ವೀರಾಜಪೇಟೆ, ಆ. ೩೧: ಎರಡು ಪ್ರತ್ಯೇಕ ಕಳವು ಪ್ರಕರಣಗಳಿಗೆ ಸಂಬAಧಿಸಿ ದಂತೆ ವೀರಾಜಪೇಟೆ ಪೊಲೀಸರು ಒಟ್ಟು ೭ ಮಂದಿ ಆರೋಪಿಗಳನ್ನು ಬಂಧಿಸಿ ದ್ದಾರೆ ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಎಸ್ಪಿ ಕೆ. ರಾಮರಾಜನ್ ಮಾಹಿತಿ ನೀಡಿದರು.

೧೧ ಪ್ರಕರಣಗಳ ಪತ್ತೆ

ಬೇತ್ರಿ ಗ್ರಾಮದ ನಾಸರ್ ಕೂರನ್ ಎಂಬವರ ಸೂಪರ್ ಮಾರ್ಕೆಟ್‌ನಲ್ಲಿ

ತಾ. ೨೮ರಂದು ರಾತ್ರಿ ಬೀಗ ಮುರಿದು ಒಳನುಗ್ಗಿ ಕ್ಯಾಶ್ ಬಾಕ್ಸ್ನಿಂದ ರೂ. ೨೫ ಸಾವಿರ ನಗದು ಮತ್ತು ಸಿಗರೇಟ್ ಪ್ಯಾಕೆಟ್‌ಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವೀರಾಜಪೇಟೆ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ಆರೋಪಿಗಳಾದ ಕೇರಳ ರಾಜ್ಯದ ಕಣ್ಣನೂರು ಜಿಲ್ಲೆ ಇರಿಟ್ಟಿ ತಾಲೂಕಿನ ಉಳಿಕಲ್ ಮಂಟಪಪರAಬು ನಿವಾಸಿ ಮೀನು ವ್ಯಾಪಾರಿ ಟಿ.ಎಂ. ಸಲೀಂ (೪೨), ಸೋಮವಾರಪೇಟೆ ತಾಲೂಕು ಚೌಡ್ಲು ಗ್ರಾಮದ ಗಾಂಧಿನಗರ ನಿವಾಸಿ ಕೂಲಿಕಾರ್ಮಿಕ ಎಂ.ಎ. ಸಂಜಯ್ ಕುಮಾರ್ ಅಲಿಯಾಸ್ ಸಂಜು (೩೦) ಎಂಬವರುಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ೧೧ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.

ಬೇತ್ರಿ ಅಂಗಡಿ ಮತ್ತು ಬಿಟ್ಟಂಗಾಲ ದೇವಸ್ಥಾನದ ಹುಂಡಿ ಕಳ್ಳತನದ ೨ ಪ್ರಕರಣ, ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೧ ಪ್ರಕರಣ, ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಪುಲಿಕಿಮಾಡು ದರ್ಗಾ ಭಂಡಾರ ಕಳ್ಳತನ ಪ್ರಕರಣ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮೂರ್ನಾಡಿನ ಸತೀಶ್ ಎಂಬವರ ಮನೆ ಕಳ್ಳತನಕ್ಕೆ ಪ್ರಯತ್ನ ಪ್ರಕರಣ, ಮೈಸೂರು ನಗರದ ಅಶೋಕಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನದ ೨ ಪ್ರಕರಣಗಳು, ಕೇರಳ ರಾಜ್ಯದ ಇರಿಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ೩ ಕಳ್ಳತನ ಪ್ರಕರಣಗಳು, ಕೇರಳ ರಾಜ್ಯದ ಕೆಳಗಂ ಪೊಲೀಸ್ ಠಾಣೆಯಲ್ಲೂ ೧ ಪ್ರಕರಣ ಸೇರಿದಂತೆ ಒಟ್ಟು ೧೧ ಪ್ರಕರಣಗಳು ಬಯಲಾಗಿವೆ.

ಆರೋಪಿಗಳಿಂದ ಕಳ್ಳತನ ಮಾಡಿ ಕೃತ್ಯಕ್ಕೆ ಬಳಸುತ್ತಿದ್ದ ಸುಮಾರು ೧,೫೦,೦೦೦ ಬೆಲೆ ಬಾಳುವ ೩ ದ್ವಿಚಕ್ರ ವಾಹನಗಳು ಹಾಗೂ ೯೦೫೦ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಸಲೀಂ ಸುಮಾರು ೨೦ ವರ್ಷಗಳಿಂದ ಕೇರಳ ಮತ್ತು ಕರ್ನಾಟಕದ ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ. ಆಗಿಂಗಾಗ್ಗೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಕಳ್ಳತನ ಮಾಡುವುದನ್ನು ಮುಂದುವರೆಸಿದ್ದ. ಈತನಿಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳತನ ಪ್ರಕರಣದಲ್ಲಿ ೨ ವರ್ಷ ಶಿಕ್ಷೆಯಾಗಿದ್ದು, ವೀರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ ೧೦ ತಿಂಗಳು ಶಿಕ್ಷೆ ಅನುಭವಿಸಿದ್ದಾನೆ. ೨೦೨೨ರಲ್ಲಿ ವೀರಾಜಪೇಟೆ ನಗರದ ನಯಾರ ಪೆಟ್ರೋಲ್ ಬಂಕ್‌ನಲ್ಲಿ ಕಳ್ಳತನ ಮಾಡಿ ಜೈಲಿಗೆ ಹೋಗಿದ್ದು, ತಾ. ೧೮.೦೭.೨೦೨೨ರಂದು ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದು ತನ್ನ ಸಹಚರ ಸಂಜಯ್ ಕುಮಾರ್‌ನೊಂದಿಗೆ ಸೇರಿ ೧೧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮತ್ತೋರ್ವ ಆರೋಪಿ ಸಂಜಯ್ ಕುಮಾರ್, ೨೦೧೧ರಲ್ಲಿ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದು, ಅಲ್ಲಿ ಈತನಿಗೆ ಸಲೀಂ ಪರಿಚಯವಾಗಿದ್ದ. ಅಂದಿನಿAದ ಸೋಮವಾರಪೇಟೆ, ಕುಶಾಲನಗರ, ಮಡಿಕೇರಿ, ಹುಣಸೂರು, ಪಿರಿಯಾಪಟ್ಟಣ ಹಾಗೂ ಕೇರಳ ರಾಜ್ಯದಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಜಾಮೀನಿನ ಮೇಲೆ ಹೊರಬಂದು ಪದೇ ಪದೇ ಕಳ್ಳತನ ಮಾಡುತ್ತಿದ್ದ ಎಂದು ವಿವರಿಸಿದರು.

