ಸಿದ್ದಾಪುರ, ಆ. ೪: ವಯನಾಡು ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ಮನೆಮಠ ಕಳೆದುಕೊಂಡ ಸಂತ್ರಸ್ತರಿಗೆ ತನ್ನ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಬಟ್ಟೆಗಳನ್ನು ಅಂಗಡಿಯ ಮಾಲೀಕರು ಉದಾರವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಸಿದ್ದಾಪುರದ ಎಸ್‌ಎನ್ ಸ್ಟೋರ್ಸ್ ಬಟ್ಟೆ ಅಂಗಡಿಯ ಮಾಲೀಕ ಸಮೀರ್ ಅವರು ಇತ್ತೀಚೆಗೆ ವಯನಾಡುವಿನಲ್ಲಿ ಭೂಕುಸಿತ ಘಟನೆ ಗಮನಿಸಿ ತಮ್ಮ ಅಂಗಡಿಯಲ್ಲಿ ವ್ಯಾಪಾರಕ್ಕಿಟ್ಟಿದ್ದ ಬಟ್ಟೆಗಳನ್ನು ನಿರಾಶ್ರಿತರಿಗೆ ಉದಾರವಾಗಿ ನೀಡಿ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಿದ್ದಾರೆ.