ಮಡಿಕೇರಿ, ಆ. ೩೦: ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನಕ್ಕೆ ತಾ. ೨೦ ರಿಂದ ಸೆಪ್ಟೆಂಬರ್ ೨೦ ರವರೆಗೆ ಆನ್‌ಲೈನ್ ಮುಖಾಂತರ ಆಂತರಿಕ ಚುನಾವಣೆ ನಡೆಯಲಿದೆ. ಇದೀಗ ಜಿಲ್ಲಾ ಯುವ ಕಾಂಗ್ರೆಸ್ ಸಾರಥ್ಯ ಪಡೆಯಲು ಬಿಗ್ ಫೈಟ್ ಏರ್ಪಟ್ಟಿದೆ.

ಪಕ್ಷದಲ್ಲಿ ಅಧಿಕಾರ ವಹಿಸಿಕೊಳ್ಳಲು ಜಿಲ್ಲೆಯ ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪೈಪೋಟಿ ಏರ್ಪಟ್ಟಿದ್ದು, ಹಾಲಿ ಕೊಡಗು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಹಾನಗಲ್ ಅವರ ಅವಧಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕಳೆದ ಬಾರಿ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಪರಾಜಿತಗೊಂಡಿದ್ದ ಮೈಸಿ ಕತ್ತಣಿರ ಹಾಗೂ ೨೦೧೭ ರಿಂದ ೨೦೨೧ ರವರೆಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜಮ್ಮಡ ಸೋಮಣ್ಣ ಅವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ.

ಅಧ್ಯಕ್ಷ ಸ್ಥಾನಕ್ಕೆ ಒಟ್ಟು ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಮೋದ್ ಎಂ.ಜಿ., ಫಮೀರಾ ಪಿ.ಎ., ಮೈಕಲ್ ಮಾರ್ಷಲ್, ಇಸ್ಮಾಯಿಲ್ ಪಿ.ಎಂ., ರಿಜ್ವಾನ್ ಷರೀಫ್, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ಆದರೆ ಮೈಸಿ ಕತ್ತಣಿರ ಹಾಗೂ ಜಮ್ಮಡ ಸೋಮಣ್ಣ ನಡುವೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೇರ ಫೈಟ್ ನಡೆಯುತ್ತಿದೆ. ಮೈಸಿ ಕತ್ತಣಿರ ಅವರು ಹೊಸ ಮುಖಗಳನ್ನು ಎರಡು ವಿಧಾನಸಭೆ ಮತ್ತು ಆರು ಬ್ಲಾಕ್ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತಂಡದೊAದಿಗೆ ಪ್ರಚಾರ ನಡೆಸುತ್ತಿದ್ದಾರೆ.

ಆದರೆ ಜಮ್ಮಡ ಸೋಮಣ್ಣ ಅವರು ಕೊನೆಯ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿದ್ದರು. ಇದೀಗ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆಯ ನಂತರ ಅಂತಿಮಗೊAಡ ಬಳಿಕ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಸಭೆ ಹಾಗೂ ಬ್ಲಾಕ್‌ನಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳನ್ನು ತಮ್ಮೊಂದಿಗೆ ಸೇರಿಸಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.

ಚುನಾವಣೆಗೂ ಮುಂಚಿತವಾಗಿಯೇ ಮೈಸಿ ಕತ್ತಣಿರ ಅವರು, ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಜಿಲ್ಲೆಯಾದ್ಯಂತ ಭೇಟಿ ನೀಡಿ ಚುನಾವಣೆಗೆ ಬೆಂಬಲ ನೀಡುವಂತೆ ಕೋರಿ, ಹಲವು ಭಾಗಗಳಲ್ಲಿ ಯುವಕರ ಪಡೆಯನ್ನು ರಚಿಸಿದ್ದರು. ಮೈಸಿ ಕತ್ತಣಿರ ಯುವ ನಾಯಕ ಎಂಬ ೧೦ಕ್ಕೂ ಹೆಚ್ಚು ವಾಟ್ಸಾö್ಯಪ್ ಗ್ರೂಪ್ ಮೂಲಕ ಅವರ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಯಾಗಿದ್ದ ಜಮ್ಮಡ ಸೋಮಣ್ಣ ಅವರು ಪ್ರಸ್ತುತ ಪ್ರಚಾರದಲ್ಲಿ ಹಿಂದೆ ಉಳಿದಿದ್ದಾರೆ. ಜಮ್ಮಡ ಸೋಮಣ್ಣ ಮತ್ತು ಮೈಸಿ ಕತ್ತಣಿರ ಅವರ ನಡುವಿನ ಪೈಪೋಟಿಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಮೈಸಿ ಕತ್ತಣಿರ ಅವರಿಗೆ ಪ್ರಾಬಲ್ಯ ಕಾಣುತ್ತಿದೆ.

