ವೀರಾಜಪೇಟೆ, ಆ. ೩೧: ಮಾನವ ಜೀವನದ ಸುಭಿಕ್ಷೆ ಮತ್ತು ಮನೋಹರತೆಯು ಬದುಕಿನಲ್ಲಿ ನೈತಿಕ ಕಟ್ಟಳೆÀಗಳನ್ನು ಪಾಲಿಸುವುದರಿಂದ ಮಾತ್ರ ಸಾಧ್ಯ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ಪಿ.ಎ. ಝೈನಬಾ ರೆಹೆಮಾನ್ ತಿಳಿಸಿದ್ದಾರೆ.

ವೀರಾಜಪೇಟೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈ ವಿಷಯವನ್ನು ತಿಳಿಸಿದರು. "ಪ್ರಸಕ್ತ ಕಾಲದಲ್ಲಿ ನಮ್ಮ ಸಮಾಜವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು ಬಹಳ ಕಳವಳಕಾರಿಯಾಗಿವೆ. ಸಮಾಜದಲ್ಲಿ ಹೆಚ್ಚುತ್ತಿರುವ ನಗ್ನತೆ, ಜೂಜು, ಮದ್ಯಪಾನ, ಮಾದಕ ವ್ಯಸನ, ವಿವಾಹೇತರ ಸಂಬAಧಗಳು, ಸಲಿಂಗಕಾಮ ಹಾಗೂ ವೇಶ್ಯಾವಾಟಿಕೆಗಳಂತಹ ಕೆಡುಕುಗಳು ಒಂದು ಕಡೆ ಸಮಾಜದ ಹದಗೆಡುತ್ತಿರುವ ನೈತಿಕ ಮಟ್ಟಕ್ಕೆ ಕೈಗನ್ನಡಿಯಾಗಿದ್ದರೆ ಇನ್ನೊಂದೆಡೆ ನೈತಿಕ, ಸಾಮಾಜಿಕ ಮತ್ತು ಜೈವಿಕ ಮಟ್ಟದಲ್ಲಿ ಅಸಂಖ್ಯಾತ ಸಮಸ್ಯೆಗಳನ್ನು ಹುಟ್ಟುಹಾಕಿವೆ. ಬಂಡವಾಳಶಾಹಿ ಶಕ್ತಿಗಳ ಯೋಜನೆಗಳು ಸ್ವಾತಂತ್ರö್ಯದ ಜಾಡಿನಲ್ಲಿ ಆಧುನಿಕ ಯುಗವನ್ನು ದಾರಿ ತಪ್ಪಿಸಿದೆ. ಮೊಬೈಲ್ ಫೋನ್, ಇಂಟರ್‌ನೆಟ್, ಫೇಸ್‌ಬುಕ್, ಇನ್ಸಾ÷್ಟಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಕಟ್ಟಕಡೆಯ ಮನೆಯಲ್ಲಿ ಅಶ್ಲೀಲತೆಯು ಸಾಮಾನ್ಯವಾಗಿ ಬಿಟ್ಟಿದೆ. ಯುವ ಜನಾಂಗವು ಇಂದು ದಾರಿ ತಪ್ಪುತ್ತಿದ್ದಾರೆ. ಕುಟುಂಬಗಳು ಛಿದ್ರಗೊಳ್ಳುತ್ತಿವೆ. ಸಮಾಜದ ಸ್ಥಿತಿಯು ಅತ್ಯಂತ ಚಿಂತಾಜನಕವಾಗಿ ಬಿಟ್ಟಿದೆ" ಎಂದರು.

ಈ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಲಿಕ್ಕಾಗಿ ಮತ್ತು ಪ್ರಸಕ್ತ ಸ್ಥಿತಿಯಲ್ಲಿ ಸುಧಾರಣೆ ತರಲಿಕ್ಕಾಗಿ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗವು ದೇಶದಾದ್ಯಂತ ಸೆಪ್ಟೆಂಬರ್ ೧ರಿಂದ (ಇಂದಿನಿAದ) ೩೦ರವರೆಗೆ ನೈತಿಕತೆಯೇ ಸ್ವಾತಂತ್ರö್ಯ ಎಂಬ ಧ್ಯೇಯವಾಕ್ಯದಡಿ ಒಂದು ತಿಂಗಳ ಅಭಿಯಾನವನ್ನು ನಡೆಸುವ ತೀರ್ಮಾನವನ್ನು ಕೈಗೊಂಡಿದೆ. ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಈ ಅಭಿಯಾನದ ಮೂಲಕ ಮಾನವ ಜೀವನದ ಸುಭಿಕ್ಷೆ ಮತ್ತು ಮನೋಹರತೆಯು ನೈತಿಕ ಕಟ್ಟಳೆಗಳನ್ನು ಪಾಲಿಸುವುದರಿಂದ ಮಾತ್ರ ಸಾಧ್ಯ ಎಂಬ ಪ್ರಜ್ಞೆಯನ್ನು ಬೆಳೆಸುವ ಸಂಕಲ್ಪವನ್ನು ತೊಟ್ಟಿದೆ ಎಂದು ಹೇಳಿದರು.

