ಮಡಿಕೇರಿ, ಆ. ೪: ಕರ್ನಾಟಕ ಆರ್ಯವೈಶ್ಯ ಮಹಾಸಭಾ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಸವಿ ಅಕಾಡೆಮಿ ವತಿಯಿಂದ ಕೇಂದ್ರ ಹಾಗೂ ಕರ್ನಾಟಕ ಲೋಕಸೇವಾ ಆಯೋಗ (IPS, IಂS) ನಡೆಸುವ ಪರೀಕ್ಷೆಗಳಿಗೆ ಉಚಿತ ಶಿಕ್ಷಣ ಸೌಲಭ್ಯವನ್ನು ನೀಡಲಾಗುತ್ತದೆ. ಬೆಂಗಳೂರಿನ ವಿಜಯನಗರ ಬಡಾವಣೆಯ ಚಂದ್ರಾ ಲೇಔಟ್ನ ‘ಹೆಸರಾಂತ ಅಕಾಡೆಮಿ' ಸಹಯೋಗದೊಂದಿಗೆ ಯು.ಪಿ.ಎಸ್.ಸಿ. ತರಗತಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ.
ಯಾವುದೇ ಪದವೀಧರರು ಯು.ಪಿ.ಎಸ್.ಸಿ. (UPSಅ) ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅವಕಾಶವಿದೆ. ೨೦೨೫ರಲ್ಲಿ ನಡೆಯುವ ಯು.ಪಿ.ಎಸ್.ಸಿ. (UPSಅ) ಪರೀಕ್ಷೆಗಳನ್ನು ತೆಗೆದುಕೊಳ್ಳುವ ಆಸಕ್ತ ವಿದ್ಯಾರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುವುದು.
ಇಲ್ಲಿ ನಡೆಸುವ ಎಲ್ಲಾ ತರಗತಿಗಳು ಸಂಪೂರ್ಣ ಉಚಿತವಾಗಿದ್ದು, ಯಾವುದೇ ಸಮುದಾಯದ ವಿದ್ಯಾರ್ಥಿಗಳಿಗೆ ಸಂಸ್ಥೆಯ ನಿಮಯಮಾನುಸಾರ ಪ್ರವೇಶವನ್ನು ಪಡೆಯಲು ಅವಕಾಶವಿದೆ.
ಪ್ರವೇಶಾಸಕ್ತ ವಿದ್ಯಾರ್ಥಿಗಳು ವಾಸವಿ ಅಕಾಡೆಮಿಯು ನಡೆಸುವ ಪ್ರವೇಶ ಮತ್ತು ಮೌಖಿಕ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತೀರ್ಣರಾಗಬೇಕಿದೆ. ಹಲವಾರು ಮಾಜಿ ಹಾಗೂ ಹಾಲಿ ಐ.ಎ.ಎಸ್. (IಂS) ಅಧಿಕಾರಿಗಳಿಂದ ವಿಶೇಷ ಮಾರ್ಗದರ್ಶನ ನೀಡಲಾಗುತ್ತದೆ.
ತರಬೇತಿಯ ಅವಧಿ ೮ ತಿಂಗಳುಗಳಾಗಿದ್ದು ಅರ್ಜಿ ಸಲ್ಲಿಸಲು ತಾ. ೨೫ ಕೊನೆಯ ದಿನವಾಗಿದೆ. ಸೆಪ್ಟೆಂಬರ್ ೧ ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ : ೯೯೧೬೧೧೬೬೧೫ ಅಥವಾ ೯೬೬೩೯೦೦೪೩೯ ಅನ್ನು ಸಂಪರ್ಕಿಸಬಹುದು.
ಅರ್ಜಿಯನ್ನು hಣಣಠಿs://ಜಿoಡಿms.qಟe/ಆತಿಏPಂ೧ಖಘಿಡಿಐಘಿಛಿಘಿUಠಿಗಿ೮ ಮೂಲಕ ಸಲ್ಲಿಸಬಹುದಾಗಿದೆ.