ಗೋಣಿಕೊಪ್ಪಲು, ಆ.೪: ನಮ್ಮ ಮುಂದಿನ ಪೀಳಿಗೆಗೆ ಸಂಸ್ಕೃತಿ, ಸಂಪ್ರದಾಯಗಳನ್ನು ಕೊಡುಗೆಯಾಗಿ ನೀಡಲು ಹಬ್ಬ ಹರಿದಿನ ಆಚರಣೆ ನಿರಂತರವಾಗಿ ನಡೆಯಬೇಕು ಎಂದು ಅಖಿಲ ಅಮ್ಮಕೊಡವ ಸಮಾಜದ ಜಿಲ್ಲಾಧ್ಯಕ್ಷÀ ಬಾನಂಡ ಪ್ರಥ್ಯು ಹೇಳಿದರು.

ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಅಖಿಲ ಅಮ್ಮಕೊಡವ ಸಮಾಜದ ವತಿಯಿಂದ ಎರಡನೇ ವರ್ಷದ ಕಕ್ಕಡ ನಮ್ಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದÀರು. ಅಮ್ಮಕೊಡವ ಸಮಾಜದ ಜನಸಂಖ್ಯೆ ಕಡಿಮೆ ಇದ್ದರೂ ನಮ್ಮ ಪದ್ಧತಿ, ಪರಂಪರೆ, ಆಚಾರ, ವಿಚಾರಗಳಿಗೆ ಕೊರತೆ ಇಲ್ಲ. ಮುಂದೆ ಕೊರತೆಯೂ ಎದುರಾಗಬಾರದು ಈ ನಿಟ್ಟಿನಲ್ಲಿ ವಾರ್ಷಿಕವಾಗಿ ಕ್ರಿಕೆಟ್ ನಮ್ಮೆ ಹಾಗೂ ಕಕ್ಕಡ ನಮ್ಮೆ ಆಚರಿಸುತ್ತಾ ಬರುತ್ತಿದ್ದೇವೆ.

ಮುಂದೆಯೂ ಕೂಡಾ ಯಶಸ್ವಿಯಾಗಿ ಸಮಾಜದಿಂದ ಒಗ್ಗಟ್ಟು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು. ಇತ್ತೀಚಿಗೆ ಸುರಿದ ಮಹಾ ಮಳೆಯಿಂದಾಗಿ ಸಮಾಜದ ಕಟ್ಟಡಕ್ಕೆ ನೀರು ನುಗ್ಗಿದೆ. ಇದರಿಂದಾಗಿ ನಷ್ಟ ಸಂಭವಿಸಿದೆ. ಸಮಾಜದ ಅಭಿವೃದ್ಧಿಗಾಗಿ ಬಿಟ್ಟಂಗಾಲ ಬಳಿಯಲ್ಲಿ ನೂತನ ಜಾಗ ಖರೀದಿಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಮಾಜ ಬಾಂಧವರು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಮಾಜದ ಹಿರಿಯರಾದ ನಿವೃತ್ತ ಶಿಕ್ಷಕರಾದ ನೆರೆಯನ್ನಮ್ಮಂಡ ಪ್ರಭು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಕಕ್ಕಡ ನಮ್ಮೆ ಆಚರಣೆಯಿಂದ ಯುವ ಸಮುದಾಯಕ್ಕೆ ಸಂಸ್ಕೃತಿಗಳ ಬಗ್ಗೆ ತಿಳುವಳಿಕೆ ಮೂಡಿಸಲು ಅನುಕೂಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಕೊಂಡಿAಜಮ್ಮAಡ ಬಾಲಕೃಷ್ಣ, ಮುರುಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಮಾಜಸೇವಕಿ ಪುತ್ತಾಮನೆ ಶಾಂಭ ಪ್ರಸಾದ್, ವಕೀಲರಾದ ಬಾಚಮಂಡ ಅನುಪಮ ಕಿಶೋರ್, ಪುತ್ತಾಮನೆ ಅನಿತಾ ಜೀವನ್ ಕಕ್ಕಡ ನಮ್ಮೆಯ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಅಖಿಲ ಅಮ್ಮಕೊಡವ ಸಮಾಜದ ಪ್ರ.ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್, ಗೌರವ ಅಧ್ಯಕ್ಷರಾದ ಅಚ್ಚಿಯಂಡ ವೇಣುಗೋಪಾಲ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕಿ ಅಮ್ಮತ್ತಿರ ರೇವತಿ ಪರಮೇಶ್ವರ ಸ್ವಾಗತಿಸಿ, ಪುತ್ತಾಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿ, ಹೆಮ್ಮಚ್ಚಿಮನೆ ಕಾವ್ಯ ಅಶ್ವಥ್ ನಿರೂಪಿಸಿ, ಅಮ್ಮತ್ತಿರ ಆಶಾ ಸುರೇಶ್ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಟಿಸೊಪ್ಪಿನಿಂದ ತಯಾರುಮಾಡಿದ ಹಲವು ಖಾದ್ಯಗಳನ್ನು ವಿತರಿಸಲಾಯಿತು. ಕಕ್ಕಡ ನಮ್ಮೆ ಅಂಗವಾಗಿ ಕವನ ವಾಚನ, ಹಾಡುಗಾರಿಕೆ, ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಅಚ್ಚಿಯಂಡ ಕಾವ್ಯ,ಬಾಜಮಂಡ ಪ್ರತೀಕ್ಷ, ಅಮ್ಮತ್ತಿರ ಧನ್ಯ, ಪುತ್ತಾಮನೆ ವಿದ್ಯಾ ಜಗದೀಶ್, ಪಾಡಿಯಮ್ಮಂಡ ದುಂದುಬಿ ಇವರುಗಳು ಬಹುಮಾನ ಪಡೆದರು. - ಹೆಚ್.ಕೆ. ಜಗದೀಶ್