ಶನಿವಾರಸAತೆ, ಆ. ೪: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸಮೀಪದ ಹಿಪ್ಲಿಗೇಟ್ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶನಿವಾರಸಂತೆ ಪೊಲೀಸರಿಗೆ ಸ್ಥಳೀಯರು ಹಾಗೂ ಹಿಂದೂ ಜಾಗರಣಾ ವೇದಿಕೆ ಪ್ರಮುಖರಿಂದ ದೊರೆತ ಖಚಿತ ಮಾಹಿತಿ ಅನ್ವಯ ೨ ಪಿಕಪ್ ವಾಹನಗಳಲ್ಲಿ ೫ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.
ಶನಿವಾರಸಂತೆ ಪೊಲೀಸ್ ಠಾಣೆಯ ವೃತ್ತನಿರೀಕ್ಷಕ ಪ್ರೀತಂ, ಪಿಎಸ್‌ಐಗಳಾದ ಚಂದ್ರು, ಗೋವಿಂದ್ ರಾಜು, ಸಿಬ್ಬಂದಿಗಳಾದ ಹರ್ಷ, ಕೋಟಿಯಪ್ಪ, ಶಿವಪ್ಪ ಹಾಗೂ ಮಹೇಶ್ ಕಾರ್ಯಾಚರಣೆ ಕೈಗೊಂಡು ೨ ವಾಹನಗಳಲ್ಲಿದ್ದ ಒಟ್ಟು ೫ ಗೋವುಗಳನ್ನು ರಕ್ಷಿಸಿ ಕೃತ್ಯ ನಡೆಸಿದ ಒಟ್ಟು ನಾಲ್ವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಠಾಣಾ ಆವರಣದಲ್ಲಿರುವ ಗೋವುಗಳನ್ನು ಸೋಮವಾರ ಮೈಸೂರಿನ ಪಿಂಜರಾಪೋಲಿಗೆ ರವಾನಿಸುವುದಾಗಿ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.