ವೀರಾಜಪೇಟೆ, ಆ. ೩: ೨೦೨೨ರ ಸ್ವಾತಂತ್ರö್ಯ ದಿನದಂದು ಬೈಸಿಕಲ್‌ನಲ್ಲಿಯೇ ವಿಶ್ವ ಪರ್ಯಟನೆಗೆ ಹೊರಟಿರುವ ಯುವಕ ಫಾಯಿಝ್ ಅಸ್ರಫ್ ಅಲಿಯವರು ಇದೀಗ ಪ್ಯಾರಿಸ್ ಒಲಂಪಿಕ್ಸ್ ಕ್ರೀಡಾ ಮೈದಾನದಲ್ಲಿ ದ್ದಾರೆ. ಭಾರತದ ಜಾವಲಿನ್ ಎಸೆತಗಾರ ಒಲಂಪಿಕ್ ಚಾಂಪಿಯನ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಅಪ್ಪಟ ಅಭಿಮಾನಿಯಾದ ಇವರು ಕಳೆದ ವರ್ಷ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಡೆಯುತ್ತಿ ದ್ದಾಗ ಹಂಗರಿ ದೇಶದ ರಾಜಧಾನಿ ಬುಡಾ ಪೆಸ್ಟ್ನಲ್ಲಿದ್ದರು. ಫಾಯಿಝ್‌ಗೆ ಚೋಪ್ರಾರ ವರನ್ನು ಭೇಟಿಯಾಗಬೇಕೆಂಬ ಎಲ್ಲಿಲ್ಲದ ಹಂಬಲ. ಅದರಂತೆ ಫಾಯಿಝ್ ಅವರು ಚೋಪ್ರಾ ಅವರನ್ನು ಬುಡಾಪೆಸ್ಟ್ನಲ್ಲಿ ಭೇಟಿಯಾದರು. ತಮ್ಮ ಭೇಟಿ ಸಂದರ್ಭ ಮುಂದಿನ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಫಾಯಿಝ್ ಅವರನ್ನು ಚೋಪ್ರಾ ಅವರು ಆಹ್ವಾನಿಸಿದರು.

ಚೋಪ್ರಾ ಅವರ ಆಹ್ವಾನವನ್ನು ಸ್ವೀಕರಿಸಿದ ಫಾಯಿಝ್ ೨೦೨೪ರಲ್ಲಿ ನಡೆಯಲಿರುವ ಪ್ಯಾರಿಸ್ ಒಲಂಪಿಕ್‌ಗೆ ಬರುತ್ತೇನೆಂದು ಮಾತು ಕೊಟ್ಟಿದ್ದರು. ಅಂತೂ ಇಂತೂ ಒಲಂಪಿಕ್ ಕ್ರೀಡಾಕೂಟ ಪ್ರಾರಂಭಗೊಳ್ಳುವಾಗ ಲಂಡನ್‌ನಲ್ಲಿದ್ದ ಫಾಯಿಝ್‌ರವರು ಪ್ರಯಾಣ ಯೋಜನೆಯಲ್ಲಿ ಬದಲಾವಣೆ ತಂದು ಒಂದು ವಾರದಲ್ಲಿಯೇ ವೀಸಾ ಮುಂತಾದ ಕಾಗದ ಪತ್ರಗಳ ಕಾರ್ಯ ಪೂರ್ಣಗೊಳಿಸಿ ಪ್ಯಾರಿಸ್‌ಗೆ ಹೊರಟಿದ್ದಾರೆ. "ನೀರಜ್ ಚೋಪ್ರಾರವರನ್ನು ಮತ್ತೊಮ್ಮೆ ಭೇಟಿ ಮಾಡುವ ಹುಮ್ಮಸ್ಸಿನಲ್ಲಿ ದ್ದೇನೆ. ಭಾರತೀಯ ಒಲಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ.ಟಿ. ಉಷಾ ಅವರು ಈ ಬಗ್ಗೆ ನನಗೆ ಸಹಕರಿಸಿದ್ದಾರೆ. ಆಗಸ್ಟ್ ೮ಕ್ಕೆ ನೀರಜ್‌ರವರು ಎರಡನೇ ಬಾರಿ ಚಿನ್ನ ಪಡೆದು ಇತಿಹಾಸ ನಿರ್ಮಿಸುವುದನ್ನು ನಾನು ಕಣ್ಣಾರೆ ನೋಡಬೇಕು". ಎಂದರು.

