ವೇಶ್ಯಾವಾಟಿಕೆಗೆ ಬಾಡಿಗೆ ಮನೆ ಬಳಕೆ?

ಸೋಮವಾರಪೇಟೆ, ಆ. ೨೮: ಈ ಹಿಂದೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆ ಪಟ್ಟಣದ ಕೆಲವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಳಪಡಿಸಿದ್ದರು. ಈ ಘಟನೆಯ ನಂತರ ವೇಶ್ಯಾವಾಟಿಕೆ ಸಂಪೂರ್ಣ ನಿಂತಿತು ಎಂದು ಜನತೆ ಭಾವಿಸಿದ್ದರೂ, ಇದೀಗ ಮತ್ತೆ ಇಂತಹ ದಂಧೆ ಪಟ್ಟಣದಲ್ಲಿ ತಲೆಯೆತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸೋಮವಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ, ಪಟ್ಟಣದ ಅಂಬೇಡ್ಕರ್ ಪ್ರತಿಮೆಯಿಂದ ಕರ್ಕಳ್ಳಿ ಗ್ರಾಮ ಸಂಪರ್ಕಿಸುವ ರಸ್ತೆ ಬದಿಯಲ್ಲಿ ಸಂಸ್ಕಾರವAತರು ನೆಲೆಸಿರುವ ಪ್ರದೇಶದಲ್ಲಿಯೇ ಇಂತಹ ದಂಧೆ ಆರಂಭಗೊAಡಿದೆ. ಇದರೊಂದಿಗೆ ಸರ್ಕಾರಿ ಅನುದಾನಿತ ಶಾಲೆಯ ಮುಂಭಾಗದ ಮನೆಯೊಂದರಲ್ಲಿಯೂ ಮಾಂಸ ದಂಧೆ ಎಗ್ಗಿಲ್ಲದೆ ಸಾಗಿದೆ ಎಂಬ ಗುಸುಗುಸು ಎಲ್ಲೆಡೆ ಹರಿದಾಡುತ್ತಿದೆ.

ಕರ್ಕಳ್ಳಿ ರಸ್ತೆಯಲ್ಲಿರುವ ಮನೆಯೊಂದನ್ನು ಬಾಡಿಗೆ ಪಡೆದಿರುವ ಮಹಿಳೆಯೋರ್ವರು, ಹೊರ ಭಾಗದಿಂದ ಹೆಣ್ಣು ಮಕ್ಕಳನ್ನು ಕರೆಸಿಕೊಂಡು ರಾಜಾರೋಷವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಇದೀಗ ಎಲ್ಲೆಡೆ ಪಸರಿಸಿದೆ.

ಮನೆಯ ಮಾಲೀಕರು ತಮ್ಮ ಮನೆಯನ್ನು ಬಾಡಿಗೆ ನೀಡಿ ಹೊರ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಈ ಮನೆಯನ್ನು ಬಾಡಿಗೆ ಪಡೆದಿರುವ ಮಹಿಳೆ ಹಾಗೂ ಓರ್ವ ಪುರುಷ, ಮೈಸೂರು ಸೇರಿದಂತೆ ಇತರೆಡೆಗಳಿಂದ ಹೆಣ್ಣುಮಕ್ಕಳನ್ನು ಕರೆಸಿಕೊಂಡು ಸ್ಥಳೀಯವಾಗಿ ಗಿರಾಕಿಗಳನ್ನು ಹುಡುಕಿ ವ್ಯವಹರಿಸುವ ಕೆಲಸ ನಿರಾತಂಕವಾಗಿ ನಡೆಯುತ್ತಿದೆ.

ವಾಟ್ಸಾö್ಯಪ್ ಮೂಲಕ ಯುವತಿಯರ ಫೋಟೋಗಳನ್ನು ಗಿರಾಕಿಗಳಿಗೆ ಕಳುಹಿಸಿ, ಇಂತಿಷ್ಟು ‘ರೇಟ್ ಫಿಕ್ಸ್’ ಮಾಡಿ ಬಾಡಿಗೆ ಮನೆಗೆ ಕರೆಸಿಕೊಳ್ಳುವ ಈ ‘...ಹಿಡುಕರು’ ಹೈಟೆಕ್ ಆಗಿಯೇ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ.

ಕೆಲವೊಮ್ಮೆ ಯುವತಿಯರ ಫೋಟೋವನ್ನು ಮೊದಲೇ ಗಿರಾಕಿಗಳಿಗೆ ಕಳುಹಿಸಲಾಗುತ್ತದೆ. ಇನ್ನು ಕೆಲವೊಮ್ಮೆ ಯುವತಿಯರು ಬಂದ ನಂತರ ಅವರ ಫೋಟೋಗಳನ್ನು ಗಿರಾಕಿಗಳಿಗೆ ಕಳುಹಿಸಿ, ವಾಟ್ಸಾö್ಯಪ್‌ನಲ್ಲಿಯೇ ಹಣ, ಸಮಯವನ್ನು ನಿಗದಿಗೊಳಿಸಿ ಬಾಡಿಗೆ ಮನೆಗೆ ಕರೆಸಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಈ ದಂಧೆ ಯಾವುದೇ ಅಳುಕಿಲ್ಲದೇ, ಭಯವಿಲ್ಲದೇ ಸಾಗಿದೆ ಎನ್ನಲಾಗಿದೆ. ಪ್ರಸ್ತುತ ಎರಡು ಮನೆಗಳು ಮಾಂಸ ದಂಧೆಯ ಅಡ್ಡೆಯಾಗಿದೆ. ಇಂತಹ ‘...ಹಿಡುಕರ’ ಧನದಾಹಕ್ಕೆ ಸುಸಂಸ್ಕೃತರಿಗೆ ಇರಿಸು ಮುರಿಸು ಉಂಟಾಗುತ್ತಿದೆ. ರಾತ್ರಿ-ಹಗಲೆನ್ನದೇ ದಂಧೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ದಂಧೆಯನ್ನು ಈಗಲೇ ಮಟ್ಟಹಾಕಬೇಕಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ದಂಧೆಕೋರರನ್ನು ಹೆಡೆಮುರಿ ಕಟ್ಟಬೇಕೆಂದು ಸ್ಥಳೀಯರು ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.

- ಸತ್ಯದೇವ್