ಸೋಮವಾರಪೇಟೆ, ಆ. ೨೮: ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ ೬೦ ವರ್ಷಗಳು ತುಂಬಿದ್ದು, ಇದರ ನೆನಪಿಗಾಗಿ ಸೆ. ೧ ರಂದು ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಷಷ್ಠಿಪೂರ್ತಿ ಕಾರ್ಯಕ್ರಮ, ಮಕ್ಕಳಿಗೆ ಶ್ರೀ ಕೃಷ್ಣ ಹಾಗೂ ರಾಧೆಯರ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಪರಿಷತ್‌ನ ತಾಲೂಕು ಅಧ್ಯಕ್ಷ ಎ.ಎಸ್. ಮಲ್ಲೇಶ್ ತಿಳಿಸಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸಿ, ಹಿಂದೂಗಳೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿ, ವಿಶ್ವದೆಲ್ಲೆಡೆ ಸನಾತನ ಧರ್ಮದ ಹಿರಿಮೆಯನ್ನು ಸಾರುತ್ತಿರುವ ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ ೬೦ ವರ್ಷ ಸಂದಿದೆ. ಇದರ ಅಂಗವಾಗಿ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದರು.

ಸ್ಥಳೀಯ ಕೊಡವ ಸಮಾಜದಲ್ಲಿ ಸೆ. ೧ ರಂದು ಬೆಳಿಗ್ಗೆ ೧೦.೩೦ ಗಂಟೆಯಿAದ ಕಾರ್ಯಕ್ರಮ ಆರಂಭಗೊಳ್ಳಲಿದೆ. ವಿರಕ್ತ ಮಠಾಧೀಶರಾದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಕೊಡವ ಸಮಾಜದ ಅಧ್ಯಕ್ಷ ಅಭಿಮನ್ಯುಕುಮಾರ್, ವಿಎಸ್‌ಎಸ್‌ಎನ್ ನಿವೃತ್ತ ನೌಕರ ಹೆಚ್.ಹೆಚ್. ಹೂವಯ್ಯ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಭಾಗವಹಿಸಲಿದ್ದು, ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಬೌದ್ಧಿಕ್ ಪ್ರಮುಖ್ ಚಿ.ನಾ. ಸೋಮೇಶ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ೧ ರಿಂದ ೭ ವರ್ಷದೊಳಗಿನ ಮಕ್ಕಳಿಗೆ ರಾಧೆ-ಕೃಷ್ಣರ ಛದ್ಮವೇಷ ಸ್ಪರ್ಧೆ ನಡೆಯಲಿದೆ. ವಯೋಮಿತಿಗೆ ಅನುಸಾರವಾಗಿ ವಿಜೇತರಿಗೆ ಮೂರು ವಿಭಾಗದಲ್ಲಿ ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ: ೭೦೨೬೨೦೨೬೦೬ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.

ನಿರAತರ ಹೋರಾಟ: ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ವಿಶ್ವ ಹಿಂದೂ ಪರಿಷತ್ ನಿರಂತರ ಹೋರಾಟ ನಡೆಸಲಿದೆ. ಲವ್‌ಜಿಹಾದ್, ಮತಾಂತರ, ಗೋಹತ್ಯೆ ಸೇರಿದಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯತ್ನಗಳ ವಿರುದ್ಧ ಪ್ರತಿಭಟಿಸುತ್ತಾ ಬಂದಿದೆ. ಇದೀಗ ಕೊಡಗಿಗೆ ಮತ್ತೊಂದು ಗಂಡಾAತರ ಎದುರಾಗುವ ಕಾಲವೂ ಸನ್ನಿಹಿತವಾಗಿದೆ. ಅಸ್ಸಾಮಿಗರ ಹೆಸರಿನಲ್ಲಿ ಬಾಂಗ್ಲಾ ದೇಶದಿಂದ ಆಗಮಿಸಿರುವ ಅಕ್ರಮ ವಲಸಿಗರು ಜಿಲ್ಲೆಯ ಕಾಫಿ ತೋಟಗಳಲ್ಲಿ ನೆಲೆ ಕಂಡುಕೊAಡಿದ್ದಾರೆ. ಇವರುಗಳಿಂದ ಕೊಡಗಿಗೆ ಮುಂದೊAದು ದಿನ ಗಂಡಾAತರ ಕಟ್ಟಿಟ್ಟ ಬುತ್ತಿಯಾಗಿದೆ ಎಂದರು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಹಿಂದೂ ಪರಿಷತ್, ಜಾಗೃತಿ ಸಭೆಗಳನ್ನು ಆಯೋಜಿಸಲು ತೀರ್ಮಾನಿಸಿದೆ. ಕಾಫಿ ತೋಟ ಮಾಲೀಕರು ತಮ್ಮ ಕಾರ್ಮಿಕರ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕಿದೆ. ಈಗಾಗಲೇ ಮಾಲೀಕರ ಮೇಲೆ ಹಲ್ಲೆ, ಕೊಲೆ ಯತ್ನ ಸೇರಿದಂತೆ ಕಾಫಿ, ಕರಿಮೆಣಸು, ಕಳವು, ದೇವಾಲಯ ಹುಂಡಿ ಕಳವು, ಗೋವುಗಳ ಹತ್ಯೆ, ಗೋ ಮಾಂಸ ಸಾಗಾಟ ಸೇರಿದಂತೆ ಇನ್ನಿತರ ದುಷ್ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಈ ಬಗ್ಗೆಯೂ ಗಮನ ಹರಿಸಬೇಕಾದ ಅಗತ್ಯತೆ ಹೆಚ್ಚಿದೆ ಎಂದರು.

ಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ಡಿ.ಎ. ಪರಮೇಶ್, ಜಿಲ್ಲಾ ಸತ್ಸಂಗ ಪ್ರಮುಖ್ ಪವಿತ್ರ ಶೇಷಾದ್ರಿ, ಜಿಲ್ಲಾ ವಿಧಿ ಪ್ರಕೋಷ್ಟ ಪ್ರಮುಖ್ ಎಸ್.ಜೆ. ಹೇಮಚಂದ್ರ, ಶನಿವಾರಸಂತೆ ಹೋಬಳಿ ಭಜರಂಗದಳ ಸಂಚಾಲಕ್ ದಿಲೀಪ್ ಗುಡುಗಳಲೆ ಅವರುಗಳು ಉಪಸ್ಥಿತರಿದ್ದರು.