ಭಾಗಮAಡಲ, ಆ. ೩೦: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಂಘವು ರೂ. ೬೧.೦೩ ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹೇಳಿದರು.

ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘದ ಸದಸ್ಯರು ನಿರಂತರವಾಗಿ ವ್ಯವಹಾರ ನಡೆಸುವುದರಿಂದ ಸಂಘ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗಿದೆ. ಸಂಘದಲ್ಲಿ ೧೦೮೬ ಸದಸ್ಯರಿದ್ದು ಒಟ್ಟು ೧೦೦೬ ಮಂದಿ ಮರಣ ನಿಧಿ ಸದಸ್ಯತ್ವವನ್ನು ಪಡೆದಿದ್ದಾರೆ.

ಈ ವರ್ಷ ೧೧ ಸದಸ್ಯರಿಗೆ ರೂ. ೧,೨೭,೫೦೦ ಮರಣನಿಧಿಯನ್ನು ಪಾವತಿಸಲಾಗಿದೆ ಎಂದರು. ಸಂಘದಲ್ಲಿ ಈ-ಸ್ಟಾö್ಯಂಪಿAಗ್ ಮಾರಾಟ ವ್ಯವಸ್ಥೆ ಕೈಗೊಂಡ ಬಳಿಕ ರೂ. ೫ ಲಕ್ಷ ಸ್ಟಾö್ಯಂಪ್ ಮಾರಾಟ ಮಾಡಲಾಗಿದೆ. ಪ್ರಸಕ್ತ ವರ್ಷ ರೂ. ೧,೫೮,೦೦೦ ವೆಚ್ಚದ ಈ-ಸ್ಟಾö್ಯಂಪಿAಗ್ ಮಾರಾಟ ಆಗಿದ್ದು ಈ-ಸ್ಟಾö್ಯಂಪಿAಗ್ ಮಾರಾಟದಿಂದ ರೂ. ೯೩೩೫ ಲಾಭವಾಗಿದೆ ಎಂದರು.

ಸAಘದ ಆರ್ಥಿಕ ಚಟುವಟಿಕೆ ಗಳನ್ನು ವಿಸ್ತರಿಸಬೇಕು ಎನ್ನುವ ಉದ್ದೇಶದಿಂದ ಸಂಘದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಯೋಜಿಸ ಲಾಗಿದೆ. ಸತತವಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಶ್ರಮದಿಂದ ಸಂಘ ಬೆಳೆಯುತ್ತಿದೆ. ಸಿಬ್ಬಂದಿಗಳ ಶ್ರೇಯೋಭಿವೃದ್ಧಿಗಾಗಿ ವಿಮೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಒಂದು ಲಕ್ಷ ರೂಪಾಯಿ ವಿಮೆ ಇದ್ದುದನ್ನು ೫ ಲಕ್ಷಗಳ ಮಿತಿ ಏರಿಸಲಾಗಿದ್ದು ಆಸ್ಪತ್ರೆಗಳಲ್ಲಿ ಸೌಲಭ್ಯ ದೊರಕುವಂತೆ ಮಾಡಲಾಗಿದೆ. ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿಯವರು ಅಪೆಕ್ಸ್ ಬ್ಯಾಂಕ್ ಮೂಲಕ ನೀಡಿದ ಎರಡೂವರೆ ಲಕ್ಷ ರೂ. ಸಹಾಯ ಧನದಲ್ಲಿ ಸಂಘದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದರು.

೩೨೦ ಜೇನು ಪೆಟ್ಟಿಗೆಗಳನ್ನು ಮಾರಾಟ ಮಾಡಲಾಗಿದ್ದು, ೧೪೧ ಪೆಟ್ಟಿಗೆಗಳಿಗೆ ಸಹಾಯಧನ ಲಭಿಸಿದೆ. ರೂ. ೮೪,೬೦೦ ಸಹಾಯಧನವನ್ನು ಸದಸ್ಯರಿಗೆ ವಿತರಿಸಲಾಗಿದೆ. ಅಯ್ಯಂಗೇರಿ ಪಂಚಾಯಿತಿಗೆ ಒಳಪಡುವ ಸದಸ್ಯರನ್ನು ಬೈಲದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ವೀರಾಜಪೇಟೆ ಸಹಕಾರ ಸಂಘದ ಒಪ್ಪಿಗೆ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಜೇನು ಮೇಣ ಖರೀದಿ ದರವನ್ನು ರೂ. ೩೫೦ ರಿಂದ ೪೦೦ಕ್ಕೆ ಹೆಚ್ಚಿಸಲಾಗಿದೆ. ಸೋಮವಾರಪೇಟೆ ವಾಣಿಜ್ಯ ಸಂಕೀರ್ಣದ ಅಭಿವೃದ್ಧಿ ಕಾರ್ಯವನ್ನು ರೂ. ೩೬.೨೯ ಲಕ್ಷ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಮೂರು ವರ್ಷದ ಹಿಂದಿನ ಡಿವಿಡೆಂಡ್ ಅನ್ನು ಕ್ಷೇಮನಿಧಿಗೆ ವರ್ಗಾಯಿಸುವ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ದಿನೇಶ್ ಅಯ್ಯಣಿರ, ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ಅಂಥೋಣಿ ಪ್ರಕಾಶ್, ಕಾರ್ಯ ನಿರ್ವಹಣಾಧಿಕಾರಿ ಸುಧಾ, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.