ಶನಿವಾರಸಂತೆ, ಆ. ೨೮: ಇಸ್ರೋದ ಚಂದ್ರಯಾನ-೩ರ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ನೆನಪಿಗಾಗಿ ಭಾರತವು ಆಗಸ್ಟ್ ೨೩ ರಂದು ತನ್ನ ಮೊದಲ ‘ರಾಷ್ಟಿçÃಯ ಬಾಹ್ಯಾಕಾಶ ದಿನ’ವನ್ನು ಆಚರಿಸುತ್ತಿದೆ ಎಂದು ವಿಜ್ಞಾನ ಶಿಕ್ಷಕಿ ಎಂ.ಪಿ.ಶಿವಕುಮಾರಿ ಹೇಳಿದರು. ಸಮೀಪದ ಕೊಡ್ಲಿಪೇಟೆ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆ. ೨೩ ರಾಷ್ಟಿçÃಯ ಬಾಹ್ಯಾಕಾಶ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ದಿನದ ಮಹತ್ವ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಆ. ೨೩ ನ್ನು ‘ರಾಷ್ಟಿçÃಯ ಬಾಹ್ಯಾಕಾಶ ದಿನ’ ಎಂದು ಘೋಷಿಸಿದ್ದು ಇಂದಿಗೆ ಒಂದು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಭಾರತವು ಬಾಹ್ಯಾಕಾಶ ದಿನದ ಸಂಭ್ರಮಾಚರಣೆ ಮಾಡುತ್ತಿದೆ. ೨೦೨೩ರ ಆ. ೨೩ ರಂದು ಭಾರತದ ಪ್ರಮುಖ ಬಾಹ್ಯಾಕಾಶ ಯೋಜನೆ ‘ಚಂದ್ರಯಾನ-೩’ ಚಂದ್ರನ ದಕ್ಷಿಣ ಧ್ರುವ ತಲುಪುವ ಮೂಲಕ ಈ ಸಾಧನೆ ಮಾಡಿದ ಮೊದಲ ದೇಶವೆಂಬ ಖ್ಯಾತಿಗೆ ಭಾರತ ಪಾತ್ರವಾಗಿತ್ತು. ಭಾರತವು ಚಂದ್ರನ ಅಂಗಳದಲ್ಲಿ ಇಳಿದ ೪ನೇ ದೇಶವಾಗಿದೆ. ಚಂದ್ರಯಾನದ ಯಶಸ್ಸಿನ ನೆನಪಿಗಾಗಿ ಆ. ೨೩ ನ್ನು ‘ರಾಷ್ಟಿçÃಯ ಬಾಹ್ಯಾಕಾಶ ದಿನ’ ಎಂದು ಆಚರಿಸಲಾಗುತ್ತಿದೆ. ಚಂದ್ರಯಾನ-೩ ಯೋಜನೆಯು ಚಂದ್ರನ ದಕ್ಷಿಣ ಧ್ರುವ ತಲುಪಿದ ಜಾಗವನ್ನು ಪ್ರಧಾನಿಯವರು “ಶಿವ ಶಕ್ತಿ ಪಾಯಿಂಟ್ ಎಂದು ಕರೆದಿದ್ದರು ಎಂದು ಹೇಳಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಶಾಲಾ ಮುಖ್ಯಶಿಕ್ಷಕ ಅಬ್ದುಲ್ ರಬ್, ಶಿಕ್ಷಕರಾದ ಚಂದ್ರಶೇಖರ್ ಅಡ್ಮನಿ, ಬಿ.ವಿ. ಸುಮಾ, ಯು.ಡಿ. ಮಂಜುನಾಥ್, ಕಿರಣ್ ಕುಮಾರ್, ಎ.ಪಿ. ಸುನೀಲ್, ಸಿಬ್ಬಂದಿ ಪವನ್ ಕುಮಾರ್ ಹಾಜರಿದ್ದರು.