ಗೋಣಿಕೊಪ್ಪಲು, ಆ. ೩೧: ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರನ್ನು ಭೇಟಿ ಮಾಡಲಾಯಿತು. ರೈತರ ಆರ್‌ಟಿಸಿಯಲ್ಲಿ ಪಿ೧ಪಿ೨ ಎಂಬ ತಾತ್ಕಾಲಿಕ ವ್ಯವಸ್ಥೆಯಿಂದ ಪ್ರಸ್ತುತ ಸರ್ಕಾರದ ನೂತನ ಆದೇಶಗಳಿಂದ ರೈತರಿಗೆ ರಾಷ್ಟಿçÃಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಸಾಲ ಪಡೆಯಲು ತೀವ್ರ ಅಡಚಣೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು. ನೂತನ ಆರ್‌ಟಿಸಿಗಳನ್ನು ಆದಷ್ಟು ಬೇಗನೆ ನೀಡುವಂತಾಗಬೇಕು.

ಆರ್‌ಟಿಸಿಯಲ್ಲಿ ಸಂಬAಧಪಡದ ಪಟ್ಟೆದಾರರ ಹೆಸರುಗಳನ್ನು ಕೈ ಬಿಡುವ ಕೆಲಸ ಕೈಗೆತ್ತಿಕೊಳ್ಳಬೇಕು ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ನಷ್ಟಕ್ಕೊಳಗಾದ ರೈತರ ಪರಿಹಾರ ಅರ್ಜಿಗಳನ್ನು ಸಂಬAಧಪಟ್ಟ ಇಲಾಖೆವಾರು ಸ್ವೀಕರಿಸಲು ಅವಕಾಶ ಕಲ್ಪಿಸಬೇಕು. ಸೇರಿದಂತೆ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಮನು ಸೋಮಯ್ಯ ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ನಿಯೋಗದಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಉಪಾಧ್ಯಕ್ಷ ಶಂಕರಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಕಾನೂನು ಸಲಹೆಗಾರ ವಕೀಲ ಹೇಮಚಂದ್ರ, ಹುದಿಕೇರಿಯ ಹಿರಿಯ ಮುಖಂಡ ಕಾಳಯ್ಯ, ಪೊನ್ನಂಪೇಟೆ ನಗರ ಅಧ್ಯಕ್ಷ ಚೊಟ್ಟೆಕಾಳಪಂಡ ಮನು ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.