ಮಡಿಕೇರಿ, ಆ.೨೯ : ಸರಕಾರ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಕರಾಳ ಕಾನೂನು ಮತ್ತು ಕೊಡಗಿಗೆ ಮಾರಕವಾಗಿರುವ ಬಂಡವಾಳಶಾಹಿಗಳಿಗೆ ಪೂರಕ ಕಾನೂನನ್ನು ಜಾರಿಗೆ ತರುವ ಮೂಲಕ ಕೊಡವರನ್ನು ಶೋಷಣೆ ಮಾಡುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದರು. ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿ.ಎನ್.ಸಿ ವತಿಯಿಂದ ಮೂರ್ನಾಡಿನಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಸರಕಾರ ಬೇರೆ ಬೇರೆ ಯೋಜನೆಗಳಿಗೆ ಹಣ ಖರ್ಚು ಮಾಡಿ ಕೈಸುಟ್ಟುಕೊಂಡಿದೆ. ಆರ್ಥಿಕ ಕ್ರೋಢೀಕರಣಕ್ಕಾಗಿ ಬೃಹತ್ ಭೂಪರಿವರ್ತನೆ ಮಿತಿ ಮೀರಿ ನಡೆಸುತ್ತಿದೆ. ಇದರಿಂದ ಬೃಹತ್ ಪ್ರಮಾಣದ ಹಣ ನೇರ ಮತ್ತು ಪರೋಕ್ಷವಾಗಿ ಚಲಾವಣೆಯಾಗುತ್ತಿದೆ. ಪ್ರಕೃತಿಯ ಮೇಲೆ ಯಾವುದೇ ರೀತಿಯ ದಾಳಿಯಾದರೂ ಆಡಳಿತ ವ್ಯವಸ್ಥೆ ಮಾತ್ರ ತಟಸ್ಥ ಧೋರಣೆ ಅನುಸರಿಸುತ್ತಿದೆ. ಗ್ರೀನ್ ಬೆಲ್ಟ್ ವ್ಯಾಪ್ತಿಯ ಕಡಗದಾಳುವಿನಲ್ಲಿ ಹಿರಿಯ ಅಧಿಕಾರಿಗಳು ಸೋದರ ಸಂಬAಧಿಗಳಿಗೆ ರೆಸಾರ್ಟ್ ನಿರ್ಮಾಣಕ್ಕೆ ಸಹಕಾರ ನೀಡುತ್ತಿದ್ದಾರೆ, ಅಲ್ಲದೆ ಈ ಪ್ರದೇಶವನ್ನು ಮೂಡ ವ್ಯಾಪ್ತಿಗೆ ತರುವ ಪ್ರಯತ್ನ ಸಾಗಿದೆ. ಕೊಡವರು ಹೋರಾಟದ ಮೂಲಕ ವೇದನೆಯನ್ನು ಬಿಚ್ಚಿಟ್ಟರೂ ಯಾವುದೇ ಸ್ಪಂದನ ಮತ್ತು ರಕ್ಷಣೆ ಇಲ್ಲದಾಗಿದೆ ಎಂದು ಆರೋಪಿಸಿದರು.

ಕೊಡವ ಲ್ಯಾಂಡ್ ಅನ್ನು ಉಳಿಸಿಕೊಳ್ಳುವುದಕ್ಕಾಗಿ ಸಿ.ಎನ್.ಸಿ ಸಂಘಟನೆ ಭೂಮಾಫಿಯಾ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಆದರೆ ಅಧಿಕಾರದಲ್ಲಿರುವವರು ಹೋರಾಟದ ದಿಕ್ಕು ತಪ್ಪಿಸಿ ಜನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು, ಹೋಂಸ್ಟೇ ಮತ್ತು ಗೋದಾಮುಗಳ ನಿರ್ಮಾಣಕ್ಕೆ ಅನುಮತಿ ನೀಡದೆ ಸತಾಯಿಸಲು ಆರಂಭಿಸಿದ್ದಾರೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಾತೃಭೂಮಿ ಕೊಡವಲ್ಯಾಂಡ್‌ಗೆ ಸಂಚಕಾರವಾಗಬಲ್ಲ ಬೃಹತ್ ಭೂಪರಿವರ್ತನೆಗೆ ಮಾತ್ರ ಗುಪ್ತವಾಗಿ ಅನುಮತಿ ನೀಡುತ್ತಿದ್ದಾರೆ. ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ ಸರ್ಕಾರವೇ ನೇರವಾಗಿ ಭೂಪರಿವರ್ತನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆಡಳಿತ ವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ``ಕೊಡವ ಲ್ಯಾಂಡ್'' ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್.ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ತಾ.೯ ರಂದು ಜನಜಾಗೃತಿ

ಸಿ.ಎನ್.ಸಿ ವತಿಯಿಂದ ತಾ.೯ ರಂದು ನಾಪೋಕ್ಲು ಹಾಗೂ ತಾ.೧೦ ರಂದು ಚೇರಂಬಾಣೆ, ತಾ.೧೬ ರಂದು ಹುದಿಕೇರಿಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ಮಾಹಿತಿ ನೀಡಿದರು.

