ಸಿದ್ದಾಪುರ, ಆ. ೨೯: ಗ್ರಾಮೀಣ ಭಾಗದ ಕಾಡಂಚಿನ ಚೆನ್ನಂಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಬಟ್ಟೆಗೆ ಬಣ್ಣ ಹಚ್ಚಿ ವೃತ್ತಿ ಶಿಕ್ಷಣ ಕಲಿಯುವ ಮೂಲಕ ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವೀರಾಜಪೇಟೆ ತಾಲೂಕಿನ ಚೆನ್ನ ಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚೆನ್ನಂಗಿ ಶಾಲೆ ಇದ್ದು ಇಲ್ಲಿ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ ಬಹುತೇಕ ಆದಿವಾಸಿ ವಿದ್ಯಾರ್ಥಿಗಳೇ ಇದ್ದು ಶಿಕ್ಷಣದೊಂದಿಗೆ ವಿಶೇಷ ಕಾರ್ಯಕ್ರಮ ಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಶಿಕ್ಷಕರ ಮಾರ್ಗದರ್ಶನ ವನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಬಂದ ಕೆ.ಕೆ. ಸುಷಾ ಶಿಕ್ಷಣ ಇಲಾಖೆಯ ಮಾರ್ಗದರ್ಶನಗಳನ್ನ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಪಡೆದುಕೊಂಡು ತಿಂಗಳಿಗೊಮ್ಮೆ ವಿಭಿನ್ನ ಕಾರ್ಯಕ್ರಮಗಳ ಆಯೋಜನೆ ಮಾಡುವುದರ ಮೂಲಕ ಪೋಷಕರು ವಿದ್ಯಾರ್ಥಿಗಳ ಗಮನ ಸೆಳೆದಿದ್ದಾರೆ. ಶುಚಿತ್ವ, ಪರಿಸರ ಜಾಗೃತಿ, ಗಿಡಮೂಲಿಕೆಗಳ ಮರುಬಳಕೆ, ಆರೋಗ್ಯ ಕಾಳಜಿ, ನಲಿ ಕಲಿ ಕಾರ್ಯಕ್ರಮ, ಭಾಷಣ ಸಂಗೀತ,ನೃತ್ಯ,ಯೋಗ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮನೆಯಲ್ಲಿರುವ ಬಟ್ಟೆಗಳಿಗೆ ಬಣ್ಣ ಹಚ್ಚಿ ಹೊಸ ವಿನ್ಯಾಸದೊಂದಿಗೆ ಮರುಬಳಕೆ ಮಾಡುವ ವೃತ್ತಿ ಶಿಕ್ಷಣವನ್ನು ಶಿಕ್ಷಕರುಗಳು ಕಲಿಸುತ್ತಿದ್ದಾರೆ.

ವಿದ್ಯಾರ್ಥಿಗಳು ಪಾಠದೊಂದಿಗೆ ಶಿಕ್ಷಕರುಗಳ ಮಾರ್ಗದರ್ಶನಗಳನ್ನ ಮೈಗೂಡಿಸಿಕೊಂಡು ಶಿಕ್ಷಣದೊಂದಿಗೆ ಇತರ ವಿಭಿನ್ನ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದ್ದಾರೆ. ೫೦ ವಿದ್ಯಾರ್ಥಿಗಳಿಗೆ ೪ ಶಿಕ್ಷಕರುಗಳಿದ್ದು ಪಾಠದೊಂದಿಗೆ ಸಂಗೀತ, ನೃತ್ಯ, ಸಾಹಿತ್ಯ, ಭಾಷಣ, ಕ್ರೀಡೆ ಸೇರಿದಂತೆ ಶಾಲೆಯ ಉಸ್ತುವಾರಿಗಾಗಿ ಚುನಾವಣೆ ನಡೆಸುವ ಮೂಲಕ ಹಲವು ವಿದ್ಯಾರ್ಥಿಗಳಿಗೆ ಜವಾಬ್ದಾರಿಯನ್ನು ನೀಡಲಾಗಿದೆ.

ವಿದ್ಯಾರ್ಥಿಗಳೇ ಎಲ್ಲವನ್ನು ನಿಭಾಯಿಸುತ್ತಿದ್ದು ಅಲಂಕಾರಿಕ ಗಿಡ ಮರಗಳೊಂದಿಗೆ ಹಚ್ಚ ಹಸಿರಿನೊಂದಿಗೆ ಕಂಗೊಳಿಸುತ್ತಿದೆ. ತಪ್ಪದೇ ಹಾಜರಾಗುತ್ತಿರುವ ವಿದ್ಯಾರ್ಥಿಗಳು ಈ ಹಿಂದೆ ಕಾಡಂಚಿನ ಗ್ರಾಮ ವಾಗಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಬರಲು ಹಿಂದೇಟಾಗುತ್ತಿದ್ದರು. ಶಾಲೆಯಲ್ಲಿ ಏಳನೇ ತರಗತಿ ಕಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕಲಿಯಲು ಸಾಧ್ಯವಾಗದೆ ತೋಟಕೆಲಸಗಳಿಗೆ ತೆರಳುತ್ತಿದ್ದರು.

ಶಾಲೆಗೆ ಗೈರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಕರುಗಳೇ ಮನೆಗಳಿಗೆ ತೆರಳಿ ಪೋಷಕರನ್ನ ಮನವೊಲಿಸಿ ಶಾಲೆಗೆ ಕರೆÀತರುತ್ತಿದ್ದರು. ಕೆಲವೊಮ್ಮೆ ಶಿಕ್ಷಕರುಗಳು ಮನೆ ಬಳಿ ಬರುವ ಸಂದರ್ಭ ಶಾಲೆಗೆ ತೆರಳಲು ಹಿಂದೇಟಾಕುತ್ತಿದ್ದ ಕೆಲವು ವಿದ್ಯಾರ್ಥಿಗಳು ಕಾಡು ಸೇರುತ್ತಿದ್ದರು

ಕೊನೆಗೆ ಶಿಕ್ಷಕರುಗಳು ಮಕ್ಕಳನ್ನು ಹರಸಾಹಸಪಟ್ಟು ಕರೆತರುತ್ತಿದ್ದರು. ಮಕ್ಕಳು ದಿನನಿತ್ಯ ಶಾಲೆಗೆ ಆಗಮಿಸಲು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದರು. ಶಾಲೆಯ ಅಭಿವೃದ್ಧಿಗೆ ದಾನಿಗಳ ಸಹಕಾರ ನೀಡಿದ ಪರಿಣಾಮ ಶಾಲಾ ಕಟ್ಟಡ, ಆವರಣ, ಸಭಾಂಗಣ, ಕಂಪ್ಯೂಟರ್, ಗೋಡೆಗಳ ಮೇಲೆ ಚಿತ್ರ ಕಲೆಗಳ ನೋಟ ಎಲ್ಲರ ಗಮನ ಸೆಳೆಯುತ್ತಿದೆ.

ವೃತ್ತಿ ಶಿಕ್ಷಣ ಪಾಠ ಕಲಿತ ವಿದ್ಯಾರ್ಥಿಗಳು ಮನೆಗಳಿಂದ ಹಳೆಯದಾದ ಬಟ್ಟೆಗಳನ್ನ ತಂದು ಕೃತಕ ಬಣ್ಣ ಹಚ್ಚುವ ಮೂಲಕ ಹೊಸ ವಿನ್ಯಾಸದ ಬಟ್ಟೆಗಳಾಗಿ ಪರಿವರ್ತನೆ ಆಗುತ್ತಿದ್ದು ಬಣ್ಣ ಹಚ್ಚಿದ ಬಟ್ಟೆಗಳನ್ನು ಮರುಬಳಕೆಮಾಡುವ ಬಗ್ಗೆ ಶಿಕ್ಷಕರುಗಳು ವೃತ್ತಿ ಶಿಕ್ಷಣ ಕಲಿಸುವ ಮೂಲಕ ವಿದ್ಯಾರ್ಥಿಗಳು ಹಳೆ ಬಟ್ಟೆಗಳಿಗೆ ಬಣ್ಣ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಶಿಕ್ಷಕರು ಹಾಗೂ ಶಾಲೆಯ ಬಗ್ಗೆ ಮೆಚ್ಚುಗೆ: ಶಾಲೆಯ ಸಭಾಂಗಣದಲ್ಲಿ ನಡೆದ ವೃತ್ತಿ ಶಿಕ್ಷಣ ಕಲಿಕೆಯ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಾಗಿದ್ದು ಕಾಡಂಚಿನ ಗ್ರಾಮಗಳಿಂದ ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದಾರೆ ಶಿಕ್ಷಕರುಗಳ ಕಾಳಜಿಯಿಂದ ಮಕ್ಕಳು ಶಿಕ್ಷಣದೊಂದಿಗೆ ಶಾಲೆಯಲ್ಲಿ ನಡೆಯುವ ವಿಭಿನ್ನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಸರ್ಕಾರ ಇಂತಹ ಮಾದರಿ ಶಾಲೆಗಳಿಗೆ ಹೆಚ್ಚು ಅನುದಾನ ನೀಡುವ ಮೂಲಕ ಮತ್ತಷ್ಟು ಅಭಿವೃದ್ಧಿಯೊಂದಿಗೆ ವಿಶೇಷವಾಗಿ ಪರಿಗಣಿಸಬೇಕೆಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್‌ಕುಮಾರ್ ಮಾತನಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಚೆನ್ನಂಗಿ ಶಾಲೆ ಶಿಕ್ಷಣದಿಂದ ವಂಚಿತರಾಗುತ್ತಿದ್ದ ವಿದ್ಯಾರ್ಥಿಗಳನ್ನು ಕರೆತಂದು ಶಿಕ್ಷಣದೊಂದಿಗೆ ಹಲವಾರು ಕಾರ್ಯಕ್ರಮಗಳನ್ನ ಆಯೋಜನೆ ಮಾಡುವುದರ ಮೂಲಕ ಮಾದರಿ ಶಾಲೆಯಾಗಿ ಮುನ್ನಡೆಯುತ್ತಿದೆ ಎಂದರು.

