ಪೊನ್ನಂಪೇಟೆ, ಆ. ೩೧: ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ಹೆಚ್ಚುವರಿ ಪ್ರಭಾರ ಮುಖ್ಯ ಅಧಿಕಾರಿಯಾಗಿ ಚಂದ್ರಕುಮಾರ್ ತಾ. ೩೦ ರಂದು ಅಧಿಕಾರ ವಹಿಸಿಕೊಂಡರು. ಪೊನ್ನಂಪೇಟೆ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಕೆ.ಸಿ. ಅಪ್ಪಣ್ಣ ಚಂದ್ರಕುಮಾರ್ ಅವರಿಗೆ ಅಧಿಕಾರ ವಹಿಸಿಕೊಟ್ಟರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಉಪಾಧ್ಯಕ್ಷ ಆಲಿರ ರಶೀದ್ ಇದ್ದರು.