ಮಡಿಕೇರಿ, ಆ. ೩೧: ನಕಲಿ ಕೋವಿ ತಯಾರಿಕೆ ಹಾಗೂ ಮಾರಾಟ ಮಾಡುತ್ತಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಭಾಗಮಂಡಲ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಅಕ್ರಮವಾಗಿ ಕೋವಿ ತಯಾರಿಕೆ ಮಾಡುತ್ತಿರುವ ಕೇರಳದ ಇಡುಕ್ಕಿ ಜಿಲ್ಲೆಯ ಸುರೇಶ್ ಎಂಬಾತತನ್ನು ಇತರ ವ್ಯಾಪಾರಿಗಳಿಗೆ ಪರಿಚಯ ಮಾಡಿಕೊಟ್ಟ ವ್ಯಕ್ತಿಯೋರ್ವನ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಕರಿಕೆ ಗ್ರಾಮ ನಿವಾಸಿ ಪ್ರಭಾಕರ್ ಎಂಬಾತನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ನಕಲಿ ಬಂದೂಕು ತಯಾರಿ ಮಾಡುತ್ತಿರುವ ಸುರೇಶ್‌ನನ್ನು ಗಿರಾಕಿಗಳಿಗೆ ಪರಿಚಯಿಸಿ ವ್ಯಾಪಾರ ಕುದುರಿಸುವ ಕಾಯಕದಲ್ಲಿ ಪ್ರಭಾಕರ್ ಹಾಗೂ ಬಾಲಕೃಷ್ಣ ಎಂಬವರುಗಳು ತೊಡಗಿಕೊಂಡಿದ್ದರು. ಈ ಬಗ್ಗೆ ಸುಳಿವರಿತ ಹಿನ್ನೆಲೆಯಲ್ಲಿ ಪೊಲೀಸರು ಈರ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ಸಂದರ್ಭ ಕರಿಕೆ ಬಳಿಯ ಎಳ್ಳುಕೊಚ್ಚಿಯಲ್ಲಿ ಕೆಲವರಿಗೆ ಕೋವಿ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಪ್ರಭಾಕರ ಎಂಬಾತನ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ.