ನಾಪೋಕ್ಲು, ಆ. ೪: ತುಳು ಭಾಷಿಕರ ಸಂಸ್ಕೃತಿ, ಸಂಪ್ರದಾಯವನ್ನು ಯುವ ಜನಾಂಗಕ್ಕೆ ಪರಿಚಯಿಸುವ ಕೆಲಸವನ್ನು ಮಾಡಬೇಕು ಎಂದು ಬಂಟ್ವಾಳದ ವಾಗ್ಮಿ ಶ್ರೀನಿಧಿ ಕರೆ ನೀಡಿದರು. ಇಲ್ಲಿನ ಕೊಡವ ಸಮಾಜದಲ್ಲಿ ಬಿಲ್ಲವ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಆಟಿಡೊಂಜಿ ದಿನ -೨೦೨೪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ವರ್ಷದ ವಿವಿಧ ಕಾಲಮಾನಗಳಿಗೆ ಅದರದ್ದೆ ಆದ ಮಹತ್ವವಿದೆ. ಅದರಲ್ಲೂ ಆಟಿ ತಿಂಗಳಿಗೆ ವಿಶೇಷ ಮಹತ್ವ ಇದೆ. ಬಿರುಸಿನಿಂದ ಸುರಿಯುವ ಮಳೆಗಾಲದ ಈ ದಿನಗಳಲ್ಲಿ ಸಸ್ಯಗಳಲ್ಲಿ ಆಯುರ್ವೇದ ಅಂಶಗಳು ಹೆಚ್ಚು ಇರುವುದರಿಂದ ವೈವಿಧ್ಯಮಯ ತಿನಿಸುಗಳನ್ನು ಮಾಡಿ ಸೇವಿಸುವುದು ರೂಢಿಯಲ್ಲಿದೆ. ನಂತರದ ಸೋನೆ ತಿಂಗಳಿನಲ್ಲಿ ಸಮಾರಂಭಗಳಿಗೆ ಮಹತ್ವ ಇದೆ. ವರ್ಷದ ವಿವಿಧ ತಿಂಗಳುಗಳನ್ನು ವೈವಿಧ್ಯಮಯವಾಗಿ ಆಚರಿಸುವ ಬಿಲ್ಲವ ಜನಾಂಗ ತುಳುನಾಡಿನ ಸಂಸ್ಕೃತಿಯ ಸಾರವನ್ನು ಮಕ್ಕಳಿಗೆ ತಿಳಿಸುವಂತ ಕೆಲಸ ಆಗಬೇಕಿದೆ. ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಿದೆ ಎಂದರು.

ಮಡಿಕೇರಿ ಬಿಲ್ಲವ ಸಮಾಜದ ಅಧ್ಯಕ್ಷೆ ಲೀಲಾವತಿ ಮಾತನಾಡಿ, ಮೊಬೈಲ್, ಟಿವಿಯಂತಹ ಮಾಧ್ಯಮಗಳಿಂದ ಮಕ್ಕಳು, ಯುವ ಜನಾಂಗದವರು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಬೇಕಾದರೆ ವಿದ್ಯೆ ಮುಖ್ಯ .ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ನೀಡಬೇಕು. ಮೊಬೈಲ್‌ನಿಂದ ಸಾಧ್ಯವಾದಷ್ಟು ದೂರವಿದ್ದು, ಬಡ ಜನರಿಗೆ ಸಹಾಯ ಮಾಡಿ ಎಂದರು.

ಮಡಿಕೇರಿ ಬಿಲ್ಲವ ಸಮಾಜದ ಮಾಜಿ ಅಧ್ಯಕ್ಷ ಎಲಿಯಣ್ಣ ಪೂಜಾರಿ ಮಾತನಾಡಿ, ಸಂಘಟನೆಯಿAದ ಯಶಸ್ಸು ಸಾಧ್ಯ ಎಂದರು. ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಅನಿಲ್ ಮಾತನಾಡಿ, ಸಮಾಜದಲ್ಲಿ ವ್ಯಕ್ತಿ ಬೆಳೆಯುತ್ತಾ ಸಮಾಜ, ಸಂಸ್ಕೃತಿ, ಪದ್ಧತಿಗಳ ಬಗ್ಗೆ ಅರಿವು ಹೊಂದುತ್ತಾನೆ. ತಮ್ಮ ಸಂಸ್ಕೃತಿ ಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಂಘದ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ, ವಕೀಲರಾದ ದಯಾ ಹೊನ್ನಪ್ಪ ಮಾತನಾಡಿದರು.

ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಮ್ ಪ್ರತೀಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಬಿಲ್ಲವ ಜನಾಂಗವನ್ನು ಒಗ್ಗೂಡಿಸುವ ಉದ್ದೇಶದಿಂದ ಸಂಘ ಸ್ಥಾಪಿಸಲಾಗಿದೆ. ಸಂಘದಲ್ಲಿ ೨೧೭ ಸದಸ್ಯರಿದ್ದಾರೆ. ರಕ್ತದಾನದ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಂಘ ಇತರರಿಗೆ ಮಾದರಿಯಾಗಿದೆ ಎಂದರು.

ಸAಘದ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಸಂಘದ ಅಧ್ಯಕ್ಷ ಬಿ.ಎಂ.ಪ್ರತೀಪ ರಕ್ತದಾನ ಮಾಡುವುದರ ಮೂಲಕ ೭೦ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು .

ಕಾರ್ಯಕ್ರಮದಲ್ಲಿ ಸಂಘದ ಲೋಗೋವನ್ನು ಬಿಡುಗಡೆ ಮಾಡಲಾಯಿತು.

ಪುಟಾಣಿ ಪ್ರತಿಭೆ ಸಿಂಚನ ಯೋಗ ಪ್ರದರ್ಶಿಸಿ ಜನ ಮೆಚ್ಚುಗೆಗೆ ಪಾತ್ರರಾದರು. ಇದೇ ಸಂದರ್ಭ ಸಿಂಚನಳನ್ನು ಸನ್ಮಾನಿಸಲಾಯಿತು..

ಮುಖ್ಯ ಅತಿಥಿಗಳಾಗಿ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಪೂವಪ್ಪ, ೫೦ಕ್ಕೂ ಅಧಿಕ ಭಾರಿ ರಕ್ತದಾನ ಮಾಡಿದ ರಾಮಪ್ಪ ಪೊಲೀಸ್, ಗುತ್ತಿಗೆದಾರ ಗೋಪಾಲ, ನಿವೃತ್ತ ಪೊಲೀಸ್ ಅಧಿಕಾರಿ ಲಿಂಗಪ್ಪ, ಸಂಘದ ಉಪಾಧ್ಯಕ್ಷ ವಸಂತ್ ಅರುಣ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಘಟನಾ ಕಾರ್ಯದರ್ಶಿ ನಾಗರಾಜ್, ಖಜಾಂಚಿ ಬಿ.ಡಿ ದೀಪಕ್, ಸಂಘದ ನಿರ್ದೇಶಕರು ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪುಟಾಣಿಗಳಾದ ವಿಸ್ಮಿತ, ದೃತಿ ಮತ್ತು ಆಶಾ ಅವರಿಂದ ಸ್ವಾಗತ ನೃತ್ಯ ಸಭೆಯನ್ನು ರಂಜಿಸಿತು.

ನಿವೇದಿತಾ ತಂಡದವರಿAದ ಪ್ರಾರ್ಥನೆಯೊಂದಿಗೆ ಪ್ರಾರಂಭಗೊAಡ ಕಾರ್ಯಕ್ರಮವನ್ನು ಕಾರ್ಯದರ್ಶಿ ಬಿಲ್ಲವ ಸಮಾಜದ ಕಾರ್ಯದರ್ಶಿ ರೋಹಿತ್ ಸ್ವಾಗತಿಸಿದರು. ಕಿಶೋರ್ ನಿರೂಪಿಸಿದರು. ಅಧ್ಯಕ್ಷ ಬಿ.ಎಂ. ಪ್ರತೀಪ ವಂದಿಸಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಆಟಿ ತಿಂಗಳ ವಿಶೇಷ ಖಾದ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು. -ದುಗ್ಗಳ ಸದಾನಂದ