ನಾಪೋಕ್ಲು, ಆ. ೩೧: ಬಲಮುರಿಯ ಮಹಾದೇವ ಸ್ಪೋರ್ಟ್ಸ್ ಕ್ಲಬ್‌ನ ನೂತನ ಕಚೇರಿ ಉದ್ಘಾಟನೆ ಶುಕ್ರವಾರ ಬಲಮುರಿಯಲ್ಲಿ ನಡೆಯಿತು.

ಮಹಾದೇವ ಸ್ಪೋರ್ಟ್ಸ್ ಕ್ಲಬ್ ಗೆ ೭೨ ವರ್ಷಗಳ ಇತಿಹಾಸವಿದ್ದು, ಬಲಮುರಿ ದವಸ ಭಂಡಾರ ಕಟ್ಟಡದ ಮಹಡಿಯಲ್ಲಿ ಕ್ಲಬ್‌ನ ನೂತನ ಕಚೇರಿಯನ್ನು ಪಾರಣೆ ಗ್ರಾಮ ಪಂಚಾಯತ್ ಸದಸ್ಯರಾದ ಬೊಳ್ಳಚೆಟ್ಟಿರ ಪ್ರಕಾಶ್ ಕಾಳಪ್ಪ ಉದ್ಘಾಟಿಸಿ ಶುಭ ಹಾರೈಸಿದರು. ಈ ಪ್ರಯುಕ್ತ ಬಲಮುರಿ ಈಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಮಹಾಬಲೇಶ್ವರ ಭಟ್ ಅವರ ನೇತೃತ್ವದಲ್ಲಿ ಗಣಹೋಮ ಪೂಜಾ ವಿಧ ವಿಧಾನವನ್ನು ಏರ್ಪಡಿಸಲಾಯಿತು.

ಕ್ಲಬ್‌ನ ಅಧ್ಯಕ್ಷರಾದ ತೊತ್ತಿಯಂಡ ಬನ್ಸಿ ಚಿಣ್ಣಪ್ಪ, ಉಪಾಧ್ಯಕ್ಷರಾದ ಗುಡ್ಡೇರ ಲಕ್ಷು, ಕಾರ್ಯದರ್ಶಿ ಬೊಳ್ಳಚೆಟ್ಟಿರ ಜಯಂತಿ, ಸಹಕಾರ್ಯದರ್ಶಿ ಬೊಳ್ಳಚೆಟ್ಟಿರ ಅಚ್ಚಪ್ಪ, ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ಬಿದ್ದಂಡ ಸಂದೀಪ್ ನಂಜಪ್ಪ, ಪಾರಣೆ ವಿ.ಎಸ್.ಎಸ್.ಎನ್. ಸದಸ್ಯೆ ಮೇಡತನ ರಶ್ಮಿ ಸೇರಿದಂತೆ ಊರಿನ ಹಿರಿಯರು ಮತ್ತು ಕ್ಲಬ್‌ನ ಸದಸ್ಯರು ಭಾಗವಹಿಸಿದ್ದರು.