ಎಸ್.ಪಿ. ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್.ಪಿ. ಕೆ. ಸುಂದರ್ ರಾಜ್ ನಿರ್ದೇಶನದಂತೆ ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ವೀರಾಜಪೇಟೆ

(ಮೊದಲ ಪುಟದಿಂದ) ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ, ವೀರಾಜಪೇಟೆ ಗ್ರಾಮಾಂತರ ಠಾಣೆಯ ಪಿ.ಎಸ್.ಐ.ಗಳಾದ ಮಂಜುನಾಥ್ ಸಿ.ಸಿ. ಮತ್ತು ವಾಣಿಶ್ರೀ ಹಾಗೂ ಸಿಬ್ಬಂದಿ, ವೈಜ್ಞಾನಿಕ ತನಿಖಾ ಘಟಕದ ಪಿ.ಐ. ರಾಮಕೃಷ್ಣ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

ಐವರ ಬಂಧನ : ಮತ್ತೊಂದು ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೋಟಾರ್ ಸೈಕಲ್‌ಗಳನ್ನು ಕಳವು ಮಾಡಿ ನಂತರ ಅವುಗಳನ್ನು ಗಾಂಜಾ ವ್ಯವಹಾರಕ್ಕೆ ಬಳಕೆ ಮಾಡುತ್ತಿದ್ದ ಆರೋಪದಡಿ ವೀರಾಜಪೇಟೆಯ ಆರ್ಜಿ ಗ್ರಾಮದ ಪೆರುಂಬಾಡಿ ನಿವಾಸಿ ಚಾಲಕ ಕೆ.ಬಿ. ಶಫೀಕ್ ಅಲಿಯಾಸ್ ಯೇಪು (೨೬), ಚಿಕ್ಕಪೇಟೆಯ ವ್ಯಾಪಾರಿ ಮೊಹಮ್ಮದ್ ಆಸಿಂ (೨೧), ಪೆರುಂಬಾಡಿಯ ಚಾಲಕ ಕೆ.ಎಸ್. ಸಮೀರ್, ಕೂಲಿಕಾರ್ಮಿಕ ಟಿ.ಐ. ಮುನೀರ್ (೩೦), ೧ನೇ ಪೆರುಂಬಾಡಿಯ ಕೂಲಿಕಾರ್ಮಿಕ ಎಸ್. ದರ್ಶನ್ ನಾಯಕ್ (೨೫) ಇವರುಗಳನ್ನು ಬಂಧಿಸಲಾಗಿದೆ. ಬಂಧಿತರಿAದ ೧ ಕೆ.ಜಿ. ೮೩ ಗ್ರಾಂ ಗಾಂಜಾ, ೧೦ ಮೋಟಾರ್ ಸೈಕಲ್‌ಗಳು, ೨ ಮಾರುತಿ ಕಾರುಗಳು ಸೇರಿದಂತೆ ಒಟ್ಟು ೪ ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.

೧೦ ಮೋಟಾರ್ ಸೈಕಲ್ ಮತ್ತು ೨ ಮಾರುತಿ ಕಾರುಗಳ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ೨ ಪ್ರಕರಣ, ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ೨ ಹಾಗೂ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ೧ ಪ್ರಕರಣ ದಾಖ ಲಾಗಿದೆ ಎಂದು ಎಸ್ಪಿ ಮಾಹಿತಿಯಿತ್ತರು.

ಎಸ್.ಪಿ. ಕೆ. ರಾಮರಾಜನ್, ಎ.ಎಸ್ಪಿ. ಸುಂದರ್ ರಾಜ್ ನಿರ್ದೇಶನ ದಲ್ಲಿ ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ಮಾರ್ಗದರ್ಶನ ದಲ್ಲಿ ವೀರಾಜಪೇಟೆ ಸಿಪಿಐ ಶಿವರುದ್ರ, ಪಿ.ಎಸ್.ಐ.ಗಳಾದ ರವೀಂದ್ರ, ಪ್ರಮೋದ್ ಹಾಗೂ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- ಕಿಶೋರ್ ಶೆಟ್ಟಿ