ಪೊನ್ನಂಪೇಟೆ, ಆ. ೩೧: ಪೊನ್ನಂಪೇಟೆ ತಾಲೂಕಿನ ಈಚೂರು-ಕುಂದ ಗ್ರಾಮದ ವ್ಯಾಪ್ತಿಯಲ್ಲಿ ಹಲವು ತಿಂಗಳುಗಳಿAದ ಕಾಡಾನೆಗಳ ಹಾವಳಿ ಮಿತಿಮೀರಿದೆ. ೧೪ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕೃಷಿ ಪ್ರದೇಶಗಳಿಗೆ ದಾಳಿ ನಡೆಸಿ ಕಾಫಿ, ಅಡಿಕೆ, ತೆಂಗು, ಭತ್ತದ ಬೆಳೆಗಳನ್ನು ಧ್ವಂಸಗೊಳಿಸುತ್ತಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕೈಗೊಳ್ಳುವಂತೆ ಈಚೂರು - ಕುಂದ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ.ಎಂ. ಶಂಕರ್ ಅವರನ್ನು ಭೇಟಿ ಮಾಡಿದ ಈಚೂರು - ಕುಂದ ಗ್ರಾಮಸ್ಥರ ನಿಯೋಗ, ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ. ಜನರು ಭಯದಲ್ಲಿ ಗ್ರಾಮದಲ್ಲಿ ಸಂಚರಿಸುವAತಾಗಿದೆ. ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವುದರಿಂದ ತೋಟದಲ್ಲಿ ಕೆಲಸ ನಿರ್ವಹಿಸಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದು, ಕಾಡಾನೆಗಳ ಉಪಟಳದಿಂದ ರೈತರು ಭತ್ತದ ಕೃಷಿ ಮಾಡಲು ಹಿಂದೇಟು ಹಾಕುತಿವೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಓಡಿಸುವ ಕೆಲಸ ಮಾಡುತ್ತಿದ್ದಾರೆ ಹೊರತು, ಕಾಡಿಗೆ ಮರಳಿ ಅಟ್ಟುವ ಪ್ರಯತ್ನಗಳಾಗುತ್ತಿಲ್ಲ. ಇದರಿಂದ ಕಾಡಾನೆಗಳು ಮರಳಿ ಗ್ರಾಮಗಳತ್ತ ಬರುತ್ತಿದ್ದು, ಕಾಡಾನೆಗಳ ಉಪಟಳ ಇದೇ ರೀತಿಯಲ್ಲಿ ಮುಂದುವರೆದರೇ, ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಕಚೇರಿ ಎದುರು ಧರಣಿ ನಡೆಸಲಾಗುವುದೆಂದು ಎಚ್ಚರಿಸಿದರು. ಬಳಿಕ ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕೈಗೊಳ್ಳುವಂತೆ ಆಗ್ರಹಿಸಿ, ಆರ್‌ಎಫ್‌ಓ ಬಿ.ಎಂ.ಶAಕರ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಈ ಸಂದರ್ಭ ಗ್ರಾಮಸ್ಥರಾದ ಗುಮ್ಮಟೀರ ದರ್ಶನ್ ದೇವಯ್ಯ, ತೀತಮಾಡ ಪೂವಣ್ಣ, ಕುಶಾಲಪ್ಪ, ಶರಣು, ವಾಸು ಗಣಪತಿ, ಮಲ್ಲಿಗೆ, ಸುಬ್ಬಯ್ಯ, ಮದ್ರೀರ ವಿಶು, ಕಿರಣ್, ಮುಕ್ಕಾಟೀರ ದಾದ ಬೋಪಯ್ಯ, ತಾತೀರ ಕಿರಣ್, ಹಾಗೂ ಇನ್ನಿತರರು ಇದ್ದರು. ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಆರ್‌ಎಫ್‌ಓ, ಬಿ.ಎಂ. ಶಂಕರ್ ಅವರು ಅರಣ್ಯ ಇಲಾಖೆ ಮತ್ತು ಆರ್‌ಆರ್‌ಟಿ ಸಿಬ್ಬಂದಿಗಳು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಮಾಡುತ್ತಿದ್ದಾರೆ. ಕಾಡಾನೆಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.