ಮಡಿಕೇರಿ, ಆ. ೩೦: ಕಾಂಗ್ರೆಸ್‌ಗೆ ದಲಿತರ ಮೇಲೆ ಕಾಳಜಿ ಇಲ್ಲ. ಪರಿಶಿಷ್ಟ ವರ್ಗವನ್ನು ಕಾಂಗ್ರೆಸ್ ಪಕ್ಷ ಕೇವಲ ಮತ ಬ್ಯಾಂಕ್‌ಗೆ ಬಳಸಿಕೊಳ್ಳುತ್ತಿದೆ ಎಂದು ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಆರೋಪಿಸಿದರು. ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಕಾರ್ಯಕಾರಿಣಿ ಸಮಿತಿ ಸಭೆ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಬಿಜೆಪಿ ಮೇಲ್ವರ್ಗದವರ ಪಕ್ಷ ಎಂಬ ಮಾತಿದೆ. ಅದರೆ, ದೇಶದ ಅತ್ಯುನ್ನತ ಹುದ್ದೆಯಲ್ಲಿ ಹಿಂದುಳಿದ ಸಮುದಾಯದವರಿಗೆ ಬಿಜೆಪಿ ಸರಕಾರ ಸ್ಥಾನ ನೀಡಿದೆ. ಬಿಜೆಪಿಯಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಕಾಂಗ್ರೆಸ್ ಮತ ರಾಜಕಾರಣಕ್ಕಾಗಿ ಪರಿಶಿಷ್ಟ ವರ್ಗವನ್ನು ಬಳಸಿಕೊಂಡಿದೆ. ಬಿಜೆಪಿ ಸರಕಾರ ಪರಿಶಿಷ್ಟ ವರ್ಗದ ಕಲ್ಯಾಣಕ್ಕಾಗಿ ಅನುದಾನ ಮೀಸಲಿಡುತಿತ್ತು. ಇಂದಿನ ಕಾಂಗ್ರೆಸ್ ಸರಕಾರ ಮೀಸಲಿಟ್ಟ ಅನುದಾನವನ್ನು ಬೇರೆ ಕಡೆ ವರ್ಗಾಯಿಸಿ ದುರುಪಯೋಗ ಮಾಡಿಕೊಂಡಿದೆ. ವಾಲ್ಮೀಕಿ ನಿಗಮದಲ್ಲಿ ವ್ಯಾಪಕ ಭ್ರಷ್ಟಾಚಾರ ಇದಕ್ಕೆ ಉದಾಹರಣೆಯಾಗಿದೆ. ಹಗರಣಗಳನ್ನು ನಡೆಸಿ ರಾಜ್ಯವನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ಸಿಗರು ದಲಿತರನ್ನು ಬರಿಗೈಯಲ್ಲಿ ನಿಲ್ಲಿಸಿದೆ ಎಂದರು.

ಅಂಬೇಡ್ಕರ್ ಅವರ ಬೆಳವಣಿಗೆ ಸಹಿಸದೆ ರಾಜಕೀಯವಾಗಿ ಹಿನ್ನಡೆ ಮಾಡಿದವರು ಕಾಂಗ್ರೆಸ್ಸಿಗರು. ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರ

(ಮೊದಲ ಪುಟದಿಂದ) ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಅರಣ್ಯ ಇಲಾಖೆ ನೀತಿಯಿಂದ ಪರಿಶಿಷ್ಟ ವರ್ಗಕ್ಕೆ ಮೂಲಭೂತ ಸೌಲಭ್ಯ ಪಡೆಯಲು ಸಮಸ್ಯೆಯಾಗಿದೆ. ಹಾಡಿಗಳಲ್ಲಿ ವಾಸವಿರುವವರು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಅವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸವಾಗಬೇಕು. ಎಸ್.ಸಿ. ಮೋರ್ಚಾ ಸಂಘಟನೆ ಯಿಂದ ಪಕ್ಷಕ್ಕೂ ಮತ್ತಷ್ಟು ಬಲ ಬರುತ್ತದೆ ಎಂದ ಅವರು, ಕಾಂಗ್ರೆಸ್ ನಿಂದ ದಲಿತರ ಉದ್ದಾರವಾಗಿಲ್ಲ. ಮತಕ್ಕಾಗಿ ಮಾತ್ರ ದಲಿತ ಅಜೆಂಡಾವನ್ನು ಬಳಸುತ್ತದೆ. ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯದ ಪರಿಪಾಲನೆ ಆಗುತ್ತಿದೆ ಎಂದರು.

ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಎಂ. ರವಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್.ಸಿ. ಮೋರ್ಚಾ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ೧.೫೦ ಲಕ್ಷಕ್ಕೂ ಅಧಿಕ ಎಸ್.ಸಿ, ಎಸ್.ಟಿ. ಸಮುದಾಯದವರು ಜಿಲ್ಲೆಯಲ್ಲಿದ್ದು, ಪರಿಣಾಮಕಾರಿ ಯಾಗಿ ಮೋರ್ಚಾ ಕಾರ್ಯನಿರ್ವಹಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿಯೂ ಉತ್ತಮ ಕೆಲಸ ಮಾಡಲಾಗಿದೆ. ಹಗರಣಗಳ ವಿರುದ್ಧ, ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ. ಸಾಮಾಜಿಕ ಜಾಲತಾಣ ದಲ್ಲಿ ಅಭಿಯಾನ ಕೈಗೊಂಡಿದ್ದೇವೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ಪರಿಶಿಷ್ಟ ವರ್ಗವನ್ನು ಕಾಂಗ್ರೆಸ್ ದುರ್ಬಳಕೆ ಮಾಡಿ ಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯ ಜಾಗೃತಗೊಂಡು ಸಂಘಟಿತರಾಗ ಬೇಕು. ಬಿಜೆಪಿಯನ್ನು ದಲಿತ ವಿರೋಧಿ ಎಂಬ ಹಣೆಪಟ್ಟಿ ಹಾಕುವ ತಂತ್ರ ನಡೆದಿದೆ. ಆದರೆ, ಬಿಜೆಪಿ ಮಾತ್ರ ಪರಿಶಿಷ್ಟ ವರ್ಗಕ್ಕೆ ಹೆಚ್ಚಿನ ಯೋಜನೆ ನೀಡಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ಯಾವುದೇ ಜಾತಿ, ಪಂಗಡಕ್ಕೆ ಮೀಸಲಾಗಿರದೆ ಎಲ್ಲ ವರ್ಗಗಳಿಗೂ ಅವಕಾಶಗಳು ದೊರೆಯುವುದು ಬಿಜೆಪಿಯಲ್ಲಿ ಮಾತ್ರ ಎಂದು ಜನರಿಗೆ ಮನವರಿಕೆ ಆಗಿದೆ. ಸಂವಿಧಾನ ಆಶಯದಡಿ ಬಿಜೆಪಿ ಮುನ್ನಡೆಯುತ್ತಿದೆ. ಅತ್ಯುನ್ನತ ಹುದ್ದೆಗಳನ್ನು ಹಿಂದುಳಿದ ವರ್ಗಕ್ಕೆ ನೀಡಿರುವುದು ಬಿಜೆಪಿಯ ಬದ್ಧತೆ ತೋರುತ್ತದೆ. ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದರು.

ಮಡಿಕೇರಿ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಎಸ್.ಸಿ. ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ. ಚಂದ್ರು, ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ಚೆನ್ನಿಗಯ್ಯ, ವೀರಾಜಪೇಟೆ ಗ್ರಾಮಾಂತರ ಮಂಡಲ ಅಧ್ಯಕ್ಷ ಅಭಿಜಿತ್, ಸೋಮವಾರಪೇಟೆ ಮಂಡಲ ಅಧ್ಯಕ್ಷ ಜಗನ್ನಾಥ್, ಮಡಿಕೇರಿ ನಗರ ಮಂಡಲ ಅಧ್ಯಕ್ಷ ಮುಕುಂದ,ಎಸ್.ಟಿ. ಮೋರ್ಚಾ ಅಧ್ಯಕ್ಷ ಪರಮೇಶ್ವರ ಹಾಜರಿದ್ದರು.