ಮಡಿಕೇರಿ, ಆ. ೪: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಕಟಣೆ ಯೋಜನೆಯಡಿ ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ. ಲೇಖಕರು ಅರೆಭಾಷೆಯಲ್ಲಿ ಕಥೆ, ಕವನ, ಲೇಖನ, ಅಜ್ಜಿ ಕಥೆ, ಜಾನಪದ, ವಿಚಾರ ಸಾಹಿತ್ಯ, ಲಲಿತ ಪ್ರಬಂಧ, ಸಂಶೋಧನ ಕೃತಿಗಳು ಮತ್ತಿತರವನ್ನು ಅರೆಭಾಷೆಯಲ್ಲಿ ಬರಹದಲ್ಲಿ ಬರೆದು ಹಸ್ತ ಪ್ರತಿಯನ್ನು ಅಕಾಡೆಮಿಗೆ ಸಲ್ಲಿಸುವಂತೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮತ್ತು ರಿಜಿಸ್ಟಾçರ್ ಚಿನ್ನಸ್ವಾಮಿ ಅವರು ಕೋರಿದ್ದಾರೆ.

ತಮ್ಮ ಹಸ್ತ ಪ್ರತಿಗಳನ್ನು ಸಲ್ಲಿಸಲು ೨೦೨೪ ತಾ. ೩೧ ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಧ್ಯಕ್ಷರು/ ರಿಜಿಸ್ಟಾçರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಾಸೀಟು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ. ಮೊ. ೬೩೬೨೫೨೨೬೭೭ ಸಂಪರ್ಕಿಸಬಹುದು. ಚಿಡಿebಚಿseಚಿಛಿಚಿಜemಥಿ@gmಚಿiಟ.ಛಿom ವಿಶೇಷ ಸೂಚನೆ ಪುಸ್ತಕಗಳ ಆಯ್ಕೆಯ ಹಕ್ಕು ಅಕಾಡೆಮಿಯದ್ದಾಗಿದೆ. ಬರಹ ಕನಿಷ್ಟ ೭೦ ರಿಂದ ೮೦ ಪುಟಗಳಿರಬೇಕು ಎಂದು ಪ್ರಕಟಣೆ ತಿಳಿಸಿದೆ.