ವೀರಾಜಪೇಟೆ, ಆ. ೩೧: ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆ, ವೀರಾಜಪೇಟೆ ಪುರಸಭೆ, ಸೋಮವಾರಪೇಟೆ, ಕುಶಾಲನಗರ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಘೋಷಣೆ ಆದ ಬೆನ್ನಲ್ಲೇ ಮೀಸಲಾತಿ ಹಾಗೂ ಇನ್ನಿತರ ಗೊಂದಲಗಳಿAದ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರಗಳಿಗೆ ತಾಂತ್ರಿಕ ಕಾರಣಗಳಿಂದ ಚುನಾವಣೆ ಮುಂದೂಡಲ್ಪಟ್ಟಿದೆ. ಹಿಂದಿನ ಅಧ್ಯಕ್ಷರ ಆಡಳಿತ ಅವಧಿ ತಾ. ೦೩.೦೫.೨೦೨೩ರಂದು ಕೊನೆಗೊಂಡ ಬಳಿಕ ಪುರಸಭೆ ಆಡಳಿತಾಧಿಕಾರಿಗಳ ಆಡಳಿತದಲ್ಲಿದೆ. ವೀರಾಜಪೇಟೆ ಪುರಸಭೆಯಾಗಿ ಮೇಲ್ದರ್ಜೆಯಾಗಿ ಮಾರ್ಪಟ್ಟಿದ್ದರೂ ಕೂಡ ಕಳೆದ ಬಾರಿ ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ಚುನಾಯಿತ ಸದಸ್ಯರಿಗೆ ಮಾತ್ರ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆ ನಡೆಯಲಿದೆ.

ವೀರಾಜಪೇಟೆ ಪುರಸಭೆಗೆ ಚುನಾವಣೆ ನಡೆಸಲು ಯಾವುದೇ ಅಡ್ಡಿಆತಂಕಗಳು ಇಲ್ಲದಿದ್ದರೂ ಕೂಡ ಅಧಿಕಾರಿಗಳು ಚುನಾವಣಾ ದಿನಾಂಕ ಗೊತ್ತುಪಡಿಸುವುದನ್ನು ಮುಂದೂಡುತ್ತಿದ್ದಾರೆ. ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪ್ರಕಟಗೊಂಡಿದ್ದು ಅಧ್ಯಕ್ಷ ಸ್ಥಾನ ಬಿಸಿಬಿ, ಮಹಿಳೆ ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ) ಮಹಿಳೆಗೆ ನಿಗದಿಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ಇದ್ದರೂ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಬಿ ಮಹಿಳೆ ಎಂದು ನಿಗದಿಯಾಗಿರುವುದರಿಂದ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುವ ಸಾಧ್ಯತೆ ಹೆಚ್ಚಿದೆ.

ಕಾಂಗ್ರೆಸ್ ಪಕ್ಷದಲ್ಲಿ ಬಿ.ಸಿ.ಬಿ ಮೀಸಲಾತಿಯಲ್ಲಿ ಸ್ಪರ್ಧಿಸಲು ಮಹಿಳೆ ಇದ್ದರು ಕೂಡ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡುತ್ತಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಕಷ್ಟ ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ. ಏತನ್ಮದ್ಯೆ ಕೆಲವು ಸದಸ್ಯರುಗಳು ಸರ್ಕಾರ ನಿಗದಿಪಡಿಸಿದ ಬಿ.ಸಿ.ಬಿ ಮೀಸಲಾತಿ ಕೈತಪ್ಪಿ ಹೋಗಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್‌ನ ೧೦ ಸದಸ್ಯರನ್ನು ಪ್ರತಿವಾದಿಗಳನ್ನಾಗಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ.

೨೦೧೯ರ ಅಕ್ಟೋಬರ್ ೨೮ ರಂದು ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷಗಳಿಗೂ ಸ್ಪಷ್ಟ ಬಹುಮತ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ಸಂದÀರ್ಭ ಸರ್ಕಾರ ನಿಗದಿಪಡಿಸಿದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಶ್ನಿಸಿ ವಿವಿಧ ಸಂಘ ಸಂಸ್ಥೆಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಕಾರಣ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಿತ್ತು. ೨೦೨೧ರಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ಕಾರಣ ಸರ್ಕಾರ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಎಂದು ನಿಗದಿ ಮಾಡಿತ್ತು.

