ಮಡಿಕೇರಿ, ಆ. ೪: ವೀರಾಜ ಪೇಟೆಯಲ್ಲಿ ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಕಕ್ಕಡ ೧೮ ಆಚರಣೆ ನಡೆಯಿತು. ಸಮಾಜದ ಉಪಾಧ್ಯಕ್ಷ ಕೊರಕುಟ್ಟೀರ ಸರಾ ಚಂಗಪ್ಪ ಮಾತನಾಡಿ, ಕಕ್ಕಡ ಮಾಸದಲ್ಲಿ ಬಾರಿ ಮಳೆಯ ಮತ್ತು ನಿರಂತರ ಕೃಷಿಚಟುವಟಿಕೆಗಳ ಮಧ್ಯೆ ಔಷಧೀಯ ಗುಣಗಳುಳ್ಳ ಆಹಾರ ಸೇವನೆಯಿಂದ ಹಿಂದಿನ ಕಾಲಗಳಲ್ಲಿ ನಮ್ಮ ಪೂರ್ವ ಜರು ತಮ್ಮ ಆರೋಗ್ಯ ವೃದ್ಧಿಸಿ ಕೊಳ್ಳುತ್ತಿದ್ದರು. ಕಕ್ಕಡ ತಿಂಗಳಲ್ಲಿ ಕೃಷಿಯನ್ನು ಹೊರತುಪಡಿಸಿ ಯಾವುದೇ ಚಟುವಟಿಕೆಗಳು ನಡೆಯುತ್ತಿರಲಿಲ್ಲ. ಆದರೆ, ಇಂದಿನ ದಿನಗಳಲ್ಲಿ ಯುವಕರು ಕೃಷಿಯತ್ತ ಹೆಚ್ಚಿನ ಗಮನಹರಿಸದಿ ರುವುದು ವಿಷಾದನೀಯ ಎಂದರು. ಕೊಡಗು ಹೆಗ್ಗಡೆ ಸಮಾಜದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಚಂಗಚAಡ ಕಟ್ಟಿಕಾವೇರಪ್ಪ ಅವರನ್ನು ಸನ್ಮಾನಿಸಿ, ಗೌರವಿಸಿ ಅವರ ಸೇವೆಯನ್ನು ಸ್ಮರಿಸಲಾಯಿತು. ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಮಾತನಾಡಿ, ಕಟ್ಟಿ ಕಾವೇರಪ್ಪರವರು ಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಸಂಘದ ಕಟ್ಟಡ ನಿರ್ಮಾ ಣಕ್ಕೆ ಶ್ರಮಿಸಿದ್ದಾರೆ ಎಂದರು.
ನAತರ ಮದ್ದುಪುಟ್ಟ್ ಮತ್ತು ಪಾಯಸ ಮತ್ತಿತರ ಖಾದ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕಾರ್ಯದರ್ಶಿ ಪಡಿಞರಂಡ ಪ್ರಭು ಕುಮಾರ್ ಸ್ವಾಗತಿಸಿದರು, ಹಿರಿಯ ನಿರ್ದೇಶಕರಾದ ಕೊಪ್ಪಡ ಪಟ್ಟುಪಳಂ ಗಪ್ಪ ವಂದಿಸಿದರು, ನಿರ್ದೇಶಕರುಗಳಾದ ಮೂರೀರ ಕುಶಾಲಪ್ಪ, ಚರ್ಮಂಡ ಪೂವಯ್ಯ, ಕೊಂಗೆಪAಡ ರಘು, ಪಂದಿಕAಡ ಸುನಂದ, ಕೊರಂಡ ಪ್ರಕಾಶ್ ಸುಬ್ಬಯ್ಯ, ತಂಬAಡ ಮಂಜು, ಮಲ್ಲಾಡ ಸುತಾ, ಮೂರೀರ ಶಾಂತಿ, ಪಂದಿಕAಡ ನಾಗೇಶ್ ಪ್ರಮುಖರಾದ ಪಡಿಞರಂಡ ದೇವಕ್ಕಿ ಅಚ್ಚಪ್ಪ ಮುಂತಾದವರು ಹಾಜರಿದ್ದರು.