ಮಡಿಕೇರಿ, ಆ. ೩: ಸ್ವಾತಂತ್ರö್ಯ ದಿನಾಚರಣೆ ಪ್ರಯುಕ್ತ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಕೊಡಗು ಹಾಗೂ ನ್ಯಾಷನಲ್ ಮೆಡಿಕೋಶ್ ಸಂಸ್ಥೆ ಕೊಡಗು ವತಿಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕವಿಗೋಷ್ಠಿ ಹಾಗೂ ಪೊಲೀಸ್, ಗೃಹರಕ್ಷಕ ದಳ ಹಾಗೂ ಕಾರಾಗೃಹ ಪೊಲೀಸ್ ಸಿಬ್ಬಂದಿಗಳ ಕುಟುಂಬ ವರ್ಗದವರಿಗೆ ಸಂಪೂರ್ಣ ಉಚಿತ ವೈದ್ಯಕೀಯ ತಪಾಸಣೆ, ರಕ್ತ ಪರೀಕ್ಷೆ, ಸೂಕ್ತ ಚಿಕಿತ್ಸೆ, ಔಷಧಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಪ್ರಯುಕ್ತ ಕವನ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆ ನಡೆಸುತ್ತಿದ್ದು, ಆಸಕ್ತ ಕವಿಗಳು ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಬಹುದಾಗಿದೆ ಎಂದು ಬಳಗದ ಸಂಸ್ಥಾಪಕ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಹಾಗೂ ಟ್ರಸ್ಟಿ ಡಾ.ಕೋಲೆಯಂಡ ಮೋಹನ್ ಅಪ್ಪಾಜಿ ಅವರು ತಿಳಿಸಿದ್ದಾರೆ. ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಯಾವುದೇ ವಯೋಮಾನದ ಆಸಕ್ತ ಕವಿ - ಕವಯತ್ರಿಯರು ಸ್ವಾತಂತ್ರö್ಯ ದಿನಾಚರಣೆ ಅಥವಾ ಸ್ವಾತಂತ್ರö್ಯ ಹೋರಾಟಗಾರರ ಕುರಿತು ರಚಿಸಿದ ತಮ್ಮ ಸ್ವ-ರಚಿತ ೨೦ ಸಾಲುಗಳ ಮಿತಿ ಒಳಗಿನ ಕವಿತೆಯನ್ನು ವಾಚಿಸಬಹುದು. ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಎರಡು ವಿಭಾಗಗಳಾಗಿ ನಡೆಸಲಾಗುವುದು. ೬ನೇ ತರಗತಿಯಿಂದ ೧೦ನೇ ತರಗತಿಯಲ್ಲಿರುವ ಮಕ್ಕಳಿಗೆ ಹಾಗೂ ೧೮ ವರ್ಷದಿಂದ ಪ್ರಾರಂಭವಾಗುವ ಎಲ್ಲಾ ವಯೋಮಾನದ ಸಾರ್ವಜನಿಕರಿಗೆ ಸ್ಪರ್ಧೆ ನಡೆಯಲಿದೆ.

ವಿಜೇತರಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಕವನ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಗೆ ಭಾಗವಹಿಸಲು ಇಚ್ಛಿಸುವವರು ತಾ. ೧೩ ರ ಒಳಗೆ ಹೆಸರನ್ನು ೯೭೪೦೯೭೦೮೪೦ ಈ ದೂರವಾಣಿ ಸಂಖ್ಯೆಗೆ ನೋಂದಾಯಿಸಿಕೊಳ್ಳಬೇಕು ಹಾಗೂ ನ್ಯಾಷನಲ್ ಮೆಡಿಕೋಶ್ ಸಂಸ್ಥೆ ಕೊಡಗು ಡಾ.ಮೋಹನ್ ಅಪ್ಪಾಜಿರವರ ನೇತೃತ್ವದಲ್ಲಿ ೧೦ ವೈದ್ಯರ ತಂಡ ಉಚಿತವಾಗಿ ಕಿವಿ, ಮೂಗು, ಗಂಟಲು, ಹಲ್ಲು, ಶ್ರವಣ ಪರೀಕ್ಷೆ, ನಡೆಸಿ ಸೂಕ್ತ ಚಿಕಿತ್ಸೆ, ಔಷಧಿ ನೀಡಿ ಮಾರ್ಗದರ್ಶನ ನೀಡಲಾಗುವುದು, ಮಡಿಕೇರಿ ಸುತ್ತಮುತ್ತಲಿನ ಪೊಲೀಸ್ ಕುಟುಂಬಗಳು ಹಾಗೂ ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.