ಪುರಸಭೆಯಲ್ಲಿ ಒಟ್ಟು ೨೩ ಸದಸ್ಯರಿದ್ದಾರೆ. ಅದರಲ್ಲಿ ೧೮ ಚುನಾಯಿತ ಸದಸ್ಯರಾಗಿದ್ದಾರೆ. ಉಳಿದ ೫ ಸದಸ್ಯರು ಸರ್ಕಾರದಿಂದ ನಾವ ನಿರ್ದೇಶಿತಗೊಂಡಿದ್ದಾರೆ. ೧೮ ಸದಸ್ಯರು ಮಾತ್ರ ಮತ ಚಲಾವಣೆಯ ಹಕ್ಕು ಪಡೆದುಕೊಂಡಿದ್ದಾರೆ. ಸಂಸದರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಕೂಡ ಮತದಾನದ ಹಕ್ಕು ಪಡೆದುಕೊಂಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ೮, ಕಾಂಗ್ರೆಸ್ ೬, ಜೆಡಿಎಸ್ ೧, ಪಕ್ಷೇತರರು ೩ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಆಯ್ಕೆಯಾದ ಮತೀನ್, ಪಕ್ಷೇತರರಾಗಿ ಆಯ್ಕೆಯಾದ ಮನೆಯಪಂಡ ದೇಚಮ್ಮ ಕಾಳಪ್ಪ, ರಜನಿಕಾಂತ್, ಜಲೀಲ್ ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.

ಅಧ್ಯಕ್ಷ ಸ್ಥಾನ ಬಿ.ಸಿ.ಬಿ ಮೀಸಲಾಗಿದ್ದರೂ ಪಕ್ಷೇತರರಾಗಿ ಆಯ್ಕೆಯಾಗಿ ನಂತರ ಕಳೆದ ಒಂದು ವರ್ಷದಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಮಹಿಳಾ ಸದಸ್ಯರೊಬ್ಬರು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದ್ದರೂ ತೆರೆಮರೆಯ ಕಸರತ್ತು ಜೋರಾಗಿಯೇ ನಡೆಯುತ್ತಿದೆ. ಸಂಖ್ಯಾಬಲ ಇಲ್ಲದ ಬಿಜೆಪಿಯಲ್ಲಿ ಮೂರು ಮಹಿಳಾ ಸದಸ್ಯರಿದ್ದಾರೆ. ಓರ್ವ ಸದಸ್ಯೆಯ ಪತಿ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿರುವುದರಿಂದ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಇಬ್ಬರು ಸದಸ್ಯರಲ್ಲಿ ಪೈಪೋಟಿ ಏರ್ಪಟ್ಟಿದೆ. ಪಕ್ಷದ ವರಿಷ್ಠರ ತೀರ್ಮಾನ ಅಂತಿಮವಾಗಲಿದೆ.

ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆ ಬಂದಿರುವ ಕಾರಣ ಕಾಂಗ್ರೆಸ್ ಪೂರ್ಣ ಬಹುಮತಗೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಫಸಿಹಾ ತಬಸಮ್ ಉಪಾಧ್ಯಕ್ಷರಾಗಿ ಆಯ್ಕೆ ನಿಚ್ಚಳವಾಗಿದೆ.

೨೩.೦೬.೨೦೨೨ ರಲ್ಲಿ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮಾರ್ಪಟ್ಟು ಎಲ್ಲಾ ವ್ಯವಹಾರಗಳು ಪುರಸಭೆ ಎಂಬ ನಾಮಫಲಕದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜನಸಂಖ್ಯ್ಯೆ ಆಧಾರದ ಮೇರೆ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮಾರ್ಪಾಡು ಆಗಬೇಕಾದರೆ ಸುತ್ತಮುತ್ತಲ ಆರ್ಜಿ, ಬೇಟೋಳಿ, ಚಂಬೆಬೆಳ್ಳೂರು, ಬಿಟ್ಟಂಗಾಲ ಗ್ರಾಮ ಪಂಚಾಯಿತಿಗಳ ಕೆಲವು ಗ್ರಾಮಗಳನ್ನು ಸೇರ್ಪಡೆಗೊಳಿಸಿ ಪುರಸಭೆ ಮಾಡಲಾಗಿದೆ. ವಿಪರ್ಯಾಸ ಎಂದರೆ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಬಂದಿರುವುದು ಪಟ್ಟಣ ಪಂಚಾಯಿತಿಗೆ, ಪುರಸಭೆಗಲ್ಲ. ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆದರೆ ಪುರಸಭೆಗೆ ಸೇರ್ಪಡೆಗೊಂಡಿರುವ ಪಕ್ಕದ ಗ್ರಾಮ ಪಂಚಾಯಿತಿಗಳ ಗ್ರಾಮಗಳ ಅಭಿವೃದ್ಧಿ ಕಾರ್ಯಗಳು ಹೇಗೆ ಎಂಬುದು ಪ್ರಶ್ನೆಯಾಗಿದೆ.

