ಸಮೀಪದಲ್ಲೇ ಹಠಾತ್ತನೇ ಎದುರಾದ ಸಲಗವೊಂದು ವೃದ್ಧೆ ಮಹಿಳೆ ಕಾತಾಯಿಯ ಮೇಲೆ ದಾಳಿ ನಡೆಸಿದೆ.

ಸೊಂಡಿಲಿನಿAದ ಎತ್ತಿ ಎಳೆದು ಹಾಕಿ ಎದೆಗೆ ತುಳಿದು ಸಾಯಿಸಿರುವ ಕುರುಹುಗಳು ಪತ್ತೆ ಆಗಿವೆ. ಘಟನಾ ಸ್ಥಳದಲ್ಲಿ ರಕ್ತದಕೊಳ ಸೃಷ್ಟಿಯಾಗಿದೆ. ನಂತರ ಈ ಕಾಡಾನೆಯ ವಸತಿ ಪ್ರದೇಶದ ಮೂಲಕ ಸಮೀಪದ ಗದ್ದೆಯ ಮುಖಾಂತರ ಘೀಳಿಡುತ್ತ ತೆರಳಿರುವುದನ್ನು ಸ್ಥಳೀಯರು ನೋಡಿದ್ದಾರೆ. ಆದರೆ ಮಹಿಳೆ ಸಾವನ್ನಪ್ಪಿದ್ದು ತಿಳಿದಿರಲಿಲ್ಲ.

ಸುಳಿವು ನೀಡಿದ ಗಂಬೂಟ್ ಶೂ!

ಕಾಡಾನೆಯು ಕಾತಾಯಿರವರನ್ನು ಬಲಿ ತೆಗೆದುಕೊಂಡ ಬಳಿಕ ಘೀಳಿಡುವ ಶಬ್ದವನ್ನು ಕೇಳಿ ಸ್ಥಳೀಯ ನಿವಾಸಿಯಾಗಿರುವ ವಿನು ಎಂಬ ಯುವಕ ಅದೇ ಮಾರ್ಗವಾಗಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಅನತಿ ದೂರದ ಬಳಿ ಕಾಲಿಗೆ ಧರಿಸಿದ ಗಂಬೂಟ್ ಶೂವೊಂದು ಕಂಡು ಬಂದಿತ್ತು.

ಸಿದ್ದಾಪುರ/ ಪಾಲಿಬೆಟ್ಟ, ಆ. ೩೦: ಕಾಡಾನೆ ದಾಳಿಗೆ ವೃದ್ಧೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಚೆನ್ನಯ್ಯನಕೋಟೆ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಕಾತಾಯಿ (೭೨) ಎಂಬ ಮಹಿಳೆ ಮೃತ ದುರ್ದೈವಿ.

ಮೃತ ಕಾತಾಯಿ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು ಅವರ ತಾಯಿ ಆಗಿದ್ದು, ನಾಗರಾಜು ಮತ್ತು ಅವರ ತಮ್ಮನ ಕುಟುಂಬದವರು ಅವರ ಸಂಬAಧಿಕರ ಮನೆ ತಮಿಳುನಾಡಿನ ಈರೋಡ್‌ನಲ್ಲಿ ಪುಣ್ಯ ಕಾರ್ಯಕ್ರಮಕ್ಕೆಂದು ಹೋಗಿದ್ದರು.

ನಾಗರಾಜುರವರ ಮನೆಯಲ್ಲಿ ಯಾರು ಇಲ್ಲದ ಕಾರಣ ಕಾತಾಯಿರವರು ಗುರುವಾರ ಸಂಜೆ ನಾಗರಾಜು ಅವರ ಮನೆಗೆ ತೆರಳಿ ಅಲ್ಲಿ ತಂಗಿದ್ದರು. ನಾಗರಾಜು ಅವರ ಮನೆಯಲ್ಲಿ ಸಾಕುಪ್ರಾಣಿಗಳು ಇರುವ ಹಿನ್ನೆಲೆಯಲ್ಲಿ ಅವುಗಳಿಗೆ ಆಹಾರ ನೀಡಲು ಅಲ್ಲಿಗೆ ಹೋಗಿದ್ದರು. ಶುಕ್ರವಾರದಂದು ನಾಗರಾಜುವಿನ ಮನೆಯಿಂದ ಬೆಳಿಗ್ಗೆ ಅಂದಾಜು ೬.೪೫ರ ಸಮಯಕ್ಕೆ ದ್ವಿತೀಯ ಮಗನಾದ ಶ್ರೀನಿವಾಸನ ಮನೆಗೆ ಕಾಲ್ನಡಿಗೆಯಲ್ಲಿ ಕಾತಾಯಿರವರು ತೆರಳುತ್ತಿದ್ದಾಗ ಮನೆಯ (ಮೊದಲ ಪುಟದಿಂದ) ಕೂಡಲೇ ವಿನು ಸ್ಥಳಕ್ಕೆ ಹೋಗಿ ನೋಡಿದಾಗ ಬೇಲಿಯೊಂದರ ಬಳಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಕಾತಾಯಿರವರ ಮೃತದೇಹ ಕಂಡು ಬಂದಿತ್ತು. ಕೂಡಲೇ ಅಕ್ಕಪಕ್ಕದವರನ್ನು ಕರೆದು ಮಾಹಿತಿ ನೀಡಿದರು.