ಜನಜಾಗೃತಿ ಕಾರ್ಯಕ್ರಮದಲ್ಲಿ ಪ್ರಮುಖರಾದ ಬೊಳ್ಳಚೆಟ್ಟಿರ ಜಯಂತಿ, ಬಿದ್ದಂಡ ಉಷಾ, ಪೆಮ್ಮುಡಿಯಂಡ ವೇಣು, ನಂದೇಟಿರ ರವಿ, ಬಡುವಂಡ ವಿಜಯ, ಪುದಿಯೊಕ್ಕಡ ಕಾಶಿ, ಪುದಿಯೊಕ್ಕಡ ಬೋಪಣ್ಣ, ಪುದಿಯೊಕ್ಕಡ ಸೋಮಯ್ಯ, ಪ್ರೊ. ಚೌರಿರ ಜಗತ್, ನೆರವಂಡ ಅನೂಪ್, ಪೆಮ್ಮಂಡ ಪವಿತ್ರ, ಚೊಕ್ಕಂಡ ಕಟ್ಟಿ, ಅಚ್ಚಕಾಳೆರ ಸಂತು, ಚಂಗಣಮಕ್ಕಡ ವಿನು, ಅವರೆಮಾದಂಡ ಚಂಗಪ್ಪ, ಅವರೆಮಾದಂಡ ಗಿರಿ, ಚಂಬAಡ ಜನತ್, ಪಳಂಗAಡ ಪ್ರಕಾಶ್, ಕೈಪಟ್ಟಿರ ಚಿಣ್ಣಪ್ಪ, ಮುಂಡAಡ ಪವಿ, ಮೂಡೆರ ಮಾದಪ್ಪ, ಅವರೆಮಾದಂಡ ರಘು, ದೇವಣಿರ ಧನು, ಚೌರಿರ ಗಣೇಶ್, ಅಮ್ಮಾಟಂಡ ಕಾರ್ಯಪ್ಪ, ಅಮ್ಮಾಟಂಡ ಚಂಗಪ್ಪ, ವಾಂಚಿರ ಅಪ್ಪಯ್ಯ, ಅಮ್ಮಾಟಂಡ ಕಾವೇರಪ್ಪ, ಚಂಗAಡ ಚಾಮಿ, ಕೈಪಟ್ಟಿರ ಪ್ರಕಾಶ್, ಪುದಿಯೊಕ್ಕಡ ಈರಪ್ಪ, ಪುದಿಯೊಕ್ಕಡ ಮಧು, ಪಳಂಗAಡ ಮೇದಪ್ಪ, ಮಡೆಯಂಡ ದಾದ, ಬಾರಿಯಂಡ ಸುಬ್ರಮಣಿ, ಕೈಪಟ್ಟಿರ ಅಯ್ಯಪ್ಪ, ಮಂದಪAಡ ಮನೋಜ್, ಮಂದಪAಡ ಸೂರಜ್, ಪಳಂಗAಡ ಪ್ರಕಾಶ್, ಪಳಂಗAಡ ಅಪ್ಪಣ್ಣ, ಪಳಂಗAಡ ಲವ, ಪುಟ್ಟಿಚಂಡ ದೇವಯ್ಯ, ಕೂಪದಿರ ಸಾಬು, ಅಳಮಂಡ ನೆಹರು, ಪಟ್ಟಮಾಡ ಅಶೋಕ್, ಚಂಗAಡ ಗಣೇಶ್, ಬಡುವಂಡ ಬೋಪಣ್ಣ, ಕೈಪಟ್ಟಿರ ಕಾರ್ಯಪ್ಪ, ಮುಕ್ಕಾಟಿರ ಅಯ್ಯಪ್ಪ, ನೆರವಂಡ ಬೊಳ್ಯಪ್ಪ, ಕಂಬಿರAಡ ಉಮೇಶ್, ಚೆನಂಡ ಅಯ್ಯಣ್ಣ, ಚಂಗAಡ ಸೂರಜ್, ಪುದಿಯಮುಂಡAಡ ಪೊನ್ನಪ್ಪ, ಪುದಿಯೊಕ್ಕಡ ವಿಪನ್, ಕೋಟೆರ ಮೊಣ್ಣಪ್ಪ, ಇಟ್ಟಿರ ಸಂಪತ್, ನಿಶು ನಂಜಪ್ಪ, ಪಳಂಗಿಯAಡ ಕಾಳಪ್ಪ, ಪಳಂಗಿಯAಡ ಕಾವೇರಪ್ಪ, ಅಮ್ಮಾಟಂಡ ಚೇತನ್, ಬಿದ್ದಂಡ ಸಂದೀಪ್, ಬೊಳ್ತಂಡ ಪಟ್ಟು, ಬೊಳ್ಳಚೆಟ್ಟಿರ ಅಚ್ಚಪ್ಪ, ಮುಕ್ಕಾಟಿರ ಕಿಟ್ಟು, ಬೊಟ್ಟೊಳಂಡ ಶಂಬು, ದೇವಣಿರ ಧನು, ಬೊಡ್ಡಂಡ ಕಾಳಪ್ಪ, ಬಾಳೆಕುಟ್ಟಿರ ಅಯ್ಯಪ್ಪ, ವಾಂಚಿರ ಮುತ್ತಪ್ಪ, ಕೋಟೆರ ಮುತ್ತಣ್ಣ, ಬಡುವಂಡ ಚಿಣ್ಣಪ್ಪ, ಮಂಡೆಪAಡ ರಮೇಶ್, ಪುದಿಯೊಕ್ಕಡ ಮೇದಪ್ಪ, ಪಾಲಂದಿರ ಕಾವೇರಪ್ಪ, ಬೊಳ್ಳಚೆಟ್ಟಿರ ಪ್ರಕಾಶ್, ಬಿದ್ದಂಡ ಹರೀಶ್, ಪುದಿಯೊಕ್ಕಡ ಪೊನ್ನಣ್ಣ, ಪಾಂಡAಡ ಕಿರಣ್, ವಾಂಚಿರ ರಘು ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡರು.