ಚೆಯ್ಯಂಡಾಣೆ, ಆ. ೨೮: ಕೊಡಗು ಜಿಲ್ಲಾ ಸಾದಾತ್ ಸಂಗಮ ಎಮ್ಮೆಮಾಡುವಿನಲ್ಲಿ ನಡೆಯಿತು. ಎಮ್ಮೆಮಾಡು ಶಾದಿ ಮಹಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರ್ವಾಹಣ ಸಮಿತಿಯ ಅಧ್ಯಕ್ಷ ಅಬ್ದುಲ್ ಅಜೀಜ್ ತಂಞಳ್ ವಹಿಸಿದ್ದರು.

ಸಯ್ಯದ್ ಶಿಯಾಬುದ್ದೀನ್ ಕಿಲ್ಲೂರ್ ತಂಗಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಬ್ದುಲ್ ಜಬ್ಬಾರ್ ಸಖಾಫಿ ಮಾತನಾಡಿ ಸಾದಾತುಗಳ ಬಗ್ಗೆ ಅಪಾರ ಗೌರವವಿರಬೇಕು, ಕೊಡಗಿನಲ್ಲೂ ಕೂಡ ಹಲವಾರು ಸಾದಾತುಗಳಿದ್ದಾರೆ. ಸದಾತ್ ಸಂಘದಿAದ ಉತ್ತಮ ಕಾರ್ಯಕ್ರಮಗಳು ನಡೆಯಲಿ ಎಂದರು.

ಈ ಸಂದರ್ಭ ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅಬೂಬಕರ್ ಸಖಾಫಿ, ಸಯ್ಯದ್ ಶರಫುದ್ದೀನ್ ತಂಞಳ್, ಸಯ್ಯದ್ ಇಸ್ಹಾಕ್ ತಂಞಳ್, ಸಯ್ಯದ್ ಅಬ್ದುಲ್ ಖಾದರ್ ತಂಞಳ್ ಅಯ್ಯಂಗೇರಿ, ಶಿಯಾಬುದ್ಧೀನ್ ತಂಞಳ್ ಗೋಣಿಕೊಪ್ಪ, ಪಿ.ಎಂ, ಎಸ್ ಎ ತಂಞಳ್ ನೆಲ್ಲಿಹುದಿಕೇರಿ ಸೇರಿದಂತೆ ಹಲವಾರು ನೇತಾರರು ಪಾಲ್ಗೊಂಡಿದರು.

ಕೊಡಗು ಜಿಲ್ಲೆಗೆ ನೂತನ ಆಯ್ಕೆ ಯಾದ ಸಾದಾತ್ ಪದಾಧಿಕಾರಿಗಳು ಅಧ್ಯಕ್ಷರಾಗಿ ಸಯ್ಯದ್ ಇಲ್ಯಾಸ್ ಆಲ್ ಹೈದರೂಸಿ ತಂಞಳ್ ಎಮ್ಮೆಮಾಡು, ಉಪಾಧ್ಯಕ್ಷರಾಗಿ ಶರಫುದ್ದಿನ್ ತಂಞಳ್, ಮುತ್ತುಕೋಯಾ ತಂಞಳ್, ಪ್ರಧಾನ ಕಾರ್ಯದರ್ಶಿಯಾಗಿ ಸಯ್ಯದ್ ಅಬ್ದುಲ್ ಖಾದರ್ ತಂಞಳ್, ಕೋಶಾಧಿಕಾರಿಯಾಗಿ ಸಯ್ಯದ್ ಶಿಯಾಬುದ್ದೀನ್ ತಂಞಳ್ ಕಿಲ್ಲೂರು, ಸಹ ಕಾರ್ಯದರ್ಶಿಯಾಗಿ ಶಿಯಾಬ್ ತಂಞಳ್ ಹೊಸತೋಟ ಹಾಗೂ ಶಿಯಾಬ್ ತಂಞಳ್ ಗೋಣಿಕೊಪ್ಪ ಹಾಗೂ ೧೧ ಮಂದಿಯನ್ನು ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳ ಆಯ್ಕೆ ನೇತೃತ್ವವನ್ನು ಸಯ್ಯದ್ ಅಬ್ದುಲ್ ಖಾದರ್ ತಂಞಳ್ ವಹಿಸಿದರು. ಕಾರ್ಯಕ್ರಮದಲ್ಲಿ ಸಯ್ಯದ್ ಅಬ್ದುಲ್ ಅಝೀಜ್ ತಂಞಳ್ ಪ್ರಾರ್ಥಿಸಿ, ಇಲ್ಯಾಸ್ ಅಲ್ ಹೈದರೂಸಿ ತಂಞಳ್ ಸ್ವಾಗತಿಸಿ, ಸಯ್ಯದ್ ಸಮೀಜ್ ತಂಞಳ್ ವಂದಿಸಿದರು.