ಸೋಮವಾರಪೇಟೆ,ಆ.೪ : ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಆಟಿ-೧೮ರ ಆಚರಣೆ ಸಾಂಪ್ರದಾಯಿಕವಾಗಿ ನಡೆಯಿತು. ಆಟಿ ಮಾಸದ ವಿಶೇಷ ಖಾದ್ಯಗಳನ್ನು ತಯಾರಿಸಿ ಸೇವಿಸಲಾಯಿತು.

ಸಮೀಪದ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಟಿ ೧೮ರ ಅಂಗವಾಗಿ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದೊಂದಿಗೆ ಮಧುಬಾನ ಸೊಪ್ಪಿನ ಪಾಯಸವನ್ನು ವಿತರಿಸಲಾಯಿತು. ಕೊಡಗಿನಲ್ಲಿ ಆಟಿ ೧೮ ರ ಸಂದರ್ಭ ಔಷಧೀಯ ಗುಣಗಳುಳ್ಳ ಸೊಪ್ಪಿನ ಮಹತ್ವದ ಕುರಿತು ಮುಖ್ಯ ಶಿಕ್ಷಕ ಯಶ್ವಂತ್ ಕುಮಾರ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭ ಸಹಶಿಕ್ಷಕರು, ಅಕ್ಷರ ದಾಸೋಸ ಸಿಬ್ಬಂದಿಗಳು ಇದ್ದರು.