*ಗೋಣಿಕೊಪ್ಪ, ಆ. ೩೧: ಗೋಣಿಕೊಪ್ಪಲು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಆಯೋಜಿಸಲಾಯಿತು. ವಿದ್ಯಾರ್ಥಿಗಳು ಛದ್ಮವೇಷ, ಭಾಷಣ, ಕ್ಲೆ ಮಾಡ್ಲಿಂಗ್, ಭಕ್ತಿಗೀತೆ, ರಾಷ್ಟ್ರ ಗೀತೆಗಳೊಂದಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಮುಂದಿನ ಹಂತದಲ್ಲಿ ನಡೆಯುವ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಗೊಂಡರು. ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್, ಮತ್ತು ಸಹ ಶಿಕ್ಷಕರು ಇದ್ದರು.