೩೭ ವರ್ಷ ಪ್ರಾಯದ ಇವರು ಈಗಾಗಲೇ ೩೫ ರಾಷ್ಟçಗಳಲ್ಲಿ ೩೦,೦೦೦ ಕಿ.ಮೀ.ಗಿಂತಲೂ ಹೆಚ್ಚು ದೂರ ಸೈಕಲ್‌ನಲ್ಲಿಯೇ ಪ್ರಯಾಣಿಸಿದ್ದಾರೆ. ಭಾರತದಿಂದ ಆರಂಭಿಸಿರುವ ಸೈಕಲ್ ಪ್ರಯಾಣ ಓಮನ್, ಸೌದಿ ಅರೇಬಿಯಾ, ಖತಾರ್, ಬಹರೈನ್, ಕುವೈತ್, ಇರಾಖ್, ಇರಾನ್, ಅರ್ಮೇನಿಯ, ಜಾರ್ಜಿಯ, ತುರ್ಕಿಯಾ, ಗ್ರೀಸ್, ಮಾಸಿಡೋನಿಯ, ಸೆರ್ಬಿಯ, ಕ್ರೊಯೇಷ್ಯ, ಸ್ಲೊವೀನಿಯ, ಆಸ್ಟಿçಯ, ಸ್ಲೊವಾಕಿಯ, ಹಂಗರಿ, ಚೆಕ್, ಜರ್ಮನಿ, ಡೆನ್ಮಾರ್ಕ್, ನಾರ್ವೆ, ಪೋಲೆಂಡ್, ಸ್ವೀಡನ್, ನೆದರ್‌ಲ್ಯಾಂಡ್, ಬೆಲ್ಜಿಯಂ, ಇಂಗ್ಲೆAಡ್ ಮುಂತಾದ ರಾಷ್ಟçಗಳನ್ನು ಕ್ರಮಿಸಿದ್ದಾರೆ.

ಮೂಲತಃ ಕೇರಳದ ಕೋಝಿಕೋಡ್ ಜಿಲ್ಲೆಯವರಾದ ದಿ. ಅಶ್ರಫ್ ಹಾಗೂ ಫೌಝಿಯರವರ ಮಗನಾದ ಫಾಯಿಝ್ ಪ್ರಸಕ್ತ ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿಯಾಗಿರುವ ತಮ್ಮ ಪತ್ನಿ

ಡಾ|| ಅಸ್ಮಿನ್, ಮಕ್ಕಳು ಅರಮೇರಿಯ ಎಸ್.ಎಂ.ಎಸ್. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಫಯಿಝಿನ್ ಒಮರ್ ಹಾಗೂ ಐಝಿನ್ ನಹಲ್‌ರೊಂದಿಗೆ ವೀರಾಜಪೇಟೆಯಲ್ಲಿ ನೆಲೆಸಿದ್ದಾರೆ.

ಫಾಯಿಝ್‌ರವರ ಸಾಧನೆ ಭಾರತ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಅಲ್ಲದೆ ಲಂಡನ್ನಿನ ಬ್ರಿಟಿಷ್ ಪಾರ್ಲಿಮೆಂಟ್ ಕೊಡಮಾಡುವ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಿಸಲ್ಪಟ್ಟಿದೆ. ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಎಜ್ಯುಕೇಶನ್ ಅವಾರ್ಡ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಫಾಯಿಝ್ ಅವರನ್ನು ಪ್ರಮುಖರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು.

ಆರೋಗ್ಯ ಸಂರಕ್ಷಣೆ, ವಿಶ್ವಶಾಂತಿ, ಕಾರ್ಬನ್ ಮುಕ್ತ ಪರಿಸರ, ಮಾದಕ ವಸ್ತು ರಹಿತ ಸಮಾಜ ಮುಂತಾದ ಉದ್ದೇಶದಿಂದ "ಹೃದಯದಿಂದ ಹೃದಯಕ್ಕೆ" ಎಂಬುದು ತಮ್ಮ ಪರ್ಯಟನೆಯ ಧ್ಯೇಯವಾಕ್ಯವಾಗಿದೆ ಎನ್ನುತ್ತಾರೆ ಫಾಯಿಝ್. -ರೆಹಮಾನ್