ಸಿದ್ದಾಪುರ, ಆ. ೨೯ : ನೆಲ್ಯಹುದಿಕೇರಿ ನೈಮ ಎಜುಕೇಶನಲ್ ಅಂಡ್ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ೧೦ ದಿನಗಳ ಉಚಿತ ತರಬೇತಿ ಶಿಬಿರವನ್ನು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಾದರೂ ವಿದ್ಯಾರ್ಥಿಗಳಲ್ಲಿ ತಮ್ಮದೇ ಆದ ಆತ್ಮಸ್ಥೆöÊರ್ಯ ಮತ್ತು ಶ್ರಮವಿರಬೇಕು. ಜೊತೆಗೆ ಇಂತಹ ಸಂಸ್ಥೆಗಳು ನೀಡುತ್ತಿರುವ ತರಬೇತಿಯ ಲಾಭ ಪಡೆದುಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ನಿವೃತ್ತ ನ್ಯಾಯಾಧೀಶ ಶಫೀರ್ ಮಾತನಾಡಿ, ಸ್ವಾಭಿಮಾನದ ಬದುಕಿಗೆ ಶಿಕ್ಷಣ ಅತ್ಯಗತ್ಯವಾಗಿದ್ದು, ಕೇವಲ ಶಿಕ್ಷಣದಿಂದ ಮಾತ್ರ ಗುರಿ ಸಾಧಿಸಲು ಸಾಧ್ಯವಿಲ್ಲ. ಶಿಕ್ಷಣದ ಜತೆಗೆ ತಮ್ಮ ಕೌಶಲ್ಯವನ್ನು ಕೂಡಾ ಹೊರ ಹಾಕಿದಾಗ ಗುರಿಯೆಡೆಗೆ ಸಾಗಲು ಸಹಕಾರಿಯಾಗಲಿದೆ ಎಂದರು.

ಸಹಾಯಕ ಪ್ರಾಧ್ಯಾಪಕ ನೌಶಾದ್ ಹೆಚ್. ಸಂಸ್ಥೆ ಬಗ್ಗೆ ವಿವರಿಸಿದರು. ನೆಲ್ಯಹುದಿಕೇರಿ ಗ್ರಾಪಂ ಅಧ್ಯಕ್ಷೆ ಧನಲಕ್ಷಿö್ಮ, ಶಂಸುಲ್ ಉಲಮಾ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ಸಿಪಿಎಂ ಬಶೀರ್ ಹಾಜಿ, ವಕ್ಫ್ಬೋರ್ಡ್ ಮಾಜಿ ಅಧ್ಯಕ್ಷ ಯಾಕೂಬ್ ಬಜೆಗುಂಡಿ, ಕುಶಾಲನಗರ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ವಿ.ಎಸ್ ಸಜಿ, ಹೊದ್ದೂರು ಗ್ರಾಪಂ ಪಿಡಿಓ ಅಬ್ದುಲ್ಲ, ನೆಲ್ಯಹುದಿಕೇರಿ ಪಿಡಿಓ ನಂಜುAಡ ಸ್ವಾಮಿ ಮತ್ತು ಇತರರಿದ್ದರು.