ಮಡಿಕೇರಿ: ೭೮ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಶ್ರೀ ಗಣೇಶ್ ಯುವ ಬಳಗ ತಂಡದಿAದ ಸಂಪಾಜೆ ಗ್ರಾಮದ ಕೊಯನಾಡು ಸಮೀಪದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.

ಸಂಪಾಜೆ ಕೊಯನಾಡು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಬಸ್ ತಂಗುದಾಣ ಮಲಿನಗೊಂಡಿರುವುದನ್ನು ಗಮನಿಸಿದ ಗಣೇಶ್ ಯುವಕ ಮಂಡಲದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಯುವಕರು ಸೇರಿ ಬಸ್ ತಂಗುದಾಣವನ್ನು ಮತ್ತು ರಸ್ತೆಬದಿಯ ಸೂಚನಾಫಲಕಗಳನ್ನು ಸ್ವಚ್ಛ ಮಾಡಿದರು ಹಾಗೂ ಚರಂಡಿಗಳಲ್ಲಿ ಕಸ ಕಡ್ಡಿ, ಹೂಳು ಮಣ್ಣು ತುಂಬಿದ್ದು ಚರಂಡಿಗಳನ್ನು ಸ್ವಚ್ಛತೆ ಮಾಡಿ ನೀರು ಸರಾಗವಾಗಿ ಹೋಗುವಂತೆ ಮಾಡಿದರು.

ಮಡಿಕೇರಿ : ಮಡಿಕೇರಿ ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆಯಲ್ಲಿ ೭೮ನೇ ವರ್ಷದ ಸ್ವಾತಂತ್ರö್ಯ ದಿನಾಚರಣೆ ಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ವಕೀಲರು ಹಾಗೂ ಗೌಡ ಸಂಘದ ಪ್ರಸ್ತುತ ಅಧ್ಯಕ್ಷರೂ ಆದ ಕೆ.ಡಿ. ದಯಾನಂದ ನೆರವೇರಿಸಿದರು. ರಾಷ್ಟçಗೀತೆ ಹಾಗೂ ಧ್ವಜಗೀತೆ ಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೆ.ಡಿ. ದಯಾನಂದ ಮಕ್ಕಳಲ್ಲಿ ದೇಶದ ಬಗ್ಗೆ ಏಕತೆ, ಸಮಾನತೆಯನ್ನು, ಧೈರ್ಯ -

ಗಾಳಿಬೀಡು: ಮಡಿಕೇರಿ ಸಮೀಪದ ಗಾಳಿಬೀಡಿನಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ೭೮ನೇ ಸ್ವಾತಂತ್ರೋತ್ಸವವು ನಡೆಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾಲಯದ ಪ್ರಬಾರಿ ಪ್ರಾಚಾರ್ಯರಾದ ಸುಧಾಮಣಿ ಒ.ಎಂ ಧ್ವಜಾರೋಹಣ ಮಾಡಿದರು.

ಈ ಸಂದರ್ಭದಲ್ಲಿ ಸಿಸ್ಕೋ ಕಂಪನಿಯ ಸ್ವಯಂಸೇವಕರು ಭಾಗವಹಿಸಿ ಬ್ಯಾಗ್ನೆಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಹಾಡಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಯಿತು. ಮಾರುತಿ ದಾಸಣ್ಣವರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕಾರ್ಯದರ್ಶಿಯವರಾದ ಪ್ರೀತು, ಸಮಿತಿ ಸದಸ್ಯರಾದ ಉಮೇಶ್, ಸುಬ್ರಮಣಿ, ಮಕ್ಕಳ ಪೋಷಕರು, ಶಿಕ್ಷಕರು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವರನ್ನು ವಿದ್ಯಾರ್ಥಿ ಪಿ.ಜೆ. ಪವಿನ್ ಸ್ವಾಗತಿಸಿ, ಶ್ರೀಹಾನ್ ಎಸ್. ಆಚಾರ್ಯ ವಂದಿಸಿದರು. ಶಿಕ್ಷಕಿ ರಶ್ಮಿ ಟಿ.ಎನ್. ಕಾರ್ಯಕ್ರಮವನ್ನು ನಿರೂಪಿಸಿದರು.ವೀರಾಜಪೇಟೆ : ಸ್ವಾತಂತ್ರö್ಯ ದಿನಾಚರಣೆಯನ್ನು ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಆಶ್ರಯದಲ್ಲಿ ಆಚರಿಸಲಾಯಿತು. ಬ್ಯಾಂಕ್ ಅಧ್ಯಕ್ಷ ಹಿರಿಯ ಸಹಕಾರಿ ಧುರೀಣ ಕರ್ನಂಡ ಎಂ.ರಘು ಸೋಮಯ್ಯ ಧ್ವಜಾರೋಹಣ ನೆರವೇರಿಸಿದರು.

