ಚೆಟ್ಟಳ್ಳಿ, ಆ. ೩೦: ಕೈಲ್‌ಪೊಳ್ದ್ ಹಬ್ಬದ ಆಚರಣೆಯ ಅಂಗವಾಗಿ ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಕೈಲ್‌ಪೊಳ್ದ್ ಧಾರೆ ಪೂಜೆ ನೆರವೇರಿತು. ಕ್ಷೇತ್ರಪಾಲಕ, ನಾಗ, ಗಣಪತಿಗೆ ಪೂಜೆ ಸಲ್ಲಿಸಿ ಶ್ರೀ ಭಗವತಿ ದೇವಿಗೆ ಪೂಜೆ ಸಲ್ಲಿಸಲಾಯಿತು. ಊರಿನ ಹಿರಿಯರಾದ ಬಟ್ಟೀರ ಕಾವೇರಪ್ಪ ಅವರು ಒಳಿತಿಗೆ ಪ್ರಾರ್ಥಿಸಿದರು. ಮಹಾ ಮಂಗಳಾರತಿಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.