ಮಡಿಕೇರಿ, ಆ. ೩೧: ರಾಷ್ಟಿçÃಯ ಕ್ರೀಡಾ ದಿನಾಚರಣೆಯ ದಿನವಾದ ಆ. ೨೯ರಂದು ಬೆಂಗಳೂರಿನಲ್ಲಿ ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ವತಿಯಿಂದ ಒಲಂಪಿಕ್ ಭವನದಲ್ಲಿ ರಾಷ್ಟಿçÃಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಹಲವು ಸಾಧಕ ಕ್ರೀಡಾಪಟುಗಳನ್ನು ಸನ್ಮಾನಿಸಲಾಗಿದ್ದು ಕೊಡಗು ಜಿಲ್ಲೆಯ ಹಲವು ಕ್ರೀಡಾಪಟುಗಳು ಸನ್ಮಾನ ಸ್ವೀಕರಿಸಿದರು.

ಅತಿಥಿಗಳಾಗಿದ್ದ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕ್ರೀಡಾಪಟುಗಳನ್ನು ಸನ್ಮಾನಿಸಿದರು. ಒಲಂಪಿಕ್ ಮತ್ತು ಅಂತರರಾಷ್ಟಿçÃಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿರುವ ರಾಜ್ಯದ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ಕೊಡಗಿನವರಾದ ಡಾ. ಎ.ಬಿ. ಸುಬ್ಬಯ್ಯ, ಸಿ.ಎಸ್. ಪೂಣಚ್ಚ, ಕೆ.ಕೆ. ಪೂಣಚ್ಚ, ಬಿ.ಸಿ. ಪೂಣಚ್ಚ, ವಿ.ಎಸ್. ವಿನಯ್, ನಿಕಿನ್ ತಿಮ್ಮಯ್ಯ, ಹೆಚ್.ಎಸ್. ಮೋಹಿತ್, ಸಿ.ಬಿ. ಪೂವಣ್ಣ, ಅರ್ಜುನ್ ಹಾಲಪ್ಪ ಅವರುಗಳು ಸನ್ಮಾನ ಸ್ವೀಕರಿಸಿದರು.

ಅಂಜು ಬಾಬಿ ಜಾರ್ಜ್, ಅನಿಲ್ ಅಲ್ಡಿçನ್ ಸೇರಿದಂತೆ ರಾಜ್ಯದ ಇತರ ಹಲವು ಕ್ರೀಡಾಪಟುಗಳು ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭ ಬೆಂಗಳೂರಿನಲ್ಲಿ ಕ್ರೀಡಾನಗರಿ ನಿರ್ಮಾಣದ ಕುರಿತಾಗಿ ಡಾ. ಜಿ. ಪರಮೇಶ್ವರ್ ಅವರು ಮಾಹಿತಿಯಿತ್ತರು. ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜ್, ಮತ್ತಿತರರು ಹಾಜರಿದ್ದರು.