ಉಪಾಧ್ಯಕ್ಷರಾದ ಪಾಂಡAಡ ರಚನ್ ಮೇದಪ್ಪ ನಿರ್ದೇಶಕರುಗಳಾದ ಕೋಲತಂಡ ಬೋಪಯ್ಯ, ಮಾಳೇಟಿರ ನಂಜಪ್ಪ ಮಾತನಾಡಿ ದರು. ನಿರ್ದೇಶಕರುಗಳಾದ ಕೆ.ಬಿ.ಪ್ರತಾಪ್, ಎನ್.ಕೆ.ಸುಜಿತ್, ಐ.ಎಂ.ಕಾವೇರಮ್ಮ, ಮುತ್ತಮ್ಮ, ಕಾಂಡೇರ ಚರ್ಮಣ, ಸಂಪಿ ಪೂಣಚ್ಚ, ಮಾದಪಂಡ ಕಾಶಿ ಕಾವೇರಪ್ಪ ವ್ಯವಸ್ಥಾಪಕ ಪೂವಯ್ಯ ಸಿ.ಕೆ., ಲೆಕ್ಕಾಧಿಕಾರಿ ಕೆ.ಸಿ.ಪೊನ್ನಪ್ಪ, ಇತರ ಸಿಬ್ಬಂದಿಗಳಾದ ಎ.ಜೆ.ವಿಜಯ, ವಿ.ವಿ.ದೇವಯ್ಯ ,ಪಿ.ಎನ್ ಉಷಾಕುಮಾರಿ, ಎಂ.ಎಸ್.ಕವಿ, ಹೆಚ್.ಎಂ.ಸುರೇಶ್ ಮತ್ತು ಟಿ.ಡಿ.ವಾಸು ಹಾಜರಿದ್ದರು. ಮಡಿಕೇರಿ : ಇಲ್ಲಿನ ಎಸ್‌ಆರ್‌ವಿಕೆ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ಸುಬ್ರಮಣ್ಯ ನಗರದಲ್ಲಿ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು.

ಅಸೋಸಿಯೇಶನ್ ಅಧ್ಯಕ್ಷ ಮುಕ್ಕಾಟಿ ಪೂಣಚ್ಚ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಉತ್ತಮ ವೈದ್ಯ ಪ್ರಶಸ್ತಿಗೆ ಭಾಜನರಾಗಿರುವ ಡಾ. ಮೋಹನ್ ಅಪ್ಪಾಜಿ ಅವರನ್ನು ಸನ್ಮಾನಿಸಲಾಯಿತು. ವಕೀಲ ಹುದೇರಿ ನಾಗೇಶ್, ನಗರಸಭಾ ಸದಸ್ಯ ಕಾಳಚಂಡ ಅಪ್ಪಣ್ಣ, ಮುಕ್ಕಾಟಿ ಗಿರಿಧರ್, ನಾಟೋಳಂಡ ಕಾವೇರಪ್ಪ, ನಾಳಿಯಂಡ ನಾಣಯ್ಯ ಅವರುಗಳು ಸನ್ಮಾನ ಕಾರ್ಯ ನೆರವೇರಿಸಿದರು. ನಿವೃತ್ತ ಪ್ರಾಂಶುಪಾಲ ಮಲ್ಚೀರ ಕಾರ್ಯಪ್ಪ ಮುಖ್ಯ ಭಾಷಣ ಮಾಡಿದರು. ಸನಿಲ್ ರೈ ಹಾಗೂ ಲಿಪಾಕ್ಷಿ ದೇಶಭಕ್ತಿಗೀತೆ ಹಾಡಿದರು.ದೇವಣಗೇರಿ : ೭೮ನೇ ಸ್ವಾತಂತ್ರö್ಯ ದಿನಾಚರಣೆಯನ್ನು ದೇವಣಗೇರಿ ಬಿ.ಸಿ. ಪ್ರೌಢಶಾಲೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಚೇಂದAಡ ಜಿ. ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಪೂರ್ವಾಹ್ನ ೯.೩೦ಕ್ಕೆ ಶಾಲಾ ಆಡಳಿತ ಮಂಡಳಿಯ ಕಾರ್ಯನಿರ್ವಾಹಕಿ ಕರ್ನಂಡ ಎನ್. ಬೊಳ್ಳಮ್ಮ ಅವರು ಧ್ವಜಾರೋಹಣ ಮಾಡಿದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧಿಕಾರಿ ಪಿ.ಎ. ಲಕ್ಷಿö್ಮÃ ನಾರಾಯಣ ಅವರು ಮಾತನಾಡಿ, ವಿದ್ಯಾರ್ಥಿಗಳು ದೇಶಾಭಿಮಾನದೊಂದಿಗೆ ದೈವ ಭಕ್ತಿಯನ್ನು ಹೊಂದಿರಬೇಕು. ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಚೇಂದAಡ ಜಿ. ಪೊನ್ನಪ್ಪ ಅವರು ಮಾತನಾಡಿ, ವಿದ್ಯಾರ್ಥಿಗಳು ಗುರು ಹಿರಿಯರಿಗೆ ಹಾಗೂ ತಂದೆ ತಾಯಿಯವರಿಗೆ ಹಾಗೂ ದೇಶಕ್ಕೆ ಸದಾ ಗೌರವ ನೀಡುವಂತೆ ಆಗಬೇಕೆಂದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯ ಮೂಕೋಂಡ ನಂಜಪ್ಪ, ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್, ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಜರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಶಾಲಾ ಮುಖ್ಯಶಿಕ್ಷಕ ಹೆಚ್.ಡಿ. ಲೋಕೇಶ್ ಅವರು ನೆರವೇರಿಸಿದರು. ನಿರೂಪಣೆಯನ್ನು ಶಿಕ್ಷಕಿ ವೈ. ಪ್ರಮೀಳಾ ಕುಮಾರಿ ಮಾಡಿ, ಶಿಕ್ಷಕಿ ನಂದಿನಿ ಅವರು ವಂದಿಸಿದರು.