಗಳಲ್ಲಿ ಕಾಳಜಿ ಕೇಂದ್ರ, ಆಗಸ್ಟ್ ತಿಂಗಳ ಆತಂಕ ಎಂಬ ವರದಿಯನ್ನು ಓದುತ್ತಿದ್ದ ಓದುಗರು ಬೆಳಗಿನಿಂದಲೇ ಆತಂಕದ ಚರ್ಚೆಯಲ್ಲಿ ತೊಡಗಿದ್ದರು. ಇಂದು ಪತ್ರಿಕೆಗಾಗಿ ಮುಗಿಬೀಳುವ ದೃಶ್ಯಗಳು ಅಲ್ಲಲ್ಲಿ ಕಂಡುಬAತು.
ಕೆಲವರು ತಮ್ಮ ದೂರದ ಸಂಬAಧಿಕರಿಗೆ ವಿಷಯಗಳನ್ನು ದೂರವಾಣಿ ಮುಖಾಂತರ ತಿಳಿಸಿದ್ದು, ಇನ್ನೂ ಕೆಲವರಿಗೆ ದೂರದ ಬೆಂಗಳೂರು, ಮೈಸೂರು ನಗರಗಳಲ್ಲಿ ಉದ್ಯೋಗದಲ್ಲಿರುವ ತಮ್ಮ ಮಕ್ಕಳಿಂದ ದೂರವಾಣಿ ಕರೆಗಳ ಮಹಾಪೂರವೇ ಹರಿದು ಬರುತ್ತಿತ್ತು. ಪತ್ರಿಕಾ ಸುದ್ದಿಯನ್ನು ಓದಿದ ಎಲ್ಲರ ಮನದಲ್ಲೂ ಮೂಡಿಬರುತ್ತಿದ್ದ ೨೦೧೮ರ ಸಮೀಪದ ಕಿರಗಂದೂರು ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಗುಡಿಬೆಟ್ಟ ಕುಸಿತದ ದೃಶ್ಯವು ಕಣ್ಣ ಮುಂದೆ ಕಂಡAತಹ ದೃಶ್ಯಗಳನ್ನು ಚರ್ಚಿಸುತ್ತಿದ್ದರು.. ತಮ್ಮ ತಮ್ಮ ಗ್ರಾಮಗಳ ಸುತ್ತಮುತ್ತ ಇರುವ ಹಾನಗಲ್ಲು, ಐಗೂರು, ಕೆಳಗಳ್ಳಿ, ಊರು ಬೆಟ್ಟ, ಮಕ್ಕಳಗುಡಿ ಬೆಟ್ಟ, ಶಾಂತಳ್ಳಿ, ಹಾಲೇರಿ, ಮಾದಾಪುರದ ಹಾಡಗೇರಿ, ಜಂಬೂರು, ಮೂವತ್ತೊಕ್ಲು, ಕಿರುದಲೆ ಮತ್ತು ಹುದುಗೂರು ಗ್ರಾಮಗಳು ಭೂಕುಸಿತದ ಸಂಭವನೀಯ ಪಟ್ಟಿಯಲ್ಲಿ ಸೇರಿರುವುದನ್ನು ಕಂಡು ಆತಂಕಗೊAಡಿದ್ದಾರೆ. ಈ ಭೂಕುಸಿತದ ಪಟ್ಟಿಯಲ್ಲಿರುವ ಮಕ್ಕಳ ಗುಡಿ ಬೆಟ್ಟವು ಇಂದು ಐಗೂರು, ಕಿರಗಂದೂರು ಮತ್ತು ಬಿಳಿಗೇರಿ ಗ್ರಾಮಸ್ಥರ ಪ್ರಮುಖ ಕೇಂದ್ರ ಬಿಂದುವಾಗಿ ಚರ್ಚಿಸಲ್ಪಡುತ್ತಿದೆ. ಒಂದು ಕಡೆಯಿಂದ ಮಕ್ಕಳಗುಡಿ ಬೆಟ್ಟವು ಸುಮಾರು ಮೂರು ಕಿಲೋಮೀಟರ್ ವ್ಯಾಪ್ತಿಯ ಕಿಬ್ರಿ ಬೆಟ್ಟದ ಈಶ್ವರ ದೇವಸ್ಥಾದವರೆಗೆ, ಇನ್ನೊಂದು ಕಡೆಯಿಂದ ಅರ್ಧ ಕಿಲೋಮೀಟರ್ ವ್ಯಾಪ್ತಿಯ ಊರು ಬೆಟ್ಟದವರೆಗೆ ವ್ಯಾಪಿಸಿದೆ. ಈ ಮೂರು ಬೆಟ್ಟಗಳ ವ್ಯಾಪ್ತಿಯ ತಪ್ಪಲು ಪ್ರದೇಶಗಳಾದ ಐಗೂರು ಗ್ರಾ.ಪಂ. ವ್ಯಾಪ್ತಿಯ ಕಿಬ್ರಿ ಪೈಸಾರಿ, ಟಾಟಾ ಕಾಫಿ ತೋಟದ ನಿವಾಸಿಗಳ ಮನೆ ಪ್ರದೇಶಗಳು, ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗೇರಿ ಭಾಗದ ನಿವಾಸಿಗಳ ಮನೆಗಳು ಮತ್ತು ಊರುಬೆಟ್ಟದ ತಪ್ಪಲಿನ ಕಿರಗಂದೂರು ನಿವಾಸಿಗಳ ಮನೆಗಳು ಮತ್ತು ತೋಟಗಳನ್ನು ಒಳಗೊಂಡಿದೆ. ೨೦೧೮ ರಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮಕ್ಕಳ ಗುಡಿ ಬೆಟ್ಟವು ಕುಸಿದು ಕಿರುಗಂದೂರು ಭಾಗಕ್ಕೆ ಜಾರಿದಾಗ, ಈ ಭಾಗದ ರೈತರ ಕಾಫಿ ತೋಟಗಳು ಮತ್ತು ಹೊಸದಾಗಿ ನಿರ್ಮಿಸುತ್ತಿದ್ದ ಮನೆಯ ಅಡಿಪಾಯವು ಮಣ್ಣಿನೊಳಗೆ ಹೂತು ಹೋಗಿ ನಷ್ಟ ಸಂಭವಿಸಿತ್ತು. ಒಟ್ಟಾರೆಯಾಗಿ ಮಕ್ಕಳಗುಡಿ ಬೆಟ್ಟದ ತಪ್ಪಲಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಸುಮಾರು ೭೫ ಇಂಚಿನಷ್ಟು ಮಳೆಯಾಗಿದ್ದು, ಮಕ್ಕಳ ಗುಡಿ ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಬಿಳಿಗೇರಿ, ಕಿರುಗಂದೂರು, ಕಿಬ್ರಿ ಪೈಸಾರಿ, ಮತ್ತು ಟಾಟಾ ಕಾಫಿತೋಟದ ನಿವಾಸಿಗಳ ಮೊಗದಲ್ಲಿ ಮುಂದೇನು ಎಂಬ ಆತಂಕದ ಛಾಯೆ ಎದ್ದು ಕಾಣುತ್ತಿದೆ. ಇನ್ನು ಮುಂದೆ ಪ್ರತಿದಿನ ಬೆಟ್ಟದ ಕಡೆ ಮುಖ ಮಾಡಿ ಕಾಲ ಕಳೆಯಬೇಕಾಗುತ್ತದೆ.
-ಸುಕುಮಾರ್