sಆ. ೩೧: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ೨೦೨೩-೨೪ನೇ ವಾರ್ಷಿಕ ಮಹಾಸಭೆಯು ರೈತ ಸಹಕಾರ ಭವನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಎಂ.ಎನ್ ಕುಮಾರಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

೨೦೨೩-೨೪ ಸಾಲಿನಲ್ಲಿ ರೂ. ೮೯.೪೩ ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ರೂ. ೩೭.೪೩ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎನ್. ಕುಮಾರಪ್ಪ ತಿಳಿಸಿದರು. ಇಲ್ಲಿನ ರೈತ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ೭೩ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘವು ಕುಶಾಲನಗರ ಹಾಗೂ ಸುಂಟಿಕೊಪ್ಪ ಹೋಬಳಿ ಕಾರ್ಯವ್ಯಾಪ್ತಿ ಹೊಂದಿದೆ. ಸಂಘದಲ್ಲಿ ೧೯೭೨ ಬಿಡು ಸದಸ್ಯರನ್ನು ಹೊಂದಿದ್ದು, ರೂ.೧೮.೪೧ ಲಕ್ಷ ಪಾಲು ಬಂಡವಾಳ ಹೊಂದಿದೆ. ಸಂಘವು ವಿವಿಧ ವಾಣಿಜ್ಯ ಸಂಕೀರ್ಣಗಳ ಮೂಲಕ ಸದಸ್ಯರಿಗೆ ಹಾಗೂ ಸದಸ್ಯರೇತರಿಗೆ ನಿಯಂತ್ರಿತ ಮತ್ತು ಅನಿಯಂತ್ರಿತ ಸಾಮಗ್ರಿ, ಗ್ರಾಹಕ ವಸ್ತು, ಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣ, ಬಿತ್ತನೆ ಬೀಜ, ಕೋವಿತೋಟಾ, ಮೆಡಿಕಲ್ಸ್ ವಿಭಾಗ ಹಾಗೂ ಎರಡು ಸುಸಜ್ಜಿತ ಸಭಾಂಗಣಗಳ ಮೂಲಕ ವಾರ್ಷಿಕವಾಗಿ ವ್ಯಾಪಾರ ವಹಿವಾಟು ರೂ.೭.೮೮ ಕೋಟಿ, ಒಟ್ಟು ಠೇವಣಿ ರೂ.೭.೭೨ ಕೋಟಿ, ವಿವಿದ ಸಾಲ ನೀಡಿಕೆ ರೂ.೭.೧೫ ಕೋಟಿ, ಹೂಡಿಕೆ ರೂ.೪ ಕೋಟಿ, ನಿಧಿಗಳು ರೂ.೬.೮೪ ಕೋಟಿ ಒಳಗೊಂಡಿದೆ. ಸಂಘವು ಪ್ರಮುಖವಾಗಿ ವ್ಯಾಪಾರಾಭಿವೃದ್ಧಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕಿAಗ್ ವ್ಯವಹಾರದೊಂದಿಗೆ ೨ ಸುಸಜ್ಜಿತ ಸಭಾಂಗಣಗಳನ್ನು ಹೊಂದಿದ್ದು, ಸದಸ್ಯರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ರೈತ ಸಭಾಂಗಣಕ್ಕೆ ಹೊಂದಿಕೊAಡAತೆ ೪೨ ಕೆವಿ ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಸಂಘದ ಸದಸ್ಯರಿಗೆ ಅಭಿವೃದ್ಧಿ ಪೂರಕವಾದ ಯೋಜನೆ ಕೈಗೊಳ್ಳಲು ವಿಷಯಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ಸದಸ್ಯರು ಸುಧೀರ್ಘ ಚರ್ಚೆ ನಡೆಸಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಎಚ್.ಜೆ. ದೊಡ್ಡಯ್ಯ, ನಿರ್ದೇಶಕರಾದ ಕೆ.ಎಂ. ಪ್ರಸನ್ನ, ಎ.ಪಿ. ನೀಲಮ್ಮ, ಆರ್.ಕೆ. ಚಂದ್ರು, ಕೆ.ಎಸ್. ರತೀಶ್, ಎಚ್.ಟಿ. ಮೋಹನ್, ಪಿಸಿ.ಪಿ. ತಿಲಕ್ ಕುಮಾರ್, ಎಚ್.ಟಿ. ನಾಗೇಶ್, ಸಿ.ಜೆ. ಲತಾ, ಮೊಹಮ್ಮದ್ ಸಾಲೇಹ್, ಸಿ.ಎನ್. ಲೋಕೇಶ್, ಕೆಡಿಸಿಸಿ ಬ್ಯಾಂಕ್‌ನ ಪ್ರತಿನಿಧಿ ಜಲಜಾ ಶೇಖರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ. ಜಗದೀಶ್ ಪಾಲ್ಗೊಂಡಿದ್ದರು. ಈ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದರು. ತೊರೆನೂರು ಸರ್ಕಾರಿ ಪ್ರೌಢಶಾಲೆಗೆ ಟ್ಯಾಬ್ ವಿತರಿಸಿದರು. ಸಂಘದ ನಿರ್ದೇಶಕ ಲೋಕೇಶ್ ಸ್ವಾಗತಿಸಿ, ಕಾರ್ಯದರ್ಶಿ ಜಗದೀಶ್ ವಂದಿಸಿದರು.