ಕೂಡಿಗೆ, ಆ. ೨೮: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇ ಕೋಟೆ, ಹೊಸಕೋಟೆ, ಚಿನ್ನೇನಹಳ್ಳಿ, ಮರೂರು ವ್ಯಾಪ್ತಿಯ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಕಳೆದ ಐದು ತಿಂಗಳುಗಳಿAದ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಕ್ರಮವಹಿಸಿಲ್ಲ ಎಂದು ಆರೋಪಿಸಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಹೆಬ್ಬಾಲೆ ಗ್ರಾಮದ ಸಣ್ಣ ಬೆಳೆಗಾರರ ಸಂಘ ಮತ್ತು ೪. ಗ್ರಾಮಗಳ ವ್ಯಾಪ್ತಿಯ ಗ್ರಾಮಸ್ಥರು ಸೇರಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಕುಳಿತು ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ಸಮರ್ಪಕವಾಗಿ ಕೆಲಸ ನಿರ್ವಹಣೆ ಮಾಡುತ್ತಿಲ್ಲ ಎಂದು ಧಿಕ್ಕಾರ ಕೂಗಿದರು.

ಬೀದಿ ದೀಪ, ಚರಂಡಿಗಳಲ್ಲಿ ಹೂಳು ತುಂಬಿರುವುದು, ರಸ್ತೆಗಳು ಗುಂಡಿಗಳಾಗಿರುವುದು, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡದ ಹಿನ್ನೆಲೆಯಲ್ಲಿ ಈ ಗ್ರಾಮಗಳಲ್ಲಿ ಈಗಾಗಲೇ ಡೆಂಗ್ಯೂ, ಮಲೇರಿಯಾ ಇನ್ನೂ ಮುಂತಾದ ಕಾಯಿಲೆ ಕಾಣಿಸಿಕೊಂಡು ಅನೇಕ ಮಂದಿ ದಿನಂಪ್ರತಿ ಆಸ್ಪತ್ರೆಗೆ ಅಲೆಯುವಂತಹ ಪ್ರಸಂಗ ಎದುರಾಗಿದೆ. ಅನೇಕ ಬಾರಿ ಆಡಳಿತ ಮಂಡಳಿಯವರಿಗೆ ಲಿಖಿತವಾಗಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಹೆಬ್ಬಾಲೆ ಸಣ್ಣ ಬೆಳೆಗಾರರ ಸಂಘ ಗ್ರಾಮ ಘಟಕದ ಅಧ್ಯಕ್ಷ ಸುರೇಶ್ ಅರೋಪಿಸಿದರು.

ಧರಣಿ ನಿರತರು ಮಧ್ಯಾಹ್ನದವರೆಗೆ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಗಡುವು ನೀಡುವುದರ ಮೂಲಕ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುರೇಶ್ vಅವರಿಗೆ ಮನವಿ ನೀಡಿದರು.

ಈ ಸಂದರ್ಭ ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೆಚ್. ಇ. ಸಣ್ಣಪ್ಪ, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್. ಮಂಜುನಾಥ, ಜಿಲ್ಲಾ ಸಮಿತಿಯ ಸದಸ್ಯ ಎನ್.ಟಿ. ಚೆಂಗಪ್ಪ, ಗ್ರಾಮ ಪ್ರಮುಖರಾದ ಮಹದೇವ, ಸಾವಿತ್ರಮ್ಮ, ಮಂಜುನಾಥ, ಮಣಿ, ಸಾಕಮ್ಮ, ವನಜಾಕ್ಷಿ , ಹೆಚ್.ಟಿ. ವೀರಪ್ಪ, ಪ್ರತಾಪ್, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.