ಸೋಮವಾರಪೇಟೆ, ಆ. ೨೯: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಮತ್ತು ಅರಿವು ಕೇಂದ್ರದ ವತಿಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ, ಪಂಚಾಯತ್ ರಾಜ್ ಇಲಾಖೆ ಮತ್ತು ಶಿಕ್ಷಣ ಫೌಂಡೇಶನ್ ಮೂಲಕ ಡಿಜಿಟಲ್ ಸಾಕ್ಷರತೆ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಿಕ್ಷಣ ಫೌಂಡೇಷನ್‌ನ ಜಿಲ್ಲಾ ಸಂಯೋಜಕರಾದ ರಕ್ಷಿತ್ ಮತ್ತು ದಿಲೀಪ್ ಅವರುಗಳು, ಮೊಬೈಲ್ ಬಳಕೆಯಿಂದಾಗುವ ಪರಿಣಾಮಗಳು, ದುರುಪಯೋಗವಾಗುವ ಸಂಭವಗಳು, ಅನಪೇಕ್ಷಿತ ಆ್ಯಪ್‌ಗಳ ಬಳಕೆಯಿಂದಾಗುವ ಕಷ್ಟನಷ್ಟಗಳ ಬಗ್ಗೆ ಅರಿವು ಮೂಡಿಸಿದರು.

ಗ್ರಂಥಾಲಯದ ವತಿಯಿಂದ ಇಂತಹ ಉಪಯುಕ್ತ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಹಲವಷ್ಟು ಮಹಿಳೆಯರಿಗೆ ಮೊಬೈಲ್ ಬಳಕೆ, ದುರುಪಯೋಗದ ಬಗ್ಗೆ ಪ್ರಾಥಮಿಕ ಮಾಹಿತಿಯೇ ಇರುವುದಿಲ್ಲ. ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿ ಹೆಚ್ಚು ನಡೆಸಬೇಕೆಂದು ತಣ್ಣೀರುಹಳ್ಳದ ಸ್ಪೂರ್ತಿ ಅಭಿಪ್ರಾಯಿಸಿದರು. ಗ್ರಂಥಾಲಯದ ಮೇಲ್ವಿಚಾರಕಿ ಪದ್ಮಾವತಿ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.