ಈ ಹಿಂದೆ ಕೂಡ ಈ ಭಾಗದ ವಸತಿ ಪ್ರದೇಶದಲ್ಲಿ ಹಾಗ ಮಸೀದಿಯ ಬಳಿ ಚೆನ್ನಯ್ಯನಕೋಟೆ ಪಟ್ಟಣ ವ್ಯಾಪ್ತಿಯಲ್ಲಿ ಒಂಟಿ ಸಲಗವೊಂದು ಓಡಾಡುತ್ತಿರುವುದು ಕಂಡು ಬಂದಿದೆ ಎಂದು ಪಂಚಾಯಿತಿ ಸದಸ್ಯೆ ಶೀಲಾ ‘ಶಕ್ತಿ’ಗೆ ಮಾಹಿತಿ ನೀಡಿದರು.

ಮೃತ ಮಹಿಳೆ ಕುಟುಂಬಕ್ಕೆ

ರೂ. ೫ ಲಕ್ಷ ಪರಿಹಾರ

ಕಾಡಾನೆ ದಾಳಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಕಾತಾಯಿ ಅವರ ಕುಟುಂಬಕ್ಕೆ ಅರಣ್ಯ ಇಲಾಖೆ ಯಿಂದ ತುರ್ತು ಪರಿಹಾರವಾಗಿ ರೂ. ೫ ಲಕ್ಷದ ಚೆಕ್ಕನ್ನು ನೀಡಲಾಗುವುದೆಂದು ವೀರಾಜಪೇಟೆ ತಾಲೂಕು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್. ಹೆಚ್. ಜಗನ್ನಾಥ್ ತಿಳಿಸಿದ್ದಾರೆ. ಮುಂದಿನ ಪರಿಹಾರದ ಮೊತ್ತವನ್ನು ಅವರ ಕುಟುಂಬ ವರ್ಗದ ಮಾಹಿತಿ ಪಡೆದು ನಂತರ ನೀಡುವುದಾಗಿ ತಿಳಿಸಿದರು.

ಗ್ರಾಮಸ್ಥರ ಅಸಮಾಧಾನ

ಚೆನ್ನಯ್ಯನಕೋಟೆ ಗ್ರಾಮದ ವಸತಿ ಪ್ರದೇಶದಲ್ಲೇ ಬೆಳಗ್ಗಿನ ಜಾವ ಕಾಡಾನೆ ದಾಳಿ ನಡೆಸಿ ಮಹಿಳೆಯನ್ನು ಹತ್ಯೆ ಮಾಡಿದ ವಿಚಾರ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಭಾಗದಲ್ಲಿ ಒಂಟಿ ಸಲಗವೊಂದು ಕಳೆದ ಒಂದು ತಿಂಗಳಿನಿAದ ರಾಜಾರೋಷವಾಗಿ ಸುತ್ತಾಡುತ್ತಿದ್ದು, ಇದನ್ನು ಸೆರೆ ಹಿಡಿದು ಸ್ಥಳಾಂತರ ಮಾಡದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಸರ್ಕಾರವು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಆಗ್ರಹಪಡಿಸಿದರು. ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿದ್ದ ಮಡಿಕೇರಿ ವೃತ್ತ ನಿರೀಕ್ಷಕ ಗ್ರಾಮಸ್ಥರನ್ನು ಸಮಾಧಾನಪಡಿಸಿದರು. ನಾಗರಹೊಳೆ ವನ್ಯಜೀವಿ ವಿಭಾಗದ ನಿರ್ದೇಶಕಿ ಸೀಮಾ ಹಾಗೂ ಡಿಎಫ್‌ಓ ಜಗನ್ನಾಥ್ ಒಂಟಿ ಸಲಗವನ್ನು ಸೆರೆ ಹಿಡಿಯುವ ಭರವಸೆ ನೀಡಿದರು.

ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದ ಮಹಿಳೆ ಕಾತಾಯಿ ಅವರ ಮೃತದೇಹವನ್ನು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸ ಲಾಯಿತ್ತು. ಮೃತ ಕಾತಾಯಿರವರು ಈರ್ವರು ಪುತ್ರರನ್ನು ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತ ಮಹಿಳೆಯ ಈರ್ವರು ಪುತ್ರರು ತಮಿಳುನಾಡಿಗೆ ತೆರಳಿದ ಸಂದರ್ಭದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆಯಿಂದಾಗಿ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ವಿಚಾರ ತಿಳಿದು ಅವರು ಮರಳಿ ಚೆನ್ನಯ್ಯನಕೋಟೆಗೆ ಆಗಮಿಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ಸAಕೇತ್ ಪೂವಯ್ಯ ಭೇಟಿ

ಕಾಡಾನೆ ದಾಳಿಗೆ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಘಟನೆಯ ಸ್ಥಳಕ್ಕೆ ರಾಜ್ಯ ಅರಣ್ಯ ಸಮಿತಿಯ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿದರು. ಘಟನೆಯ ಸ್ಥಳಕ್ಕೆ ವೀರಾಜಪೇಟೆ ತಾಲೂಕು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ವಲಯ ಅರಣ್ಯಾಧೀಕಾರಿ ಗಂಗಾಧರ್, ಎಸಿಎಫ್ ಗೋಪಾಲ್, ಸಿದ್ದಾಪುರ ಠಾಣಾಧಿಕಾರಿಗಳಾದ ಶಿವಣ್ಣ, ರಾಘವೇಂದ್ರ ಇನ್ನಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಸಂಬAಧ ಸಿದ್ದಾಪುರ