ಶನಿವಾರಸಂತೆ, ಆ. ೨೮: ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕೊಡಗು ಜಿಲ್ಲಾ ಕಟ್ಟಡ ನಿರ್ಮಾಣ ಹಾಗೂ ಕೂಲಿ ಕಾರ್ಮಿಕರ ಸಂಘ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೋಂದಾಯಿತ ಕಾರ್ಮಿಕರಿಗೆ ಪೂರ್ವಭಾವಿ ಕಲಿಕಾ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಕಾರ್ಮಿಕ ಇಲಾಖೆ ಹಾಗೂ ಎಸಿಸಿಪಿಎಲ್ ಟ್ರೆöÊನಿಂಗ್ ಹಾಗೂ ಇನ್ಟಾç ಪ್ರೆöÊವೇಟ್ ಲಿಮಿಟೆಡ್‌ನ ತರಬೇತುದಾರರಾದ ವಸಂತ್ ಕುಮಾರ್ ಹಾಗೂ ಸಂತೋಷ್ ತರಬೇತಿಯನ್ನು ನೀಡಿದರು. ಕಾರ್ಮಿಕರು ಕೆಲಸದ ಸಂದರ್ಭ ಸುರಕ್ಷಿತ ಕ್ರಮಗಳನ್ನು ಕೈಗೊಂಡು ಕೆಲಸ ನಿರ್ವಹಿಸಬೇಕು ಎಂದು ಮಾಹಿತಿ ನೀಡಿದರು.

ಶನಿವಾರಸಂತೆ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಜೆ. ವಿಠಲ್ ನಾಗರಾಜ್ ಹಾಗೂ ಕೊಡ್ಲಿಪೇಟೆ ಸಂಜೀವಿನಿ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಎ. ನಾಗೇಶ್ ಅವರು ಮಾತನಾಡಿ, ಕಲಿಕಾ ತರಬೇತಿಯನ್ನು ಪಡೆದುಕೊಳ್ಳುವ ಪ್ರತಿ ಕಾರ್ಮಿಕರು ಸರ್ಕಾರದಿಂದ ಬರುವ ಎಲ್ಲಾ ಯೋಜನೆ, ಮಾಹಿತಿಗಳನ್ನು ತಿಳಿದುಕೊಂಡು ಸಿಗುವ ಸೌಲಭ್ಯ-ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ತರಬೇತಿಯೊಂದಿಗೆ ಕಾರ್ಮಿಕರಿಗೆ ಬೆಂಗಳೂರಿನ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ವೈದ್ಯೆ ಡಾ.ತುಂಗಾ ಹಾಗೂ ಸಿಬ್ಬಂದಿ ಉಚಿತ ಆರೋಗ್ಯ ತಪಾಸಣೆಯನ್ನು ಏರ್ಪಡಿಸಲಾಗಿದ್ದು ಕಾರ್ಮಿಕರು ತಪಾಸಣೆಯನ್ನು ಮಾಡಿಸಿಕೊಂಡರು.

ಶನಿವಾರಸAತೆ ಕಾರ್ಮಿಕರ ಸಂಘ ಹಾಗೂ ಕೊಡ್ಲಿಪೇಟೆ ಸಂಜೀವಿನಿ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯ ಕಾರ್ಮಿಕರು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.