ವೀರಾಜಪೇಟೆ, ಆ. ೨೮: ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಸಂಸ್ಥೆಯ ಮಹಾಸಭೆ ಪಟ್ಟಣ ಸಹಕಾರ ಬ್ಯಾಂಕ್‌ನ ಸಭಾಂಗಣದಲ್ಲಿ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಸ್ಥೆ ಪ್ರಾರಂಭಗೊAಡು ಐದು ವರ್ಷಕ್ಕೆ ಪಾದರ್ಪಣೆ ಮಾಡುತ್ತಿದ್ದು ಸದಸ್ಯರುಗಳು, ಸಹಕಾರಿಗಳು ಮತ್ತು ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರಕುತ್ತಿರುವುದರಿಂದ ಆರ್ಥಿಕ ವ್ಯವಹಾರಗಳು ಪ್ರಗತಿಯಲ್ಲಿ ಸಾಗಿಸುತ್ತಿದೆ ಎಂದು ಹೇಳಿದರು. ಈ ಸಂಸ್ಥೆಯು ವೀರಾಜಪೇಟೆ, ಮಡಿಕೇರಿ, ಪೊನ್ನಂಪೇಟೆ ಮೂರು ತಾಲೂಕುಗಳಲ್ಲಿ ಶಾಖೆ ಒಳಗೊಂಡಿದೆ.

೧೩೧೦ ಸದಸ್ಯರುಗಳನ್ನು ಹೊಂದಿದೆ. ಪಾಲು ಬಂಡವಾಳ ೮೦.೧೦ ಲಕ್ಷಗಳಾಗಿದ್ದು ವಿವಿಧ ಠೇವಣಿಗಳಿಂದ ೬೦೭.೩೧ ಲಕ್ಷ ಸಂಗ್ರಹಣೆ ಆಗಿದೆ. ೪೬೪.೬೬ ಲಕ್ಷ ವಿವಿಧ ಬಗೆಯ ಸಾಲ ಸೌಲಭ್ಯಗಳನ್ನು ನೀಡಲಾಗಿದ್ದು ಶೇ ೯೯.೨೫ ರಷ್ಟು ಸಾಲ ವಸೂಲಾತಿ ಮಾಡಲಾಗಿದೆ. ಇತರೆ ಬ್ಯಾಂಕಿನಲ್ಲಿ ಠೇವಣಿಯಾಗಿ ೨೪೦ ಲಕ್ಷ ಹೂಡಿಕೆ ಮಾಡಲಾಗಿದ್ದು ೨೦೨೩-೨೪ನೇ ಸಾಲಿನಲ್ಲಿ ೧೭,೮೩,೭೬೪ ಲಕ್ಷ ಲಾಭ ಗಳಿಸಿದೆ. ಲಾಭಾಂಶವನ್ನು ಸಹಕಾರಿಗಳ ನಿಯಮಾನುಸಾರ ವಿಲೇವಾರಿ ಮಾಡಲಾಗುವುದು ಎಂದರು.

ಮುಲ್ಲೆಂಗಡ ಶಂಕರಿ ಪೊನ್ನಪ್ಪ ಮಾತನಾಡಿ ಕಳೆದ ಐದು ವರ್ಷಗಳಲ್ಲಿ ಸಂಘದ ಕಾರ್ಯ ಚಟುವಟಿಕೆಗಳು ಉತ್ತಮವಾಗಿದ್ದು, ಮುಂದಿನ ತಿಂಗಳಲ್ಲಿ ಚುನಾವಣೆ ಇರುವುದರಿಂದ ದುಂದು ವೆಚ್ಚ ಮಾಡದೆ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಸಲಹೆ ನೀಡಿದರು. ಇವರ ಸಲಹೆಗೆ ಕೋಲತಂಡ ಸುಬ್ರಮಣಿ, ಹಾಗು ಪಟ್ಟಡ ಪೂವಣ್ಣ ಧ್ವನಿಗೂಡಿಸಿದರು.

ಸೌಹಾರ್ದ ಡೆವಲಪ್‌ಮೆಂಟ್ ಜಿಲ್ಲಾ ಅಧಿಕಾರಿ ಸುರೇಶ್ ಮಾತನಾಡಿ, ಸಂಸ್ಥೆಯ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರು ಹಾಗೂ ಸಂಸ್ಥೆಯ ಪಿಗ್ಮಿ ಏಜೆಂಟರುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಚೇಂದAಡ ವಸಂತ್‌ಕುಮಾರ್ ನಿರ್ದೇಶಕರುಗಳಾದ ಕಾಂಡAಡ ಎಂ. ಚರ್ಮಣ, ನೆಲ್ಲಚಂಡ. ಎಂ. ಭೀಮಯ್ಯ, ವಾಂಚಿರ ಟಿ. ನಾಣಯ್ಯ, ಚೇಂದ್ರಿಮಡ ಕೆ. ನಂಜಪ್ಪ, ಕೇಳಪಂಡ ಎನ್. ವಿಶ್ವನಾಥ್, ಕೊಂಗAಡ ಎ. ನಾಣಯ್ಯ, ಕಾಳೇಂಗಡ ಬಿ. ತಿಮ್ಮಯ್ಯ, ಮೇಕೇರಿರ ಪಾಲಿ ಸುಬ್ರಮಣಿ, ಪಟ್ಟಡ ವಿ. ದಿವ್ಯ, ನೆಲ್ಲಮಕ್ಕಡ ಸಿ. ಬೆಳ್ಯಪ್ಪ, ಬೊಳ್ಳೆಪಂಡ ಎಂ. ಸುರೇಶ್, ಐನಂಡ ಪಿ. ಗಣಪತಿ, ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಟ್ಟಡ ಸಿ. ಟೀನಾ ಉಪಸ್ಥಿತರಿದ್ದರು.