ಶನಿವಾರಸಂತೆ, ಆ.೨೯: ಜಿಲ್ಲಾಧಿಕಾರಿಯವರ ಆದೇಶದಂತೆ ಹಾಗೂ ತಹಶೀಲ್ದಾರ್ ಅವರ ಸೂಚನೆಯ ಮೇರೆಗೆ ಪ್ರಸಕ್ತ ಸಾಲಿನ ಅತಿವೃಷ್ಟಿಯಿಂದ ಕಾಫಿ ತೋಟಗಳಲ್ಲಿ ಆಗಿರುವ ಕಾಫಿ ಮತ್ತು ಕಾಳು ಮೆಣಸು ಬೆಳೆ ಹಾನಿ ಸಂಬAಧ ಗುರುವಾರ ಶನಿವಾರಸಂತೆ ಹೋಬಳಿಯ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗನಹಳ್ಳಿ ಗ್ರಾಮದ ಕಾಫಿ ತೋಟಗಳಿಗೆ ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸಿದರು.

ಶೆಟ್ಟಿಗನಹಳ್ಳಿ ಗ್ರಾಮದ ಬೆಳೆಗಾರ ಅರವಿಂದ್ ಮತ್ತು ಭರತ್ ಅವರ ತೋಟಗಳಲ್ಲಿ ಸ್ಥಳ ಪರಿಶೀಲನೆ ಸಂದರ್ಭ ರೈತ ಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಮಾತನಾಡಿ, ಕೊಡಗಿನಾದ್ಯಂತ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಸುರಿದ ಅತಿವೃಷ್ಟಿಯಿಂದ ಕಾಫಿ ಮತ್ತು ಕಾಳು ಮೆಣಸು ಬೆಳೆಗೆ ಹಾನಿಯಾಗಿದ್ದು; ಕೃಷಿಕರಿಗೆ ನಷ್ಟವಾಗಿದೆ.ಬೆಳೆಗಾರರು ಜಿಲ್ಲಾಧಿಕಾರಿಯವರಿಗೆ ಮಾಡಿಕೊಂಡ ಮನವಿಗೆ ಸ್ಪಂದಿಸಿ ನಷ್ಟದ ಅಂದಾಜು ಮಾಡಲು ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತೋಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಜಂಟಿ ಸಮೀಕ್ಷೆ ನಡೆಸಿದ್ದಾರೆ.ಪ್ರಸ್ತುತ ದಿನಗಳಲ್ಲಿ ಬೆಳೆಗಾರರ ಜೀವನ ನಿರ್ವಹಣೆ ಹಾಗೂ ತೋಟ ನಿರ್ವಹಣೆ ಕಷ್ಟಕರವಾಗಿದೆ.ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರ ಕೊರತೆ, ಅಧಿಕ ವೇತ ನಗಳಿಂದ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಬೆಳೆ ಹಾನಿ ನಷ್ಟದ ಅಂದಾಜು ಮಾಡಿ, ಸರ್ಕಾರ ಕೃಷಿಕರ ಪ್ರತಿ ಒಂದು ಎಕರೆ ತೋಟಕ್ಕೆ ರೂ.೧ ಲಕ್ಷದ ಪರಿಹಾರ ಕೊಡಬೇಕು ಎಂದು ಸರ್ಕಾರ, ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಕಾಫಿ ಮಂಡಳಿ ಅಧಿಕಾರಿ ಸೀನಾ , ತೋಟಗಾರಿಕೆ ಇಲಾಖಾಧಿಕಾರಿ ಈಶ್ವರ್ ಕಲ್ಯಾಣಿ ಕಂದಾಯ ಪರಿವೀಕ್ಷಕ ಬಿ.ಆರ್.ಮಂಜುನಾಥ್ , ಗ್ರಾಮ ಆಡಳಿತ ಅಧಿಕಾರಿ ಚಂದನ್, ಸಂತೋಷ್, ಬೆಳೆಗಾರರ ಸಂಘದ ಖಜಾಂಚಿ ಬಿ.ಟಿ.ರಂಗಸ್ವಾಮಿ, ಶೆಟ್ಟಿಗನಹಳ್ಳಿಯ ಕಾಫಿ ತೋಟಗಳ ಮಾಲೀಕರಾದ ಅರವಿಂದ್ ಹಾಗೂ ಭರತ್ , ಹೆಗ್ಗುಳ ಗ್ರಾಮದ ಬೆಳೆಗಾರ ತಮ್ಮೇಗೌಡ, ಕೂಗೂರು ಬೆಳೆಗಾರ ವಿಠಲ್ ಇದ್ದರು.