ಪಾಲಿಬೆಟ್ಟ ಲಯನ್ಸ್ ಕ್ಲಬ್ ಅಧ್ಯಕ್ಷ ಸ್ವರೂಪ ಅಯ್ಯಪ್ಪ ಮಾತನಾಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಾಗಿದ್ದರು ಪ್ರಕೃತಿ ಸೌಂದರ್ಯದೊAದಿಗೆ ಅಚ್ಚುಕಟ್ಟಾಗಿ ಮುನ್ನಡೆಯುತ್ತಿದೆ ಶಿಕ್ಷಕರುಗಳ ಪರಿಶ್ರಮದಿಂದ ವಿದ್ಯಾರ್ಥಿಗಳು ವಿವಿಧ ವೃತ್ತಿ ಶಿಕ್ಷಣದೊಂದಿಗೆ ಮುನ್ನಡೆಯುತ್ತಿದ್ದಾರೆ. ಶಾಲೆಯ ಅಭಿವೃದ್ಧಿಗಾಗಿ ಲಯನ್ಸ್ ಸಂಸ್ಥೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಸಮಾಜ ಸೇವಕ ಡಾ. ಎ.ಸಿ. ಗಣಪತಿ ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಶಾಲೆಗೆ ದಾನಿಗಳು ಸಹಕಾರ ನೀಡುತ್ತಿರುವುದರಿಂದ ಶಿಕ್ಷಕರುಗಳ ಪರಿಶ್ರಮದೊಂದಿಗೆ ಶಾಲೆ ಅಚ್ಚುಕಟ್ಟಾಗಿ ನಡೆಯುತ್ತಿದೆ ಕಾಡುಪ್ರಾಣಿಗಳ ಭಯದ ನಡುವೆ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಹಾಗೂ ಅರಣ್ಯ ಇಲಾಖೆ ವಾಹನ ವ್ಯವಸ್ಥೆ ಮಾಡಬೇಕಾಗಿದೆ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಕಲಿಕೆಗೆ ಸಹಕಾರ ನೀಡಬೇಕೆಂದರು.

ಈ ಸಂದರ್ಭ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬೇಬಿ, ಶಾಲಾ ಮುಖ್ಯ ಶಿಕ್ಷಕಿ ಕೆ.ಕೆ. ಸುಷಾ, ಶಿಕ್ಷಕರಾದ ಪ್ರತೀಮ, ಮಂಜುಳ, ಸತೀಶ್, ಆದಿವಾಸಿ ಸಂಘಟನೆಯ ಮುಖಂಡ ಸಿದ್ದಪ್ಪ ಸೇರಿದಂತೆ ಪೋಷಕರು ಮತ್ತಿತರರು ಹಾಜರಿದ್ದರು. -ಎಸ್.ಎಂ. ಮುಬಾರಕ್