ಮಡಿಕೇರಿ, ಆ. ೨೮: ಭಾಗಮಂಡಲ ವ್ಯಾಪ್ತಿಯಲ್ಲಿ ನಕಲಿ ಬಂದೂಕು ತಯಾರಿಕೆ ಹಾಗೂ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಇದೀಗ ಮತ್ತೊಂದು ಬಂದೂಕು ಸಿಕ್ಕಿದ್ದು, ಈ ಸಂಬAಧ ಪೊಲೀಸರು ಓರ್ವನನ್ನು ಬಂದಿಸಿದ್ದಾರೆ. ಈರ್ವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಸಣ್ಣಪುಲಿಕೋಟು ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ಮಾಡಿ ಕೇರಳದ ಇಡುಕ್ಕಿ ಜಿಲ್ಲೆಯ ಸುರೇಶ್ ಹಾಗೂ ಬಂದೂಕು ಖರೀದಿ ಮಾಡಿದ್ದ ಮೂವರನ್ನು ಈ ಹಿಂದೆ ಬಂದಿಸಿದ್ದರು. ಬಂದಿತರಿAದ ಎರಡು ನಾಡ ಬಂದೂಕು, ಒಂದು ಪಿಸ್ತೂಲ್‌ಅನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದೀಗ ಮತ್ತೊಂದು ಬಂದೂಕು ಪತ್ತೆಯಾಗಿದ್ದು, ಇನ್ನೋರ್ವನನ್ನು ಬಂದಿಸಲಾಗಿದೆ.

ಕರಿಕೆ ಗ್ರಾಮದ ಕೆ.ಐ. ದಿನೇಶ ಎಂಬಾತ ಬಂದೂಕು ಖರೀದಿಸಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂದೂಕು ವಶಪಡಿಸಿಕೊಂಡು ಆತನನ್ನು ಬಂದಿಸಿದ್ದಾರೆ. ರೂ.೩೦ ಸಾವಿರಕ್ಕೆ ಸುರೇಶ ನಿಂದ ಬಂದೂಕು ಖರೀದಿಸಿದ್ದ ದಿನೇಶ ನಕಲಿ ಬಂದೂಕು ತಯಾರಿಕೆ ಹಾಗೂ ಮಾರಾಟ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಂದೂಕನ್ನು ಬಿಡಿ ಬಿಡಿಯಾ ಗಿರಿಸಿ ತೋಟದಲ್ಲಿ ಅವಿತ್ತಿಟ್ಟಿದ್ದ. ಪೊಲೀಸರು ವಿಚಾರಣೆಗೊಳಪಡಿಸಿದ ಸಂದರ್ಭ ಬಿಡಿಯಾಗಿದ್ದ ಬಂದೂಕುಗಳ ಭಾಗಗಳನ್ನು ತಂದೊಪ್ಪಿಸಿದ್ದಾನೆ. ಇದೀಗ ಪೊಲೀಸರು ಆತನನ್ನು ಬಂಧನಕ್ಕೊಳಪಡಿಸಿದ್ದು, ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ. ಈ ನಡುವೆ ದಿನೇಶನಿಗೆ ನಕಲಿ ಬಂದೂಕು ತಯಾರಿ ಮಾಡು ತ್ತಿರುವ ಸುರೇಶನನ್ನು ಪರಿಚಯ ಮಾಡಿಕೊಟ್ಟಿರುವ ಕರಿಕೆ ಗ್ರಾಮದ ಬಾಲಕೃಷ್ಣ ಹಾಗೂ ಪ್ರಭಾಕರ ಎಂಬವರುಗಳನ್ನು ಕೂಡ ಪೊಲೀಸರು ವಿಚಾರಣೆಗೊ ಳಪಡಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬAಧಿಸಿ ದಂತೆ ಪೊಲೀಸರು ಕೊಡಗು ಜಿಲ್ಲೆ ಸೇರಿದಂತೆ ಕೇರಳ, ಪಿರಿಯಾಪಟ್ಟಣ ಹೀಗೇ ಸುಮಾರು ೫೦ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಪರಿಶೀಲನೆ ಮಾಡಿದ್ದಾರೆ. ? ಸಂತೋಷ್