ಗೋಣಿಕೊಪ್ಪ ವರದಿ, ಆ. ೨೮: ಬನವಾಸಿ ಕನ್ನಡಿಗ ಟ್ರಸ್ಟ್ ವತಿಯಿಂದ ವಿ. ಬಾಡಗ, ಕುಟ್ಟಂದಿ ಮತ್ತು ಕಲ್ತೋಡು ಶಾಲೆಗಳ ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್ ಪುಸ್ತಕ ಮತ್ತು ಶಿಕ್ಷಣ ಪೂರಕ ಪರಿಕರ ವಿತರಣೆ ಮಾಡಲಾಯಿತು. ವಿ. ಬಾಡಗ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು ೧೨೦ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.

ಬನವಾಸಿ ಕನ್ನಡಿಗ ಟ್ರಸ್ಟ್ ಅಧ್ಯಕ್ಷ ಶಮಂತ್ ಮಾತನಾಡಿ, ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರಿಂದ ಶಿಕ್ಷಣಕ್ಕೆ ನೆರವಾಗಲಿದೆ ಎಂದರು.

ಬನವಾಸಿ ಕನ್ನಡಿಗ ಟ್ರಸ್ಟಿ ಜೈ ಕಿರಣ್ ಮಾತನಾಡಿ, ಪ್ರವಾಸಿಗರು ಸ್ಥಳೀಯ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಯೋಜನೆ ರೂಪಿಸಿಕೊಳ್ಳಬೇಕಿದೆ ಎಂದರು.

ಪೊನ್ನAಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಸರ್ಕಾರಿ ಶಾಲೆ ಸಾಕಷ್ಟು ಪ್ರತಿಭೆಗಳ ಬೆಳವಣಿಗೆಗೆ ಮೂಲ ಸ್ಥಾನವಾಗಿದ್ದು, ವಿದ್ಯಾರ್ಥಿಗಳಿಗೆ ಪೋತ್ಸಾಹ ಅಗತ್ಯ ಎಂದರು.

ವಿ. ಬಾಡಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಂಜಿತAಡ ಗಿಣಿ ಮೊಣ್ಣಪ್ಪ, ಟ್ರಸ್ಟಿ ಕಿರಣ್ಮಯಿ, ನಿವೃತ್ತ ಶಿಕ್ಷಕಿ ಸೀತಮ್ಮ, ವಿ. ಬಾಡಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯ ಶಿಕ್ಷಕಿ ಗೀತಾಂಜಲಿ, ಸಹ ಶಿಕ್ಷಕಿ ಕಾವೇರಮ್ಮ, ಕಲ್ತೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಿರಿಯ ಶಿಕ್ಷಕಿ ಸಾವಿತ್ರಿ, ಶಿಕ್ಷಕಿ ಗೌರಿ, ಕುಟ್ಟಂದಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯ ಶಿಕ್ಷಕಿ ಧರಣಿ, ಶಿಕ್ಷಕಿಯರಾದ ಕಮಲಾಕ್ಷಿ, ಮಲ್ಲಾಜಿ ಇದ್ದರು.