ಮಡಿಕೇರಿ, ಆ. ೨೯: ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಒಬಿಸಿ ಮಹಿಳೆಗೆ ಮೀಸಲಿಟ್ಟಿರುವ ಕುರಿತು ಹಲವರು ನ್ಯಾಯಾಲಯ ಮೆಟ್ಟಿಲೇರುವ ಸಂಬAಧ ೪ ಮಂದಿ ಕೇವಿಯಟ್ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರ ತಾ. ೫ ರಂದು ಹೊರಡಿಸಿದ್ದ ಆದೇಶದಲ್ಲಿ ಅಧ್ಯಕ್ಷ ಸ್ಥಾನವನ್ನು ಒಬಿಸಿ ಮಹಿಳೆಗೆ ಮೀಸಲಿಟ್ಟಿತ್ತು. ಈ ಬಗ್ಗೆ ೧೦ ಮಂದಿ ಪಟ್ಟಣ ಪಂಚಾಯತ್ ಸದಸ್ಯರನ್ನು ಪ್ರತಿವಾದಿಗಳಾಗಿಸಿ ೪ ಮಂದಿ ಹೈಕೋರ್ಟ್ನಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ.

ಸದಸ್ಯರುಗಳು ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ತರುವ ಸಾಧ್ಯತೆ ಇದ್ದು, ಅಂತಹ ಸಂದರ್ಭ ಬಂದಲ್ಲಿ ತಮ್ಮ ಅಹವಾಲುಗಳನ್ನು ಸ್ವೀಕರಿಸುವಂತೆ ಮನವಿ ಮಾಡಿದ್ದಾರೆ. ವೀರಾಜಪೇಟೆಯ ಆಶಾ ಸುಬ್ಬಯ್ಯ, ಟಿ.ಎಂ. ಸುನಿತಾ, ಸುಶ್ಮಿತಾ ಮತ್ತು ಹೆಚ್.ಪಿ. ಮಹದೇವ್ ಎಂಬವರುಗಳು ತಾ. ೨೭ ರಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ.