ಮಡಿಕೇರಿ, ಆ. ೨೮: ರಾಜ್ಯದ ಭೂಪಟದಲ್ಲಿ ತನ್ನದೇ ಆದ ಜೀವ ವೈವಿದ್ಯತೆಯನ್ನು ಹೊಂದಿರುವ ಕೊಡಗು ಜಿಲ್ಲೆಗೆ, ಪ್ರತ್ಯೇಕವಾದ ವನ್ಯಜೀವಿ ಮತ್ತು ಭೂ ಹಿಡುವಳಿ ದಾಖಲೀಕರಣಕ್ಕೆ ಪೂರಕವಾಗಿ ಪ್ರತ್ಯೇಕ ಯೋಜನೆಯೊಂದನ್ನು ರೂಪಿಸುವಂತೆ, ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ಅವರಿಗೆ ಕೊಡವಾಮೆರ ಕೊಂಡಾಟ ಸಂಘಟನೆ ಮನವಿ ಸಲ್ಲಿಸಿತು.

ಮಂಡಳಿ ಸದಸ್ಯರಾಗಿ ಆಯ್ಕೆಯಾಗುವ ಸಂಕೇತ್ ಪೂವಯ್ಯ ಅವರ ವೀರಾಜಪೇಟೆ ನಿವಾಸದಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ನೇತೃತ್ವದಲ್ಲಿ ಸಂಕೇತ್ ಪೂವಯ್ಯ ಅವರಿಗೆ ಪುಸ್ತಕ ನೀಡುವ ಮೂಲಕ ಅಭಿನಂದಿಸಿ ಮನವಿ ಸಲ್ಲಿಸಲಾಯಿತು.

ಸಂಕೇತ್ ಪೂವಯ್ಯ ಅವರು, ಸಂಘಟನೆಯೊAದಿಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಕರ್ನಾಟಕದಲ್ಲಿ ವಿಭಿನ್ನ ಮೇಲ್ಮೈ ಲಕ್ಷಣ ಹೊಂದಿರುವ ಕೊಡಗು, ಪ್ರಾಕೃತಿಕವಾಗಿ, ಭೌಗೋಳಿಕವಾಗಿಯೂ ಇತರ ಎಲ್ಲಾ ಜಿಲ್ಲೆಗಳಿಗಿಂತಲೂ ಭಿನ್ನ. ಹಾಗೇ ಇಲ್ಲಿಯ ಜನ, ಜಾನುವಾರು, ಕೃಷಿ, ತೋಟಗಾರಿಕೆ ಮತ್ತು ವನ್ಯಜೀವಿ ಸಂಕುಲವೂ ವಿಭಿನ್ನವೇ. ಕೊಡಗಿನ ಮೂಲ ನಿವಾಸಿಗಳು ತಲೆತಲಾಂತರದಿAದ ಅರಣ್ಯ ಹಾಗೂ ಭೂಮಿಯ ಮಹತ್ವವನ್ನು ಅರಿತು, ತಮ್ಮದೇ ಆದ ಭಾವನಾತ್ಮಕ ಶೈಲಿಯಲ್ಲಿ ಪರಿಸರವನ್ನ ರಕ್ಷಿಸಿಕೊಂಡು ಬರುತ್ತಿದ್ದಾರೆ. ಜೊತೆಗೆ ತಮ್ಮ ಬೆಳೆ ಮತ್ತು ಜೀವಗಳನ್ನು ಕೂಡ ಅಷ್ಟೇ ಪ್ರಾಮುಖ್ಯತೆಯಿಂದ ಕಾಪಾಡಿಕೊಂಡಿದ್ದಾರೆ.

ಆದರೆ ಇತ್ತೀಚಿಗಿನ ಸರ್ಕಾರಗಳ ಹಲವು ನಿಯಮಗಳಿಂದಾಗಿ ಮತ್ತು ನಿರಂತರವಾಗಿ ಭೂ ಒತ್ತುವರಿ, ವಲಸೆ ಮತ್ತು ಪ್ರಕೃತಿಗೆ ವಿರುದ್ಧವಾದ ಅಭಿವೃದ್ಧಿ ಕಾರ್ಯಗಳಿಂದ ಕೊಡಗಿನಲ್ಲಿ ಮಾನವ, ವನ್ಯಪ್ರಾಣಿ ಸಂಘರ್ಷಗಳು ಹೆಚ್ಚಾಗಿದ್ದು, ನಿರಂತರ ಜೀವಹಾನಿ ನಡೆಯುತ್ತಿದೆ.

ದಕ್ಷಿಣ ಕೊಡಗು ಭಾಗದಲ್ಲಿ ಹುಲಿ ಆನೆಯ ಸಮಸ್ಯೆಯಾದರೆ ಉತ್ತರ ಕೊಡಗು ಭಾಗದಲ್ಲಿ ಕಾಡುಹಂದಿಯ ಕಾರಣದಿಂದ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ. ಜೊತೆಗೆ ಕೊಡಗಿನಲ್ಲಿ ಉಂಟಾಗಿರುವ ಭೂ ಮಾಲೀಕತ್ವ, ಜಮ್ಮಾ ಹಿಡುವಳಿ ಗೊಂದಲ, ಅತಿಯಾದ ವಾಣಿಜ್ಯೀಕರಣ, ಯುವ