ಮಡಿಕೇರಿ, ಆ. ೨೮: ಮಹಿಳೆಯರಿಬ್ಬರನ್ನು ಮನೆಯಲ್ಲಿ ಕಟ್ಟಿಹಾಕಿ ನಗದು ಹಾಗೂ ಚಿನ್ನಾಭರಣ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಆರು ಆರೋಪಿಗಳಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ನಾಪೋಕ್ಲು ಕೊಳಕೇರಿ ಮೂಟೇರಿಯ ಮನೆಯೊಂದರಲ್ಲಿ ವಾಸವಿದ್ದ ಜಾನಕಿ ಹಾಗೂ ಅಮ್ಮಕ್ಕಿ ಎಂಬವರನ್ನು ಕಾಫಿ ತೋಟದ ಮನೆಯೊಳಗೆ ಆರೋಪಿಗಳಾದ ನೇಪಾಳ ಮೂಲದ ದಿಲ್‌ಬಹದ್ದೂರ್ ರಾವುಲ್ ಈಶ್ವರ್ ಥಾಪಾ, ಪ್ರೇಮ್‌ಬಹದ್ದೂರ್ ಖಡ್‌ಕ ಹಾಗೂ ಸುದೀಪ್ ಜೆ. ತಾರಾ ಎಂಬ ನಾಲ್ವರು ಯಾಮ್‌ಸಿಂಗ್ ಮತ್ತು ಆತನ ಹೆಂಡತಿ ಕಮಲ್‌ಸಿಂಗ್ ಅವರೊಂದಿಗೆ ಸೇರಿ ಒಳಸಂಚು ರೂಪಿಸಿ. ತಾ. ೩೧-೦೧-೨೦೨೨ರಂದು ರಾತ್ರಿ ಒಂದು ಗಂಟೆ ಸಮಯದಲ್ಲಿ ಮನೆಗೆ ನುಗ್ಗಿ ಕಟ್ಟಿ ಹಾಕಿ, ಚಾಕು ತೋರಿಸಿ ರೂ. ೨.೫೦ಲಕ್ಷ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ದೊರೆತ ದೂರಿನನ್ವಯ ಆಗಿನ ಠಾಣಾ ವ್ಯಾಪ್ತಿಯ ಸಿ.ಪಿ.ಐ. ಅನೂಪ್‌ಮಾದಪ್ಪ ಅವರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಬಗ್ಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಆರೋಪ ಸಾಬೀತಾದ್ದರಿಂದ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ ಅವರು ಆರೋಪಿಗಳಿಗೆ ೩ ವರ್ಷದ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಕೆ.ಜೆ. ಅಶ್ವಿನಿ ಅವರು ವಾದ ಮಂಡಿಸಿದ್ದರು.