ವೀರಾಜಪೇಟೆ ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕಿಂತ ಬಿಗ್ ಫೈಟ್ ವೀರಾಜಪೇಟೆ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿವೆ.

ವೀರಾಜಪೇಟೆ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಒಟ್ಟು ನಾಲ್ಕು ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ಇದರಲ್ಲಿ ಒಬ್ಬ ಅಭ್ಯರ್ಥಿ ಎ.ಕೆ. ಆದಿತ್ಯ ಅಂಕಿತ್ ಪೊನ್ನಪ್ಪ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಮತ್ತೊಂದು ಅಭ್ಯರ್ಥಿ ಅಫ್ರೀನಾ ಸಿ.ಹೆಚ್. ಯಾವುದೇ ಪ್ರಚಾರದಲ್ಲಿ ತೊಡಗಿಕೊಳ್ಳದೆ ತಟಸ್ಥವಾಗಿದ್ದಾರೆ. ನಾಮಕಾವಸ್ಥೆಗೆ ನಾಮಪತ್ರ ಸಲ್ಲಿಸಿದ್ದಾರೆ.

ವಿಶೇಷವೇನೆಂದರೆ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವೀರಾಜಪೇಟೆ ಪುರಸಭೆ ಸದಸ್ಯ ಪಟ್ಟಡ ರಂಜಿ ಪೂಣಚ್ಚ ಅವರ ಮಗ ರಕ್ಷಿತ್ ಚಂಗಪ್ಪ ಕಣದಲ್ಲಿದ್ದಾರೆ. ಮತ್ತೊಂದೆಡೆ ಹಾಲಿ ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ ಅವರು ಸ್ಪರ್ಧಿಸಿದ್ದಾರೆ.

ರಕ್ಷಿತ್ ಚಂಗಪ್ಪ ಮತ್ತು ಅಂಕಿತ್ ಪೊನ್ನಪ್ಪ ನಡುವೆ ವೀರಾಜಪೇಟೆ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಶತಾಯಗತಾಯವಾಗಿ ತಮ್ಮ ಮಗನನ್ನು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಿಸಲು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಪ್ರಯತ್ನಿಸುತ್ತಿದ್ದಾರೆ.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಇಬ್ಬರ ನಡುವೆ ಪೈಪೋಟಿ!

ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನವೀದ್ ಖಾನ್, ಮೊಹಮ್ಮದ್ ಹರ್ಷದ್ ಪಿ.ಎಲ್., ಅಬ್ದುಲ್ ಹಕೀಮ್ ಎಂ.ಎ., ನಿಸಾರ್ ಡಿ.ಹೆಚ್., ಅಸ್ಫಾಕ್ ಕೆ.ಎ. ಕಣದಲ್ಲಿದ್ದಾರೆ.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್ ಸುಂಟಿಕೊಪ್ಪ ಪುತ್ರ ಮೊಹಮ್ಮದ್ ಹರ್ಷದ್ ಪಿ.ಎಲ್. ಹಾಗೂ ಸುಂಟಿಕೊಪ್ಪ ನಿವಾಸಿ ಅಬ್ದುಲ್ ಹಕೀಮ್ ನಡುವೆ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.

ಇನ್ನುಳಿದಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅನೂಪ್ ಕುಮಾರ್ ಸುಂಟಿಕೊಪ್ಪ, ದರ್ಶನ್ ಮಡ್ಲಂಡ, ಆಶಿಷ್ ಗೌಡ, ಎಂ.ಎಸ್. ಪ್ರೇಮ್‌ಕುಮಾರ್ ಕಣದಲ್ಲಿದ್ದು, ಸುಂಟಿಕೊಪ್ಪ ನಿವಾಸಿ ಹಾಲಿ ಸುಂಟಿಕೊಪ್ಪ ಯುವ ಕಾಂಗ್ರೆಸ್ ಅಧ್ಯಕ್ಷ ಅನೂಪ್ ಕುಮಾರ್ ಮಡಿಕೇರಿ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.

ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚಿರಂಜೀವಿ ಹೆಚ್.ಕೆ., ಸಚಿನ್ ಹೆಚ್.ಆರ್., ಅರ್ಜುನ ಎ.ಆರ್. ಕಣದಲ್ಲಿದ್ದಾರೆ. ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕವನ್ ಕೊತ್ತೊಳಿ, ದರ್ಶನ್ ಟಿ.ಆರ್. ಹಾಗೂ ಆಶಿಕ್ ಎಂ.ಹೆಚ್. ಕಣದಲ್ಲಿದ್ದಾರೆ.

ಸೋಮವಾರಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಿರಣ್ ಡಿ.ಯು., ಯೋಗೇಶ್ ಹೆಚ್.ಜಿ. ನಿಖಿಲ್ ಕೆ.ಎಂ. ಕಣದಲ್ಲಿದ್ದಾರೆ.

ವೀರಾಜಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಕೀಲ್ ಕೆ.ಎಸ್., ಸಯ್ಯದ್ ಶಬೀರ್, ಮೊಹಮ್ಮದ್ ಸಫ್ವಾನ್, ಮೊಹಮ್ಮದ್ ಅಫ್ರೀದ್ ಕಣದಲ್ಲಿದ್ದು, ವೀರಾಜಪೇಟೆ ನಿವಾಸಿ ಶಕೀಲ್ ಗೆಲ್ಲುವ ಸಾಧ್ಯತೆಗಳು ಕಂಡುಬರುತ್ತಿವೆ. ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಟಿ.ಯು., ಸೋಮಣ್ಣ ಕೆ.ಎಂ., ದ್ಯಾನ್ ದೇವಯ್ಯ, ಸಂಜಯ್ ಶಂಕರ್ ಸ್ಪರ್ಧಿಸುತ್ತಿದ್ದು, ನಿಖಿಲ್ ಸೋಮಣ್ಣ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ.

ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಜುಬೈರ್ ಹಾಗೂ ಅಬ್ದುಲ್ ನಿಸಾರ್ ಸೇರಿ ಇಬ್ಬರು ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.

ಐವೈಸಿ ಆ್ಯಪ್ ಮೂಲಕ ಮತ ಚಲಾವಣೆ!

ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ತಾ. ೨೦ ರಿಂದ ಸೆಪ್ಟೆಂಬರ್ ೨೦ ರವರೆಗೂ ನಡೆಯಲಿದೆ. ಯುವ ಕಾಂಗ್ರೆಸ್ ಸದಸ್ಯರಾಗಲು ಬಯಸುವವರು ಐವೈಸಿ ಆ್ಯಪ್ ಮೂಲಕ ಆನ್‌ಲೈನ್ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕು. ಆನ್‌ಲೈನ್ ಸದಸ್ಯತ್ವ ಪಡೆದವರಿಗೆ ಸದಸ್ಯತ್ವ ಪಡೆದ ದಿನದಿಂದಲೇ ಬ್ಲಾಕ್, ಜಿಲ್ಲಾ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲು ಮತದಾನ ಮಾಡಬಹುದು.

ಒಬ್ಬ ಸದಸ್ಯ ಆರು ಮಂದಿ ಪದಾಧಿಕಾರಿಗಳಿಗೆ ಮತ ಹಾಕುವ ಅಧಿಕಾರವಿರುತ್ತದೆ. ರಾಜ್ಯಾಧ್ಯಕ್ಷ, ರಾಜ್ಯಮಟ್ಟದ ಪದಾಧಿಕಾರಿ, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಆಯ್ಕೆಗೆ ಮತ ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ ಐವೈಸಿ ಆ್ಯಪ್‌ನಲ್ಲಿ ಲಭ್ಯವಿದೆ.

ಯುವ ಕಾಂಗ್ರೆಸ್ ಸದಸ್ಯತ್ವ ಪಡೆಯುವವರು ೩೫ ವರ್ಷ ದೊಳಗಿನವರಾಗಿರಬೇಕು. ಸದಸ್ಯತ್ವ ನೋಂದಣಿಗೆ ಶುಲ್ಕ ೫೦ ರೂಪಾಯಿ ಕಟ್ಟಬೇಕು. ಅವರಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಮತದಾನ ಮಾಡುವಾಗ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ. ಸದಸ್ಯತ್ವ ನೋಂದಣಿ ಸಮಯದಲ್ಲಿ ಸದಸ್ಯತ್ವ ಪಡೆಯುವವರ ಮುಖಚರ್ಯೆಯನ್ನು ಸ್ಕಾö್ಯನ್ ಮಾಡಲಾಗುತ್ತದೆ.ಚುನಾವಣಾ ಫಲಿತಾಂಶದ ದಿನವನ್ನು ಕೆಪಿಸಿಸಿ ಘೋಷಣೆ ಮಾಡಿಲ್ಲ.

- ಕೆ.ಎಂ ಇಸ್ಮಾಯಿಲ್ ಕಂಡಕರೆ