ಸ್ಥಾನೀಯ ಕಾರ್ಯದರ್ಶಿ ಸಮೀರಾ ರಾಝಿಕ್ ಮಾತನಾಡಿ, "ದೇಶವಾಸಿಗಳಾದ ನಾವು ಇತ್ತೀಚೆಗೆ ಸ್ವಾತಂತ್ರö್ಯದ ೭೮ನೇ ವಾರ್ಷಿಕೋತ್ಸವವನ್ನು ಬಹಳ ಸಂಭ್ರಮದಿAದ ಆಚರಿಸಿದ್ದೇವೆ. ಆದರೆ ನಮ್ಮ ಸಾಮಾಜಿಕ ಸ್ಥಿತಿ ಎಷ್ಟರ ಮಟ್ಟಿಗೆ ಈ ಸಂಭ್ರಮಕ್ಕೆ ಅನುಯೋಜ್ಯವಾಗಿದೆ ಎಂಬುದರ ಬಗ್ಗೆ ಅವಲೋಕನ ನಡೆಸಬೇಕಾಗಿದೆ. ಸ್ವಾತಂತ್ರö್ಯದಿAದ ಯಾರಿಗೂ ಹಾನಿಯಾಗಬಾರದು ಎಂಬುದು ಮಾನವ ಹಕ್ಕುಗಳ ಘೋಷಣೆಯ ವ್ಯಾಖ್ಯಾನದಲ್ಲಿ ಹೇಳಲಾಗಿದೆ. ಆದರೆ ಇಂದು ನಮ್ಮ ಸಾಮಾಜಿಕ ಸ್ಥಿತಿಯ ಕಡೆಗೆ ಕಣ್ಣೋಡಿಸಿದರೆ ಸಮೂಹದಲ್ಲಿ ಈ ಅರ್ಥದಲ್ಲಿ ಸ್ವಾತಂತ್ರö್ಯದ ಕಲ್ಪನೆ ಕಾಣಸಿಗುತ್ತಿದೆಯೇ ಎಂಬುದು ಪ್ರಶ್ನಾರ್ಹವಾಗಿದೆ. ಸಾಮ್ರಾಜ್ಯಶಾಹಿ ಶಕ್ತಿಗಳು ಸಾಂಸ್ಕೃತಿಕ ಮತ್ತು ಆರ್ಥಿಕ ನೆಲೆಯಲ್ಲಿ ಮಾನವರ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಆರ್ಥಿಕ ಗುಲಾಮರನ್ನಾಗಿ ಮಾಡಿದೆ. ಜೀವನದ ಮಟ್ಟ, ಸಮಾನತೆ, ಗ್ಲಾಮರ್‌ಗಳ ಹೆಸರಿನಲ್ಲಿ ಗ್ರಾಹಕತೆಯ ಬಲೆಯಲ್ಲಿ ಬೀಳಿಸಿ ಅವರನ್ನು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಗುಲಾಮರನ್ನಾಗಿ ಮಾಡಲಾಗಿದೆ" ಎಂದರು.

ಅಭಿಯಾನದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಧರ್ಮದಲ್ಲಿ ನೈತಿಕತೆಯ ಕಲ್ಪನೆ ಎಂಬ ಶೀರ್ಷಿಕೆಯಲ್ಲಿ ವಿಚಾರಗೋಷ್ಠಿ, ಮಹಿಳಾ ಸಮಾವೇಶ, ಸತ್ಕಾರಕೂಟ, ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ, ವೈಯಕ್ತಿಕ ಭೇಟಿ, ಸಮಾಜದ ಪ್ರಮುಖ ವ್ಯಕ್ತಿಗಳ ಸಂದರ್ಶನ, ಲೇಖನ-ಭಾಷಣ ಸ್ಪರ್ಧೆಗಳು, ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಗುವುದು. ಅಭಿಯಾನದ ಅಧಿಕೃತ ಉದ್ಘಾಟನೆ ಸೆಪ್ಟೆಂಬರ್ ೧ರ ಭಾನುವಾರ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಡಾ|| ಮುಹಮ್ಮದ್ ಸಾದ್ ಬೆಳಗಾಮಿ ಯವರು ಬೆಂಗಳೂರಿನಲ್ಲಿ ನೆರವೇರಿಸಲಿದ್ದಾರೆ" ಎಂದು ಮಾಹಿತಿ ನೀಡಿದರು. ಸ್ಥಾನೀಯ ಶಾಖೆಯ ಕಾರ್ಯಕರ್ತೆಯರುಗಳಾದ ಮುಬೀನಾ ನಾಸಿರ್ ಹಾಗೂ ಜಿ.ಐ.ಓ. ಸಂಘಟನೆಯ ಫಿದಾ ಸ್ವಾಲಿಹ ಹಾಜರಿದ್ದರು.