ವೀರಾಜಪೇಟೆ, ಆ. ೨೯: ಶತಾಯುಷಿ ಪೊನ್ನಕ್ಕಿ ಅವರಿಗೆ ಬಡುವಮಂಡ ಕುಟುಂಬಸ್ಥರಿAದ ಸನ್ಮಾನಿಸಲಾಯಿತು.

ಕಾವಾಡಿ ಕಾರ್ಮಾಡು ಗ್ರಾಮದ ನಿವಾಸಿ ದಿವಂಗತ ಬಡುವಮಂಡ ತಮ್ಮಯ್ಯ ಅವರ ಪತ್ನಿ ಪೊನ್ನಕ್ಕಿ (ತಾಮನೆ : ಕಾವಡಿಚಂಡ)ಅವರಿಗೆ ೧೦೬ ವರ್ಷ ತುಂಬಿದ ಹಿನ್ನೆಲೆ ಬಡುವಮಂಡ ಕುಟುಂಬದ ಐನ್‌ಮನೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಊರಿನ ಹಿರಿಯರು, ನೆರೆಕರೆಯವರು ಗ್ರಾಮಸ್ಥರು ಮಕ್ಕಳು, ಮೊಮ್ಮಕ್ಕಳು, ಕುಟುಂಬಸ್ಥರು ಶತಾಯುಷಿ ಅಜ್ಜಿಗೆ ಗೌರವಿಸಿದರು. ಬಡುವಮಂಡ ಕುಟುಂಬದ ಅಧ್ಯಕ್ಷ ಮುತ್ತಪ್ಪ ಅವರು ಶತಾಯುಷಿಯಾಗಿರುವ ಪೊನ್ನಕ್ಕಿ ಅವರ ಸಾಧನೆ ಪ್ರಸ್ತುತ ಸಮಾಜಕ್ಕೆ ಮಾದರಿಯಾಗಿದೆ. ಅವರ ದಿನನಿತ್ಯದ ದಿನಚರಿಯ ವಿಧಾನಗಳು ಇಂದಿನ ಕಾಲಘಟ್ಟದ ಮಕ್ಕಳು ಅನುಸರಿಸಬೇಕು ಎಂದು ಕರೆ ನೀಡಿದರು.