ಕೋವರ್‌ಕೊಲ್ಲಿ ಇಂದ್ರೇಶ್

ಬೆಂಗಳೂರು, ಆ. ೨೯: ಇನ್ನು ಮುಂದೆ ಕರ್ನಾಟಕ ಸರ್ಕಾರದಿಂದ ಜಾಹೀರಾತನ್ನು ಪಡೆಯಲು ನೀವು ಮುದ್ರಣ ಮಾಧ್ಯಮ ಅಥವಾ ಸ್ಯಾಟಲೈಟ್ ದೃಶ್ಯ ಮಾಧ್ಯಮವನ್ನೇ ಹೊಂದಿರಬೇಕಾಗಿಲ್ಲ. ರಾಜ್ಯ ಸರ್ಕಾರ ತೆಗೆದುಕೊಂಡಿರುವ ಮಹತ್ತರ ನಿರ್ಧಾರದಲ್ಲಿ ಇನ್ನು ಮುಂದೆ ಡಿಜಿಟಲ್ ಮಾಧ್ಯಮ, ಅಷ್ಟೇಕೆ ಪ್ರಭಾವೀ ಸಾಮಾಜಿಕ ಮಾಧ್ಯಮ ಬಳಕೆದಾರರಿಗೂ ಜಾಹೀರಾತು ಸಿಗಲಿದೆ. ಇದರಿಂದಾಗಿ ಡಿಜಿಟಲ್ ಬಳಕೆದಾರರಿಗೆ ಸರ್ಕಾರದಿಂದ ಒಂದಷ್ಟು ಆದಾಯವೂ ಹರಿದುಬರಲಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮಗಳು ಹೆಚ್ಚು ಪ್ರಚಲಿತವಾಗಿದ್ದು, ಅದರಲ್ಲಿ ಸರ್ಕಾರದ ಜಾಹೀರಾತು ಪ್ರಕಟ ಮಾಡುವುದರಿಂದ ಹೆಚ್ಚು ಯುವ ಸಮೂಹವನ್ನು ತಲುಪಲು ಸಹಾಯವಾಗುತ್ತದೆ. ಯೂಟ್ಯೂಬ್‌ನಲ್ಲೋ, ಫೇಸ್‌ಬುಕ್‌ನಲ್ಲೋ , ಎಕ್ಸ್ನಲ್ಲೋ ಒಂದು ಆಸಕ್ತಿ ಕೆರಳಿಸುವ ವೀಡಿಯೋ ಮಿಲಿಯನ್‌ಗಟ್ಟಲೆ ವೀಕ್ಷಣೆಗಳನ್ನು ಪಡೆಯುತ್ತಿದೆ. ಇದರ ಮಹತ್ವ ಮನಗಂಡಿರುವ ಸರ್ಕಾರ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ ೨೦೨೪ನ್ನು ಜಾರಿಗೊಳಿಸಿ, ಡಿಜಿಟಲ್ ಜಾಹೀರಾತಿಗೆ ಮನ್ನಣೆ ನೀಡಲು ನಿರ್ಧಾರ ಮಾಡಿದೆ.

ಈ ಹಿನ್ನೆಲೆ ಡಿಜಿಟಲ್ ಜಾಹೀರಾತುಗಳಿಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು ನೀಡಲು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಡಿಜಿಟಲ್ ಇನ್‌ಫ್ಲುಯೆನ್ಸರ್‌ಗಳ (iಟಿಜಿಟueಟಿಛಿeಡಿs) ಆಯ್ಕೆಗೆ ಮಾನದಂಡ ನಿಗದಿ ಮಾಡಿದ್ದು, ಡಿಜಿಟಲ್ ಜಾಹೀರಾತು ಏಜೆನ್ಸಿಗಳಿಗೂ ಮಾನದಂಡ ಹೇರಲಾಗಿದೆ. ವೀಡಿಯೋ ಸ್ಕಿçÃಮಿಂಗ್ ಪ್ಲಾಟ್‌ಫಾರ್ಮ್ಗಳು: ಗೂಗಲ್(ಯೂಟ್ಯೂಬ್), ಮೆಟಾ(ಫೇಸ್ಬುಕ್), ಇನ್ಸಾ÷್ಟಗ್ರಾಂ, ವಾಟ್ಸಾö್ಯಪ್ ಬಿಸಿನೆಸ್, ಇತರೆ ಅಲ್ಲದೆ ಸರ್ಚ್ ಇಂಜಿನ್‌ಗಳಾದ ಗೂಗಲ್, ಬಿಂಗ್‌ಸ ಮೈಕ್ರೋ ಸಾಫ್ಟ್ ಎಡ್ಜ್ ಮತ್ತು ಫೈರ್ ಫಾಕ್ಸ್, ಒಟಿಟಿ ಪ್ಲಾಟ್‌ಫಾರ್ಮ್ಗಳಾದ ನೆಟ್‌ಫ್ಲಿಕ್ಸ್, ಅಮೇಜಾನ್ ಫ್ರೆöÊಮ್, ಸನ್ನೆಕ್ಟ್÷್ಸ, ಜಿಯೋ ಪ್ರೆöÊಮ್ , ಫಿನ್ಟೆಕ್ ಪ್ಲಾಟ್‌ಫಾರ್ಮ್ಗಳಾದ ಪೇಟಿಎಂ, ಫೋನ್‌ಪೇ ಮತ್ತು ಗೂಗಲ್ ಪೇ, ಸ್ವಿಗ್ಗಿ , ಜೊಮ್ಯಾಟೋ, ಓಲಾ , ಊಬರ್ ಇತರೆ ವೇದಿಕೆಗಳಲ್ಲೂ ಇನ್ನು ಜಾಹೀರಾತು ಪಡೆಯಲು ಅವಕಾಶ ಇದೆ.

ಸರ್ಕಾರದ ಡಿಜಿಟಲ್ ಜಾಹೀರಾತು ಪಡೆಯಲು ಸುದ್ದಿ ವೆಬ್ ಸೈಟ್ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೋಂದಾವಣೆ ಮಾಡಿಸಿದ್ದು ಭಾರತ ಸರ್ಕಾರದ ರಿಜಿಸ್ಟಾರ್ ಆಫ್ ಕಂಪನೀಸ್ ಅಲ್ಲಿ ನೋಂದಣಿಯಾದ ಕಾನೂನುಬದ್ದ ಸಂಘಟಿತ ಘಟಕವಾಗಿರಬೇಕು-ಪ್ರೈವೇಟ್ ಲಿಮಿಟೆಡ್ ಕಂಪನಿ ಅಥವಾ ಪಬ್ಲಿಕ್ ಲಿಮಿಟೆಡ್ ಕಂಪನಿ, ಲಿಮಿಟೆಡ್ ಆಗಿರಬೇಕು. ನೋಂದಾಯಿಸುವ ಸಮಯದಲ್ಲಿ ಕನಿಷ್ಟ ಎರಡು ವರ್ಷಹಳೆಯದಾಗಿರಬೇಕು. ಮಾನ್ಯವಾದ ಜಿಎಸ್ಟಿ ನೋಂದಣಿ ಇರಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಅಥವಾ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಕಛೇರಿ ಇರಬೇಕು. ಕನ್ನಡ ಮತ್ತು ಇಂಗ್ಲೀಟ್‌ನಲ್ಲಿ ಪ್ರಾಮುಖ್ಯತೆ ಇರಬೇಕು.

ಒಂದು ವೇಳೆ ನೀವು ಸಾಮಾಜಿಕ ಜಾಲತಾಣದ ಪ್ರಭಾವೀ ಆಗಿದ್ದು ಜಾಹೀರಾತು ಪಡೆಯಬಯಸಿದರೆ ಕನಿಷ್ಟ ಒಂದು ಲಕ್ಷದಷ್ಟು ಸಂಖ್ಯೆಯ ಹಿಂಬಾಲಕರನ್ನು ಹೊಂದಿರಬೇಕಾಗುತ್ತದೆ. ಇನ್‌ಫ್ಲುಯೆನ್ಸರ್‌ಗಳಲ್ಲಿ ಮೂರು ವರ್ಗೀಕರಣ ಮಾಡಲಾಗಿದೆ. ಫಾಲೋವರ್‌ಗಳ ಸಂಖ್ಯೆ ೧ ಲಕ್ಷದಿಂದ ೫ ಲಕ್ಷದವರೆಗೆ ಇದ್ದರೆ ‘ನ್ಯಾನೊ’, ೫ ಲಕ್ಷದಿಂದ ೧೦ ಲಕ್ಷದವರೆಗೆ ‘ಮೈಕ್ರೊ’ ಮತ್ತು ೧೦ ಲಕ್ಷಕ್ಕಿಂತ ಹೆಚ್ಚು ಇದ್ದರೆ ‘ಮ್ಯಾಕ್ರೊ’ ಇನ್‌ಫ್ಲುಯೆನ್ಸರ್‌ಗಳು ಎಂದು ವರ್ಗೀಕರಿಸಲಾಗಿದೆ. ರಾಜ್ಯ ವಾರ್ತಾ ಇಲಾಖೆಯು ನೋಂದಾಯಿತ ಏಜೆನ್ಸಿಗಳ ಮೂಲಕ ಸರ್ಕಾರ ಜಾಹೀರಾತು ನೀಡಲಿದ್ದು, ಕೇಂದ್ರ ಸರ್ಕಾರದ ಡಿಜಿಟಲ್ ಜಾಹೀರಾತು ನೀತಿಯ ಅಡಿಯಲ್ಲಿ ನಿಗದಿಪಡಿಸಲಾದ ಅಥವಾ ಇಲಾಖೆಯೇ ಸ್ವತಂತ್ರವಾಗಿ ನಿಗದಿಪಡಿಸಿದ ದರದಲ್ಲಿ ಜಾಹೀರಾತು ನೀಡಲಾಗುತ್ತದೆ.