ಅಧ್ಯಕ್ಷ ಉಪಾಧ್ಯಕ್ಷರ ನೇಮಕಾತಿ ನಡೆಯದ ಕಾರಣ ಚುನಾವಣೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಅತಂತ್ರವಾಗಿದ್ದಾರೆ. ಪ್ರತಿನಿಧಿಗಳ ಆಡಳಿತ ಮಂಡಳಿ ಇಲ್ಲದ ಕಾರಣ ಪುಸಭೆಯ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ಮುಂದಿನ ತಿಂಗಳು ಸೆಪ್ಟಂಬರ್‌ನಲ್ಲಿ ಗೌರಿ ಗಣೇಶ ಉತ್ಸವ ಇರುವುದರಿಂದ ಪಟ್ಟಣದ ೨೨ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಶೋಭಾಯಾತ್ರೆಯ ಮೂಲಕ ಸಾಮೂಹಿಕ ವಿಸರ್ಜನೆ ಕಾರ್ಯ ನಡೆಯಲಿದೆ. ಶೋಭಾಯಾತ್ರೆ ಚಲಿಸುವ ರಸ್ತೆಗಳು, ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಗೌರಿಕೆರೆ ಅಭಿವೃದ್ಧಿ ಕಾಣಬೇಕಿದೆ. ಇವೆಲ್ಲವನ್ನು ಯಾರು ನಿರ್ವಹಿಸುತ್ತಾರೆ ಎಂಬುದು ಪಟ್ಟಣದ ಮತದಾರರ ಪ್ರಶ್ನೆಯಾಗಿದೆ.

ಚುನಾಯಿತ ಸದಸ್ಯರುಗಳು: ಆಶಾ ಸುಬ್ಬಯ್ಯ, ಬಿ.ಕೆ. ಅನಿತಾ, ಹೆಚ್.ಎನ್. ಪೂರ್ಣಿಮಾ, ಸುಭಾಷ್ ಮಹಾದೇವ್, ಟಿ.ಕೆ. ಯಶೋಧ, ಟಿ.ಎಂ. ಸುನೀತಾ, ಟಿ.ಆರ್. ಸುಶ್ಮಿತಾ, ವಿನಾಂಕ್ ಕುಟ್ಟಪ್ಪ (ಬಿಜೆಪಿ), ಪಟ್ಟಡ ರಂಜಿ ಪೂಣಚ್ಚ, ಸಿ.ಕೆ. ಪೃಥ್ವಿನಾಥ್, ಅಗಸ್ಟಿನ್ ಬೆನ್ನಿ, ಡಿ.ಪಿ. ರಾಜೇಶ್, ಮಹಮದ್ ರಾಫಿ, ತಬಸಮ್, ಎಸ್. ಎಚ್. ಮತೀನ್(ಕಾಂಗ್ರೆಸ್), ದೇಚಮ್ಮ ಕಾಳಪ್ಪ, ಜಲೀಲ್, ರಜನಿಕಾಂತ್(ಪಕ್ಷೇತರರು). ಶಬರೀಶ್, ಸಿ.ಬಿ. ರವಿ, ಜಿ.ಜಿ. ಮೋಹನ್, ದಿನೇಶ್ ನಂಬಿಯಾರ್, ಶಾಹುಲ್ ಹಮೀದ್ (ನಾಮ ನಿರ್ದೇಶಿತ ಸದಸ್ಯರು.)

- ಪಳೆಯಂಡ ಪಾರ್ಥ ಚಿಣ್ಣಪ್ಪ