ಸೋಮವಾರಪೇಟೆ, ಆ. ೪: ಸಮೀಪದ ಚೌಡ್ಲು ಗಾಂಧಿನಗರದಲ್ಲಿರುವ ಶ್ರೀ ದೊಡ್ಡಮಾರಿಯಮ್ಮ ದೇವಾಲಯದಲ್ಲಿ ಆಷಾಢ ಮಾಸದ ವಿಶೇಷ ಪೂಜೋತ್ಸವ ಹಲವು ಪೂಜಾ ವಿಧಿವಿಧಾನಗಳೊಂದಿಗೆ ಸಂಪನ್ನ ಗೊಂಡಿತು. ಆಷಾಢ ಮಾಸದ ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ದೇವಿಗೆ ವಿಶೇಷ ಅಲಂಕಾರಗಳೊAದಿಗೆ ಪೂಜೆ ನೆರವೇರಿಸಲಾಯಿತು. ಶ್ರೀ ದೊಡ್ಡ ಮಾರಿಯಮ್ಮ ದೇವರಿಗೆ ಚರ್ರಿ ಹಣ್ಣಿನ ಅಲಂಕಾರ, ಕಾಫಿ ಬೇಳೆ ಅಲಂಕಾರ, ಏಲಕ್ಕಿ, ಶೇಂಗಾ, ಮಾವಿನ ಕಾಯಿ, ಬೆಟ್ಟದ ನೆಲ್ಲಿಕಾಯಿ, ನವನೀತ ಅಲಂಕಾರ, ಬಾದಾಮಿ-ಗೋಡಂಬಿ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಬಸವಕುಮಾರ್ ಶಾಸ್ತಿç ಅವರ ಪೌರೋಹಿತ್ಯದಲ್ಲಿ ಸೇವೆಗಳು ನಡೆದವು. ಆಷಾಢ ಮಾಸದ ಕೊನೆಯ ಶುಕ್ರವಾರದಂದು ಬೆಳಗ್ಗಿನಿಂದ ಸಂಜೆಯವರೆಗೂ ವಿವಿಧ ಸೇವೆಗಳು ನಡೆದವು. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಗಂಗಾಧರ್ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಭಾಗವಹಿಸಿದ್ದರು.